ಹಣಕ್ಕಾಗಿ ಹೂತಿದ್ದ ಹೆಣ ತೆಗೆದು ಹೆಬ್ಬೆಟ್ಟು ಒತ್ತಿಸಿಕೊಂಡ ಜನ!
ಮೈಸೂರು, ಫೆಬ್ರವರಿ 24 : ಹಣಕ್ಕಾಗಿ ನಮ್ಮ ಜನ ಸತ್ತವರನ್ನೂ ಸಹ ಬಿಡುವುದಿಲ್ಲ. ಸತ್ತ ವ್ಯಕ್ತಿಯ ಸಹಿಗಾಗಿ ಸ್ಮಶಾನದಲ್ಲಿ ಹೂತಿದ್ದ ಹೆಣವನ್ನೇ ಹೊರತೆಗೆದು ಹೆಬ್ಬೆಟ್ಟು ಒತ್ತಸಿಕೊಂಡ ಘಟನೆ ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ನಡೆದಿದೆ!
ಪಟ್ಟಣದ ಅಮೃತ ರಿಯಲ್ ಎಸ್ಟೇಟ್ ಉದ್ಯಮಿ ಶ್ರೀಕಂಠ ಪ್ರಸಾದ್ ಅಲಿಯಾಸ್ ಹಕ್ಕಿ ನಿನ್ನೆ ಹೃದಯಾಘಾತದಿಂದ ಸಾವನ್ನಪ್ಪಿದರು. ಈ ಹಿನ್ನೆಲೆ ಹೆಜ್ಜೆಗೆ ಸೇತುವೆಯ ಸ್ಮಶಾನದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯ ಮೃತದೇಹವನ್ನು ಶವ ಸಂಸ್ಕಾರ ಮಾಡಲಾಗಿತ್ತು. ಆದರೆ ತಡರಾತ್ರಿ ಶ್ರೀಕಂಠ ಪ್ರಸಾದ್ ಮೃತ ದೇಹವನ್ನು ಕಿಡಿಗೇಡಿಗಳು ಹೊರತೆಗೆದಿದ್ದಾರೆ ಎನ್ನಲಾಗಿದೆ.

ಮೃತಪಟ್ಟ ರಿಯಲ್ ಎಸ್ಟೇಟ್ ಉದ್ಯಮಿ ಜೊತೆ ಅವರ ಜೊತೆಗೆ ಕೆಲ ವ್ಯಕ್ತಿಗಳಿಗೆ ಕಳೆದ ಕೆಲ ದಿನಗಳ ಹಿಂದೆ ಭೂಮಿ ವಿಚಾರಕ್ಕೆ ಸಂಬಂಧಪಟ್ಟ ವ್ಯವಹಾರ ನಡೆದಿತ್ತು. ವ್ಯವಹಾರಕ್ಕೆ ಸಂಬಂಧಿಸಿದಂತೆ ಪತ್ರಗಳಿಗೆ ಮೃತ ರಿಯಲ್ ಎಸ್ಟೇಟ್ ಉದ್ಯಮಿಯ ಸಹಿ ಹಾಕಿರಲಿಲ್ಲ ಎನ್ನಲಾಗಿದೆ. ಅವರ ಹೆಬ್ಬೆಟ್ಟಿನ ಸಹಿಗಾಗಿ ಹೂತ್ತಿದ್ದ ಮೃತದೇಹವನ್ನು ದುಷ್ಕರ್ಮಿಗಳು ಹೊರತೆಗೆದ ಆರೋಪ ಕೇಳಿ ಬಂದಿದೆ. ಕುಟುಂಬಸ್ಥರ ಮತ್ತು ನಂಜನಗೂಡು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications