ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ರೈತರ ಸಾಲ ಮನ್ನಾ ಮಾಡುವುದು ಖಚಿತ: ಜಿ.ಟಿ.ಡಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಮೇ 30 : ಜಾ.ದಳ ಹಾಗೂ ಕಾಂಗೆಸ್ ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಆಗಿರುವ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವುದಂತೂ ಖಚಿತ ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಭರವಸೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ವೇಳೆ ಶ್ರಮಿಸಿದ ಪಕ್ಷದ ಕಾರ್ಯಕರ್ತರು, ಬೆಂಬಲಿಸಿದ ಮತದಾರರುಗಳಿಗೆ ಕೃತಜ್ಞತೆ ಸಲ್ಲಿಸಿದರು. ರೈತರ ಸಾಲ ಮನ್ನಾ ಮಾಡುವುದು ಖಚಿತ. ರೈತರು ದುಡುಕಿ ಆತ್ಮಹತ್ಯೆ ಮಾಡಿಕೊಳ್ಳಬಾರದು ಎಂದು ಮನವಿ ಮಾಡಿದರು.

Live : ತಿಂಗಳಿಗೊಮ್ಮೆ ರೈತರೊಂದಿಗೆ ಸಭೆ : ಕುಮಾರಸ್ವಾಮಿ Live : ತಿಂಗಳಿಗೊಮ್ಮೆ ರೈತರೊಂದಿಗೆ ಸಭೆ : ಕುಮಾರಸ್ವಾಮಿ

ಜಾತ್ಯತೀತತೆಯ ಉಳಿವಿಗಾಗಿ ಜಾ.ದಳ ಹಾಗೂ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿವೆ. ಕೋಮುವಾದಿಗಳು ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ನೆಮ್ಮದಿ, ಶಾಂತಿ ಹಾಳಾಗುವುದನ್ನು ತಪ್ಪಿಸುವ ಪ್ರಯತ್ನ ಇದಾಗಿದೆ. ಕಳೆದ ಚುನಾವಣೆಯಲ್ಲಿ ಜಾ.ದಳ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳ ನಡುವೆಯೇ ಪ್ಯೆಪೋಟಿ ಇತ್ತು.

G T Deve Gowda Said There is no disagreement with alliance government

ಈಗ ಎರಡು ಪಕ್ಷಗಳೂ ಜತೆಗೂಡಿ ಸರ್ಕಾರ ರಚಿಸಿ ಆಡಳಿತ ಮಾಡುತ್ತಿವೆ. ಇದರಲ್ಲಿ ತಪ್ಪೇನಿಲ್ಲ ಎಂದರು.

ರಾಜ್ಯದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿ ಹಾಗೂ ಜಾತ್ಯತೀತತೆಯ ಮೂಲ ಬೇರು ಈ ಎರಡೂ ಪಕ್ಷಗಳಲ್ಲಿ ಇರುವುದರಿಂದ ಸುಭದ್ರ ಸರ್ಕಾರ ಐದು ವರ್ಷಗಳೂ ಇರುವುದರಲ್ಲಿ ಅನುಮಾನ ಇಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಶಸ್ವಿನಿ ಆರೋಗ್ಯ ಯೋಜನೆ ಅಬಾಧಿತ: ಸಿಎಂ ಎಚ್‌ಡಿಕೆ ಪ್ರಕಟಯಶಸ್ವಿನಿ ಆರೋಗ್ಯ ಯೋಜನೆ ಅಬಾಧಿತ: ಸಿಎಂ ಎಚ್‌ಡಿಕೆ ಪ್ರಕಟ

ಜಾ.ದಳ ಹಾಗೂ ಕಾಂಗೆಸ್ ನ ಯಾರಿಗೂ ಅಸಮಾಧಾನವಾಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು. ಸಂಭಾವ್ಯ ಸಚಿವರ ಪಟ್ಟಿ ಎಂದು ಮಾಧ್ಯಮಗಳಲ್ಲಿ ಬರುತ್ತಿರುವ ಸುದ್ದಿಗಳಲ್ಲಿ ಹುರುಳಿಲ್ಲ. ಸಚಿವ ಸ್ಥಾನ ಯಾರಿಗೆ ಎನ್ನುವುದನ್ನು ಎಚ್.ಡಿ.ದೇವೇಗೌಡ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಚ್.ಡಿ. ಕುಮಾರಸ್ವಾಮಿ ನಿರ್ಧರಿಸುತ್ತಾರೆ. ವರಿಷ್ಠರ ತೀರ್ಮಾನವೇ ಅಂತಿಮ. ಇದಕ್ಕೆ ಎಲ್ಲರ ಸಮ್ಮತವೂ ಇರುತ್ತದೆ ಎಂದರು.

