ಮೈಸೂರು ಜಿಲ್ಲಾಧಿಕಾರಿ ವರ್ಗಾವಣೆ ರದ್ದು : ರಾಜ್ಯ ಸರ್ಕಾರ ಆದೇಶ
ಮೈಸೂರು, ಆಗಸ್ಟ್ 22 : ಮೈಸೂರು ಜಿಲ್ಲಾಧಿಕಾರಿ ಕಾರ್ಯ ನಿರ್ವಹಿಸುತ್ತಿರುವ ಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ವರ್ಗಾವಣೆ ಆದೇಶವನ್ನು ರದ್ದು ಮಾಡುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಈ ಬಾರಿಯೂ ನಾಡಹಬ್ಬವು ಅವರ ಸಾರಥ್ಯದಲ್ಲಿ ಮುಂದುವರೆಯಲಿದೆ.
ಇಂದು ಮಧ್ಯಾಹ್ನ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಅವರನ್ನು ವರ್ಗಾವಣೆಗೊಳಿಸಿ ಆದೇಶಹೊರಡಿಸಿದ್ದರು. ಇದಕ್ಕೆ ಮೈಸೂರು ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿದ್ದರು. ಸರ್ಕಾರ ಧೋರಣೆಯನ್ನು ಸಹ ಖಂಡಿಸಿದ್ದರು.

ದಸರಾ ಮಹೋತ್ಸವ ಹತ್ತಿರವಿರುವಾಗಲೇ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ವರ್ಗಾವಣೆ ಮಾಡಿರುವ ಹಿನ್ನೆಲೆ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಸಚಿವ ಆರ್.ಅಶೋಕ್, ಈಗಿರುವ ಜಿಲ್ಲಾಧಿಕಾರಿಗಳೇ ದಸರಾ ಕೆಲಸ ಪ್ರಾರಂಭ ಮಾಡಿದ್ದಾರೆ.
ಅವರನ್ನು ಮೈಸೂರಿನಲ್ಲೇ ಉಳಿಸಿಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ ಎಂದು ಸಹ ತಿಳಿಸಿದ್ದರು.
ಸಚಿವ ಅಶೋಕ್ ರವರ ಒತ್ತಾಯದ ಹಿನ್ನೆಲೆ ವರ್ಗಾವಣೆ ಆದೇಶವನ್ನು ರದ್ದುಗೊಳಿಸಿದ್ದಾರೆ ಎನ್ನಲಾಗಿದೆ.











Click it and Unblock the Notifications