ಅಮ್ಮನಿಂದ ತಪ್ಪಿಸಿಕೊಂಡ ಆನೆಮರಿ ಆರೈಕೆ ಮಾಡಿದ ಅರಣ್ಯ ಇಲಾಖೆ

ಮೈಸೂರು, ಫೆಬ್ರವರಿ 06: ಆನೆಗಳ ಗುಂಪಿನಿಂದ ಅಕಸ್ಮಾತ್ ಆಗಿ ಬೇರ್ಪಟ್ಟಿರುವ ಪುಟ್ಟ ಆನೆ ಮರಿಯೊಂದು ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ಘಟನೆ ಬುಧವಾರ ನಡೆದಿದೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳಿಯಿರುವ ವೀರನಹೊಸಹಳ್ಳಿ ಅರಣ್ಯ ಪ್ರದೇಶದಲ್ಲಿ ಆಹಾರ ಅರಸಿ ತಾಯಿ ಆನೆಯೊಂದಿಗೆ ಬಂದ ಮರಿಯೊಂದು ಗುಂಪಿನಿಂದ ಬೇರ್ಪಟ್ಟಿತ್ತು.

ಈ ಆನೆ ಮರಿಗೆ ಅರಣ್ಯ ಇಲಾಖೆ ಸಿಬ್ಬಂದಿ ಆರೈಕೆ ಮಾಡಿದ್ದಾರೆ. ನಿನ್ನೆ ಮೂರು ಆನೆಗಳು ತಮ್ಮ ಮರಿಗಳೊಂದಿಗೆ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಿಂದ ವೀರನಹೊಸಹಳ್ಳಿಯ ಕಾಡಂಚಿನ ಗ್ರಾಮಗಳಿಗೆ ಆಹಾರ ಅರಸಿ ಬಂದಿದ್ದವು.

Forest Department Officials Protection To Elephant In Nagarahole

ಪುನಃ ವಾಪಸ್ ಕಾಡಿಗೆ ಹೋಗುವಾಗ ಕೇವಲ 15 ದಿನಗಳ ಗಂಡು ಆನೆ ಮರಿಯೊಂದು ಈ ಗುಂಪಿನಿಂದ ಬೇರ್ಪಟ್ಟಿತ್ತು,ಇದು ಭರತವಾಡಿ ಗ್ರಾಮದ ಬಳಿ ರಸ್ತೆಯಲ್ಲಿ ಒಂಟಿಯಾಗಿ ನಿಂತಿತ್ತು.

ಈ ಆನೆ ಮರಿಯನ್ನು ಕಂಡ ಭರತವಾಡಿ ಗ್ರಾಮಸ್ಥರು ತಕ್ಷಣ ಅರಣ್ಯ ಇಲಾಖೆಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಬಂದ ಅರಣ್ಯ ಅಧಿಕಾರಿಗಳು ಆನೆಮರಿಯನ್ನು ಆರೈಕೆ ಮಾಡಿದ್ದಾರೆ. ಬಳಿಕ ಅರಣ್ಯದ ಸಮೀಪಕ್ಕೆ ಬಿಟ್ಟು ತಾಯಿಯೊಂದಿಗೆ ಸೇರಿಕೊಳ್ಳಲಿದೆಯೇ ಎಂಬುದನ್ನು ನೋಡಲು ಕಾವಲು ಹಾಕಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+