Gruha Lakshmi Scheme: ಬರೀ ರಾಜ್ಯ ಅಷ್ಟೇ ಅಲ್ಲ, ವಿವಿಧ ರಾಜ್ಯಗಳಿಂದ ಮಹಿಳೆಯರ ಆಗಮನ

ಮೈಸೂರು, ಆಗಸ್ಟ್‌, 30: ಇಂದು ಕಾಂಗ್ರೆಸ್‌ ಸರ್ಕಾರ ರಾಜ್ಯಾದ್ಯಂತ ಗೃಹಲಕ್ಷ್ಮೀ ಯೋಜನೆ ಚಾಲನೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬೃಹತ್‌ ಕಾರ್ಯಕ್ರಮವನ್ನು ಮಾಡಲಾಗುತ್ತಿದ್ದು, ಇದಕ್ಕೆ ಬರೀ ರಾಜ್ಯದ ಮಹಿಳೆಯರಲ್ಲದೆ ಇನ್ನಿತರ ರಾಜ್ಯಗಳಿಂದಲೂ ಮಹಿಳೆಯರು ಆಗಮಿಸಿ ಗಮನ ಸೆಳೆದಿದ್ದಾರೆ. ಹಾಗಾದಾರೆ ಯಾವೆಲ್ಲ ರಾಜ್ಯದಗಳಿಂದ ರಾಜ್ಯದ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ ಎನ್ನುವ ವಿವರವನ್ನು ಇಲ್ಲಿ ತಿಳಿಯಿರಿ.

ಕೇವಲ ಕರ್ನಾಟಕದಿಂದ ಮಾತ್ರವಲ್ಲದೆ ದಕ್ಷಿಣ ಭಾರತದ ತಮಿಳುನಾಡು, ತೆಲಂಗಾಣ, ಆಂಧ್ರ ಮತ್ತು ಕೇರಳದಿಂದಲೂ ಸಾವಿರಾರು ನಾರಿಯರು, ಗೃಹಿಣಿಯರು "ಗೃಹಲಕ್ಷ್ಮಿ" ಉದ್ಘಾಟನೆಗೆ ಸಾಕ್ಷಿಯಾಗಿದ್ದಾರೆ. ಶ್ರಮಿಕ ವರ್ಗದ, ದುಡಿಯುವ ವರ್ಗಗಳ ಮಹಿಳೆಯರು, ಮಹಿಳಾ ಕಾರ್ಮಿಕರು ಮಹಿಳಾ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ಸ್ವಯಂ ಸ್ಫೂರ್ತಿಯಿಂದ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಬಂದಿರುವುದು ವಿಶೇಷವಾಗಿದೆ.

Gruha Lakshmi Scheme: Women came from other states for Gruha Lakshmi Scheme launch program

ಕಾಲೇಜು ವಿದ್ಯಾರ್ಥಿನಿಯರು ಕೂಡ ಅಪಾರ ಸಂಖ್ಯೆಯಲ್ಲಿ ಬಂದು ತಮ್ಮ ವಿದ್ಯಾಭ್ಯಾಸಕ್ಕೆ ಬಹಳ ದೊಡ್ಡ ನೆರವಾದ ಶಕ್ತಿ ಯೋಜನೆ ಮತ್ತು ಗೃಹಲಕ್ಷ್ಮಿ ಯೋಜನೆ ಕೊಟ್ಟಿದ್ದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮಾರ್ಗದುದ್ದಕ್ಕೂ ಅಭಿನಂದನೆ, ಧನ್ಯವಾದ ಹೇಳುವ ಬ್ಯಾನರ್‌ಗಳನ್ನು ಹಿಡಿದು ಸಮಾವೇಶಕ್ಕೆ ಆಗಮಿಸಿದ್ದಾರೆ. ಹೀಗೆ ಮಹಾರಾಜ ಗ್ರೌಂಡ್‌ನಲ್ಲಿ ಮಹಿಳೆಯರು ತುಂಬಿ ತುಳುಕುತ್ತಿದ್ದಾರೆ.

ಸಾವಿರಾರು ಸಂಖ್ಯೆಯ ವಿದ್ಯಾರ್ಥಿನಿಯರು ಮತ್ತು ಗೃಹಿಣಿಯರು ಪಿಂಕ್ ಬಣ್ಣದ ಧಿರಿಸಿನಲ್ಲಿ ಆಗಮಿಸಿ ಸಮಾವೇಶದ ಮೈದಾನದಲ್ಲಿ ಗಮನ ಸೆಳೆದಿದ್ದಾರೆ.
ಇನ್ನು ಸರ್ಕಾರದ ಯೋಜನೆಗಳ ಚರಿತ್ರೆಯಲ್ಲಿ ಏಕ ಕಾಲಕ್ಕೆ ಪ್ರತೀ ತಿಂಗಳು ಒಂದೂವರೆ ಕೋಟಿಗೂ ಹೆಚ್ಚು ಮಹಿಳೆಯರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸುವ ಚಳವಳಿಯ ಚೈತನ್ಯ ಪಡೆದುಕೊಂಡ ಕಾರ್ಯಕ್ರಮ ಇದಾಗಿದೆ.

ಪಿಂಕ್ ಬಣ್ಣದಲ್ಲಿ ಕಂಗೊಳಿಸಿದ ವೇದಿಕೆ

ವೇದಿಕೆಯುದ್ದಕ್ಕೂ ಮೇಲ್ಬಾಗದಲ್ಲಿ ತ್ರಿವರ್ಣ ಮತ್ತು ಪಿಂಕ್ ಕಾಂಬಿನೇಷನಲ್ಲಿ ಅಲಂಕರಿಸಲಾಗಿದೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮತ್ತು ಮಹಿಳಾ ಕಾರ್ಯಕರ್ತರ ಪಡೆ ಪಿಂಕ್ ಧಿರಿಸಿನಲ್ಲಿತ್ತು. ಅಲ್ಲದೆ ವೇದಿಕೆಯಲ್ಲಿದ್ದ ಕುರ್ಚಿಗಳಿಗೆ ಪಿಂಕ್ ಹೊದಿಕೆ, ಐಡಿ ಕಾರ್ಡ್, ಟ್ಯಾಗ್‌ಗಳು, ನೀರಿನ ಬಾಟಲ್ ಕೂಡ ಪಿಂಕ್ ಬಣ್ಣದ್ದಾಗಿವೆ.

ಮಹಿಳಾ ಕಾರ್ಯಕರ್ತೆಯರು ಪಿಂಕ್ ಬಣ್ಣದ ರಾಖಿಯನ್ನು ರಾಹುಲ್ ಗಾಂಧಿ ಅವರಿಗೆ ಕಟ್ಟುವ ಮೂಲಕ ರಕ್ಷಾಬಂಧನ ಹಬ್ಬವವನ್ನು ಸಂಭ್ರಮಿಸಿದರು.

ಇನ್ನು ರಾಹುಲ್ ಗಾಂಧಿಯವರು ತಮ್ಮ ಭಾಷಣದಲ್ಲಿ ರಾಖಿ ಕಟ್ಟಿಸಿಕೊಂಡಿದ್ದನ್ನು ಪ್ರಸ್ತಾಪಿಸಿದರು. "ನಾನೊಬ್ಬ ಸಹೋದರನಾಗಿ ನಿಮಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತೇನೆ. ನಮ್ಮ ಸರ್ಕಾರ ಹೇಗಿದ್ದರೂ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿದೆ," ಎಂದು ಮೆಚ್ಚುಗೆ ಸೂಚಿಸಿದರು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+