ಆ.13ಕ್ಕೆ ದಸರಾ ಗಜಪಯಣಕ್ಕೆ ಚಾಲನೆ
ಮೈಸೂರು, ಆ.4 : ಈ ಬಾರಿಯ ಮೈಸೂರು ದಸರಾಕ್ಕೆ ಗಜಪಯಣದ ಮೂಲಕ ಆ.13ರಂದು ಅಧಿಕೃತವಾಗಿ ಚಾಲನೆ ದೊರೆಯಲಿದೆ. ಹುಣಸೂರು ತಾಲೂಕಿನ ವೀರನಹೊಸಹಳ್ಳಿಯಲ್ಲಿ ಗಜಪಯಣ ಆರಂಭವಾಗಲಿದ್ದು, ಆ.16ರಂದು ಮೊದಲ ಗುಂಪಿನ ಆನೆಗಳ ತಂಡ ಮೈಸೂರಿಗೆ ಆಗಮಿಸಲಿದೆ.
ಮೈಸೂರಿನಲ್ಲಿ ಮಾತನಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್, ಆ.13ರಂದು ಹುಣಸೂರಿನಲ್ಲಿ ಗಜಪಯಣಕ್ಕೆ ಚಾಲನೆ ನೀಡಲಾಗುತ್ತಿದೆ. ಆ.16ರಂದು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಆನೆಗಳನ್ನು ಸ್ವಾಗತಿಸಲಾಗುವುದು ಎಂದು ಹೇಳಿದ್ದಾರೆ.

ವಿಶ್ವಪ್ರಸಿದ್ಧ ಮೈಸೂರು ದಸರಾದಲ್ಲಿ ಜಂಬೂಸವಾರಿ ಹೊರುವ ಅರ್ಜುನ ಸೇರಿದಂತೆ ಮೊದಲ ತಂಡದಲ್ಲಿ ಆರು ಆನೆಗಳು ಆ.16ರಂದು ಮೈಸೂರಿಗೆ ತಲುಪಲಿವೆ. ಮೊದಲ ತಂಡದಲ್ಲಿ ಅರ್ಜುನ (56), ಬಲರಾಮ (58), ಅಭಿಮನ್ಯು (51), ಮೇರಿ (55), ಸರಳ (55), ಗಜೇಂದ್ರ (54) ಆನೆಗಳು ಮೈಸೂರಿಗೆ ಆಗಮಿಸಿಲಿವೆ. ಎರಡನೇ ತಂಡದಲ್ಲಿ ಉಳಿದ ಎಂಟು ಆನೆಗಳು ಮೈಸೂರಿಗೆ ಆಗಮಿಸುತ್ತವೆ. [ದಸರಾ ಫಲಪುಷ್ಪ ಪ್ರದರ್ಶನ ಎಲ್ಲಿ]
ಅರ್ಜುನನ ಜೊತೆಗೆ ಅಂಬಾರಿ ಹೊರಲು ಬಲರಾಮ ಮತ್ತು ಗಜೇಂದ್ರನಿಗೆ ಸಹ ತಾಲೀಮು ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆ.13ಕ್ಕೆ ಮೊದಲ ಹಂತದ ಗಜಪಯಣಕ್ಕೆ ವೀರನಹೊಸಳ್ಳಿ ಬಳಿ ಚಾಲನೆ ದೊರೆಯಲಿದೆ. ಮೂರು ದಿನ ನಂತರ ಮೈಸೂರಿಗೆ ಆನೆಗಳು ಆಗಮಿಸಲಿವೆ.
ಕಳೆದ ಬಾರಿ ಬಳ್ಳೆಯ ಕ್ಯಾಂಪ್‌ನಲ್ಲಿದ್ದ ಆನೆಗಳನ್ನು ಈ ಬಾರಿ ಮತ್ತಿಗೋಡು ಶಿಬಿರಕ್ಕೆ ಸ್ಥಳಾಂತರಿಸಿ ಆರೈಕೆ ಮಾಡಲಾಗುತ್ತಿದೆ. ದಸರಾ ಮುಗಿದ ಬಳಿಕ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪುಂಡಾನೆಗಳನ್ನು ಪಳಗಿಸಲು ಈ ಆನೆಗಳನ್ನು ಕರೆದುಕೊಂಡು ಹೋಗಲಾಗಿತ್ತು. ಸದ್ಯ ಒಂದು ಅವುಗಳ ಆರೈಕೆ ಮಾಡಲಾಗುತ್ತಿದ್ದು, ದಸರಾ ಉತ್ಸವಕ್ಕೆ ಅವುಗಳನ್ನು ಸಜ್ಜುಗೊಳಿಸಲಾಗುತ್ತಿದೆ.











Click it and Unblock the Notifications