ವಿಷಪ್ರಸಾದ ಸೇವನೆ ಪ್ರಕರಣ: ಆರೋಗ್ಯ ಸಚಿವರು ಹೇಳಿದ್ದೇನು?
ಮೈಸೂರು, ಡಿಸೆಂಬರ್ 16: ನಗರದ ಅಪೋಲೋ ಆಸ್ಪತ್ರೆಯಲ್ಲಿ 7 ರೋಗಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನು ಉಳಿಸಿಕೊಳ್ಳುವ ಕೆಲಸ ಆಸ್ಪತ್ರೆ ಮಾಡುತ್ತಿದೆ ಎಂದು ಆರೋಗ್ಯ ಸಚಿವ ಶಿವಾನಂದ್ ಪಾಟೀಲ್ ತಿಳಿಸಿದ್ದಾರೆ.
ಸುಳ್ವಾಡಿ ಗ್ರಾಮದಲ್ಲಿ ವಿಷಪ್ರಸಾದ ಸ್ವೀಕರಿಸಿ ಭಕ್ತರು ಸಾವನ್ನಪ್ಪಿದ ಪ್ರಕರಣ ಸಂಬಂಧ ಮೈಸೂರಿನ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡ ಆರೋಗ್ಯ ಸಚಿವರು, ಮೃತರ ಕುಟುಂಬಕ್ಕೆ ಸರ್ಕಾರದಿಂದ ಈಗಾಗಲೇ 5 ಲಕ್ಷ ಪರಿಹಾರ ನೀಡಲಾಗಿದೆ. ಕೆಪಿಸಿಸಿ ಕಡೆಯಿಂದಲೂ ಮೃತರ ಕುಟುಂಬಕ್ಕೆ ತಲಾ 1ಲಕ್ಷ ನೀಡಲಾಗಿದೆ. ಅಗತ್ಯವಿದ್ದರೆ ಹೆಚ್ಚಿನ ನೆರವು ನೀಡಲಾಗುತ್ತದೆ.

ಸರ್ಕಾರ ಮುಲಾಜಿಲ್ಲದೆ ಮೃತರ ಕುಟುಂಬಸ್ಥರಿಗೆ ಸಹಾಯ ಮಾಡಲಿದೆ. ಸರ್ಕಾರ ನಿಮ್ಮ ಜೊತೆ ಇದೆ ಎಂದು ಭರವಸೆ ನೀಡಿದರು. ವಿಷದ ಅಂಶ ದೇಹದೊಳಗೆ ಸೇರಿದ ಹಿನ್ನಲೆಯಲ್ಲಿ ಅಸ್ವಸ್ಥರ ಸಂಖ್ಯೆ ಹೆಚ್ಚಾಗಿದೆ. ಎಲ್ಲಾ ಆಸ್ಪತ್ರೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದೇನೆ. ಪೊಲೀಸ್ ತನಿಖೆ ಆದ ಮೇಲೆ ಸಂಪೂರ್ಣ ಮಾಹಿತಿ ಲಭ್ಯವಿದ್ದು, 54 ಆಂಬ್ಯುಲೆನ್ಸ್ ಸೇವೆ ನೀಡುತ್ತೇವೆ ಎಂದರು.
ಆರೋಗ್ಯ ಸಚಿವರಿಗೆ ಸಚಿವ ಜಿಟಿ ದೇವೇಗೌಡ, ಸಚಿವ ಪುಟ್ಟರಂಗಶೆಟ್ಟಿ ಸಂಸದ ಧ್ರುವನಾರಾಯಣ್, ಕೋಟಾ ಶ್ರೀನಿವಾಸ್ ಸಾಥ್ ನೀಡಿದರು.












Click it and Unblock the Notifications