ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Breaking; ಮೈಸೂರು ಜಿಲ್ಲೆಯ ಗ್ರಾಮವೊಂದರಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆ?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್‌, 13; ಕೇರಳದ ಕೊಲ್ಲಂ ಜಿಲ್ಲೆಯಲ್ಲಿ ಭಾರತದ ಮೊದಲ ಮಂಕಿಪಾಕ್ಸ್ ಪ್ರಕರಣ ಪತ್ತೆಯಾದ ನಾಲ್ಕು ತಿಂಗಳ ನಂತರ ಮೈಸೂರಿನಲ್ಲಿ ಮೊದಲ ಶಂಕಿತ ಮಂಕಿಪಾಕ್ಸ್​ ಪ್ರಕರಣ ಮಾದರಿ ವರದಿ ಆಗಿದೆ. ಜಿಲ್ಲೆಯ ಕೆ.ಆರ್ ​ನಗರದ ಗ್ರಾಮವೊಂದರ 12 ವರ್ಷದ ಬಾಲಕಿಯ ದೇಹದ ಮೇಲೆ ಬೊಬ್ಬೆಗಳು ಕಂಡಿವೆ. ಚಿಕಿತ್ಸೆ ಕೊಡಿಸಿದರೂ ಗುಣವಾಗದ ಹಿನ್ನೆಲೆ ಆಕೆಯನ್ನು ಮೈಸೂರಿನ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಬಾಲಕಿಯ ದೇಹದಲ್ಲಿ ಬೊಬ್ಬೆಗಳು ಇರುವುದನ್ನು ಗಮನಿಸಿಲಾಗಿದ್ದು, ಆಗ ಮಂಕಿಪಾಕ್ಸ್​ ಗುಣಲಕ್ಷಣ ಕಂಡು ಬಂದಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗಮನಕ್ಕೆ ತಂದಿದ್ದಾರೆ. ಮೈಸೂರಿನಲ್ಲಿ ಶಂಕಿತ ಮಂಕಿಪಾಕ್ಸ್ ಪ್ರಕರಣ ದಾಖಲಾಗಿದ್ದು, ಜಿಲ್ಲಾ ಆರೋಗ್ಯ ಇಲಾಖೆ ಎಲ್ಲೆಡೆ ಎಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ.

First case of monkeypox detected in village of Mysuru district?

ಮೈಸೂರಿಗರಿಗೆ ಮಂಕಿಪಾಕ್ಸ್‌ ವೈರಸ್‌ ಆತಂಕ?
ಜಿಲ್ಲೆಯಲ್ಲಿರುವ ಆಸ್ಪತ್ರೆ, ಕ್ಲಿನಿಕ್ ಹಾಗೂ ಮಕ್ಕಳ ಆಸ್ಪತ್ರೆಗೆ ಈ ಕಾಯಿಲೆ ಬಗ್ಗೆ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ. ಮಂಕಿಪಾಕ್ಸ್ ಗುಣಲಕ್ಷಣಗಳು ಕಂಡು ಬಂದರೆ ಕೂಡಲೇ ಮಾಹಿತಿ ನೀಡುವಂತೆ ಆರೋಗ್ಯ ಇಲಾಖೆ ಸೂಚನೆ ನೀಡಿದೆ. ''ಬಾಲಕಿಯೋರ್ವಳನ್ನು ಕ್ವಾರಂಟೈನ್‌ನಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದೆ. ಯಾವುದೇ ರೀತಿಯ ತೊಂದರೆ ಇಲ್ಲ,'' ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಚ್. ಪ್ರಸಾದ್ ತಿಳಿಸಿದರು.

First case of monkeypox detected in village of Mysuru district?

ಮಂಕಿಪಾಕ್ಸ್‌ ವೈರಸ್‌ನ ಲಕ್ಷಣಗಳು?
ಬಾಲಕಿಯನ್ನು ಪರಿಶೀಲಿಸಿದ ವೈದ್ಯರು ಮಂಕಿಪಾಕ್ಸ್ ಮಾದರಿ ಗುಣ ಲಕ್ಷಣಗಳು ಇರುವುದನ್ನು ಗಮನಿದ್ದಾರೆ. ನಂತರ ಆರೋಗ್ಯ ಇಲಾಖೆಗೆ ಈ ವಿಷಯವನ್ನು ತಿಳಿಸಿದ್ದಾರೆ. ಇಲಾಖೆಯವರು ಬಾಲಕಿಯ ದೇಹದ ರಕ್ತ ಮಾದರಿಯನ್ನು ಸಂಗ್ರಹಿಸಿ ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಮಂಕಿಪಾಕ್ಸ್ ಒಂದು ವೈರಸ್‌ನಿಂದ ಹರಡುವ ಕಾಯಿಲೆ ಆಗಿದ್ದು, ಸಕಾಲಕ್ಕೆ ಚಿಕಿತ್ಸೆ ಪಡೆದುಕೊಂಡರೆ ಗುಣಮುಖರಾಗಬಹುದು. ಇದು ಜ್ವರ, ಮುಖ, ಕೈ ಪಾದದ ಮೇಲೆ ಗುಳ್ಳೆಗಳು ಕಾಣಿಸಿಕೊಂಡು ದೇಹದ ಇತರ ಭಾಗಕ್ಕೆ ಹರಡುತ್ತವೆ. ಸೋಂಕಿತ ಪ್ರಾಣಿಗಳ ನಿಕಟ ಸಂಪರ್ಕದಿಂದಲೂ ಮಂಕಿಪಾಕ್ಸ್ ಹರಡಲಿದ್ದು, ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಆರೋಗ್ಯ ಇಲಾಖೆ ಸಲಹೆ ನೀಡಿದೆ.

English summary
12 year old girl in village of Mysore district diagnosed with monkeypox virus. Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X