ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಹುಲ್ ಅವರ ಮಿದುಳು ಸುರ್ಜೇವಾಲ-ಕಪಿಲ್‍ಸಿಬಲ್:ಗೋ ಮಧುಸೂದನ್

|
Google Oneindia Kannada News

ಮೈಸೂರು, ಮಾರ್ಚ್ 24: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಯಡಿಯೂರಪ್ಪ ಮೇಲೆ ಸುಳ್ಳು ಆರೋಪ ಮಾಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್‌ ಸುರ್ಜೇವಾಲಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಾಗುವುದು ಎಂದು ಬಿಜೆಪಿ ರಾಜ್ಯ ವಕ್ತಾರ ಗೋ ಮಧುಸೂದನ್ ಹೇಳಿದರು.

ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಬಿಜೆಪಿ ವರಿಷ್ಠರಿಗೆ 1,800 ಕೋಟಿ ಕಾಣಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ವಿರುದ್ಧ ಚುನಾವಣಾ ಆಯೋಗಕ್ಕೂ ದೂರು ನೀಡಲಾಗುವುದು. ಸುರ್ಜೇವಾಲಾ ಅವರು ಶೋಭಾ ಕರಂದ್ಲಾಜೆ ಅವರಿಗೂ ಮಾನಹಾನಿ ಉಂಟಾಗುವಂತಹ ಹೇಳಿಕೆ ನೀಡಿದ್ದಾರೆ. ಆದ್ದರಿಂದ ದೇಶದ ಮಹಿಳೆಯರ, ರಾಜ್ಯದ ಜನರ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಬಿಜೆಪಿ ಕಾನೂನು ಹೋರಾಟ ನಡೆಸಲಿದೆ ಎಂದರು.

ಪ್ರೊ.ಕೆ.ಎಸ್.ರಂಗಪ್ಪ-ಗೋ.ಮಧುಸೂದನ್ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧಪ್ರೊ.ಕೆ.ಎಸ್.ರಂಗಪ್ಪ-ಗೋ.ಮಧುಸೂದನ್ ಬಹಿರಂಗ ಚರ್ಚೆಗೆ ವೇದಿಕೆ ಸಿದ್ಧ

ಸೋನಿಯಾಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ನಿತ್ಯ ಜಾರಿ ನಿರ್ದೇ ಶನಾಲಯ(ಇಡಿ)ದ ಮುಂದೆ ಹಾಜರಾಗುತ್ತಿದ್ದಾರೆ. ಏಳೆಂಟು ಗಂಟೆಗಳ ಕಾಲ ವಿಚಾರಣೆಗೆ ಒಳಪಡುತ್ತಿದ್ದಾರೆ. ಹೆಲಿಕಾಪ್ಟರ್ ಡೀಲ್ ದಾರರು ಹೇಳಿಕೆ ನೀಡುತ್ತಿದ್ದಾರೆ. ಈ ಪ್ರಕರಣವನ್ನು ಮರೆಮಾಚಿಕೊಳ್ಳುವ ಉದ್ದೇಶದೊಂದಿಗೆ ನೀಚತನದಿಂದ ಈ ಡೈರಿ ಹುಟ್ಟು ಹಾಕಿದ್ದಾರೆ. ಸುಳ್ಳು ಡೇರಿಯಲ್ಲಿ ಆರ್ಥಿಕ ಆರೋಪದ ಜೊತೆಗೆ ಗೌರವಾನ್ವಿತ ಮಹಿಳಾ ರಾಜಕಾರಣಿ ಶೋಭಾ ಕರಂದ್ಲಾಜೆ ಅವರ ಚಾರಿತ್ರ್ಯವಧೆ ಮಾಡಿದ್ದಾರೆ.

