ಮೈಸೂರು ಯುವರಾಜನಿಗೆ ತಾತನ ಹೆಸರಿಡಲು ಒತ್ತಾಯ

ಮೈಸೂರು, ಡಿಸೆಂಬರ್ 11 : ದಿ. ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್, ಸಂಸ್ಮರಣೆ ಪ್ರಯುಕ್ತ ನಂಜನಗೂಡು ರಸ್ತೆಯ ಮಧುವನದಲ್ಲಿರುವ ಶ್ರೀಕಂಠದತ್ತ ಒಡೆಯರ್ ಸಮಾಧಿಗೆ ಮೈಸೂರಿನ ಅರಸು ಮಂಡಳಿ ಸಭಾ ಹಾಗೂ ಸಾರ್ವಜನಿಕರಿಂದ ಶ್ರೀಕಂಠ ದತ್ತ ಒಡೆಯರ್ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸಿ ಗೌರವ ಸಲ್ಲಿಸಲಾಯಿತು.

ಶ್ರೀಕಂಠ ದತ್ತ ಒಡೆಯರ್ ತಮ್ಮ ಕೊನೇ ದಿನಗಳನ್ನು ನ್ಯಾಯಾಲಯಕ್ಕೆ ಅಲೆದು ಜೀವನ ಸವೆಸಿದರು. ಆದರೆ, ಸರ್ಕಾರ ಮಾತ್ರ ಯಾವುದೇ ಸಹಾಯ ಮಾಡಲಿಲ್ಲ. ಒಂದು ಕಡೆ ನೋವು ಮತ್ತೊಂದು ಕಡೆ ಸಂತಸವಿದೆ. ಅವರ ಮನೆತನದವರು ಮಾಡಿದ ಸೇವೆಯನ್ನು ಪರಿಗಣಿಸಿ ಮೈಸೂರಿನ ಪ್ರಮುಖ ರಸ್ತೆಗಳಿಗೆ ಹಾಗೂ ಮೈಸೂರು ವಿವಿಗೆ ರಾಜರ ಹೆಸರಿಡಬೇಕು ಎಂದು ಅರಸು ಮಂಡಳಿ ಸಭಾದ ಕಾಂತರಾಜೇ ಅರಸ್ ಸರ್ಕಾರವನ್ನು ಒತ್ತಾಯಿಸಿದರು.

Grandpa name for Mysuru prince?

ಮಗುವಿಗೂ ತಾತನ ಹೆಸರಿಡಲು ಒತ್ತಾಯ :
ಇತ್ತ ಆರು ದಶಕಗಳ ಬಳಿಕ ರಾಜಮನೆತನಕ್ಕೆ ಪುತ್ರ ಸಂತಾನವಾಗಿದೆ. ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಶಿಕಾ ಒಡೆಯರ್ ದಂಪತಿಗೆ ಗಂಡು ಮಗು ಜನಿಸಿದೆ. ಶ್ರೀಕಂಠ ದತ್ತ ನರಸಿಂಹ ರಾಜ ಒಡೆಯರ್ ನಿಧನರಾಗಿ ಇಂದಿಗೆ ನಾಲ್ಕು ವರ್ಷವಾಗಿದೆ. ಹಾಗಾಗಿ ತಾತನ ನೆನಪಿಗಾಗಿ ಅವರ ಹೆಸರಿಡಬೇಕೆಂದು ಒತ್ತಾಯಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+