ಮೈಸೂರು ಭಾಗದಲ್ಲಿ ಐವರು ಜಾ.ದಳ ಶಾಸಕರಿದ್ದು ಯಾರಿಗೆ ಸಚಿವ ಸ್ಥಾನ ಸಿಗುತ್ತದೆ ಎನ್ನುವುದು ಇನ್ನೂ ಖಚಿತವಾಗಿಲ್ಲ. ನನಗೆ ಸಿಗದಿದ್ದರೂ ಪಕ್ಷ ತೊರೆದು ಹೋಗುವ ಪ್ರಮೆಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಜಿ.ಟಿ.ಡಿಗೆ ಒಲಿಯಲಿದೆಯೇ ಮೈಸೂರು ಉಸ್ತುವಾರಿ ಸಚಿವ ಸ್ಥಾನ? ಜಿ.ಟಿ.ಡಿಗೆ ಒಲಿಯಲಿದೆಯೇ ಮೈಸೂರು ಉಸ್ತುವಾರಿ ಸಚಿವ ಸ್ಥಾನ?

ಸಚಿವ ಸ್ಥಾನಕ್ಕಾಗಿ ಕಚ್ಚಾಡುವ ಮಾತೇ ಇಲ್ಲ. ಈ ಚುನಾವಣೆ ಎಲ್ಲರಿಗೂ ಸರಿಯಾದ ಪಾಠ ಕಲಿಸಿದೆ. ಸರ್ಕಾರ ಬೀಳಿಸುವುದಕ್ಕೆ ಯಾರೂ ಅವಕಾಶ ಕೊಡುವುದಿಲ್ಲ ಎಂದು ನುಡಿದರು.
ವಿದೇಶದಲ್ಲಿರುವ ಕಪ್ಪು ಹಣ ತಂದು ಪ್ರತಿಯೊಬ್ಬರ ಖಾತೆಗೆ ತಲಾ ₹ 15 ಲಕ್ಷ ಜಮಾ ಮಾಡುವುದಾಗಿ ಹೇಳಿ ನಾಲ್ಕು ವರ್ಷಗಳು ಕಳೆದಿವೆ.

ಎಷ್ಟು ಜನರ ಖಾತೆಗೆ ಜಮಾ ಆಗಿದೆ? ಮೊದಲು ಬಿಜೆಪಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿ. ಆ ಬಳಿಕ ನಮ್ಮನ್ನು ಪ್ರಶ್ನೆ ಮಾಡಲಿ ಎಂದು ತಿರುಗೇಟು ನೀಡಿದರು.

ಭವಾನಿ ರೇವಣ್ಣ ಮತ್ತು ನಾನು ಅಕ್ಕ ತಮ್ಮನ ರೀತಿಯಲ್ಲಿದ್ದೇವೆ. ಅವರು ನನ್ನ ವಿರುದ್ಧವಾಗಿ ಏನನ್ನೂ ಹೇಳಿಲ್ಲ. ಅವರಿಗೆ ನನ್ನ ಮೇಲೆ ಪ್ರೀತಿಯಿದೆ. ಕೆ.ಆರ್‌.ನಗರ ತಾಲೂಕಿನಲ್ಲಿ ಪಕ್ಷದಲ್ಲಿದ್ದ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಅವರು ದೂರ ಮಾಡಿದ್ದರಿಂದಲೇ ನನಗೆ ಗೆಲುವು ಸಾಧ್ಯವಾಯಿತು ಎಂದರು.

English summary
Chamundeshwari constituency G T Deve Gowda promised that Kumaraswamy, chief minister of the coalition government be sure to waive farmers' debt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X