Go Madhusudan will filed a defamation case against Ranjeet Singh

ರಾವಣ, ಕಂಸ, ದುಶ್ಯಾಸನ ವಂಶಕ್ಕೆ ಸೇರಿದ ಕಾಂಗ್ರೆಸ್ ನವರ ಆರೋಪವನ್ನು ಪರಮಾತ್ಮ ಕೃಷ್ಣನ ಹೆಸರುಳ್ಳ ಬಾಲಕೃಷ್ಣ ಅವರೇ ಅಳಿಸಿಹಾಕಿದ್ದಾರೆ. ಈ ಮೂಲಕ ಬಿಜೆಪಿಯ ನೈತಿಕತೆಯನ್ನು ಎತ್ತಿ ಹಿಡಿದಂತಾಗಿದೆ. ಅತ್ಯಂತ ಜವಾಬ್ದಾರಿಯುತವಾಗಿ ನಡೆದುಕೊಂಡಿರುವ ಬಾಲಕೃಷ್ಣ ಅವರನ್ನು ಅಭಿನಂದಿಸುತ್ತೇನೆ ಎಂದು ಗೋ ಮಧುಸೂದನ್ ತಿಳಿಸಿದರು.

 ಕಾಂಗ್ರೆಸ್-ಜೆಡಿಎಸ್ ಒಲೆಯೇ ತೂತು, ಆ ಒಲೆಯಲ್ಲಿ ಬೆಂಕಿಯೂ ಇಲ್ಲ: ಗೋ. ಮಧುಸೂದನ್ ಕಾಂಗ್ರೆಸ್-ಜೆಡಿಎಸ್ ಒಲೆಯೇ ತೂತು, ಆ ಒಲೆಯಲ್ಲಿ ಬೆಂಕಿಯೂ ಇಲ್ಲ: ಗೋ. ಮಧುಸೂದನ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕೇವಲ ದೇಹವಷ್ಟೇ. ಅವರ ಮಿದುಳು ಸುರ್ಜೇವಾಲ ಹಾಗೂ ಕಪಿಲ್‍ಸಿಬಲ್ ಆಗಿದ್ದಾರೆ. ಇವರಿಬ್ಬರು ಹೇಳಿಕೊಟ್ಟಿದ್ದು, ಬರೆದು ಕೊಟ್ಟಿದ್ದನ್ನು ರಾಹುಲ್ ಪ್ರಸ್ತುತಪಡಿಸುತ್ತಾರೆ ಎಂದು ಟೀಕಿಸಿದರು.

 ರಾಮಮಂದಿರ ಬಳಿಕ ಮಥುರಾ ಕೃಷ್ಣ, ಕಾಶಿ ವಿಶ್ವನಾಥ ಬಿಡುಗಡೆ: ಗೋ.ಮ. ರಾಮಮಂದಿರ ಬಳಿಕ ಮಥುರಾ ಕೃಷ್ಣ, ಕಾಶಿ ವಿಶ್ವನಾಥ ಬಿಡುಗಡೆ: ಗೋ.ಮ.

ಆದಾಯ ತೆರಿಗೆ ಇಲಾಖೆ ಆಯುಕ್ತರು ಡೇರಿ ಸಂಬಂಧ ಪ್ರತಿಕ್ರಿಯಿಸಿ, ಡೈರಿಗೂ ಯಡಿಯೂರಪ್ಪ ಅವರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ ಎಂದ ಮಧುಸೂದನ್, ಆ ಮೂಲಕ ಕಾಂಗ್ರೆಸ್ ನಾಯಕರ ಬಾಯಿಗೆ ಫೆವಿಕಾಲ್ ಹಾಕಿದ್ದಾರೆ. ಅವರ ಬಾಯಿಗೆ ಮಾತ್ರವಲ್ಲ, ನವದ್ವಾರಗಳಿಗೂ ಫೆವಿಕಾಲ್ ಹಾಕಬೇಕು ಎಂದು ವಾಗ್ದಾಳಿ ನಡೆಸಿದರು.

English summary
BJP's spokesperson Go Madhusudan will filed a defamation case against Ranjeet Singh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X