ಟೈರ್ ಸ್ಫೋಟಗೊಂಡು ಹೊತ್ತಿ ಉರಿದ ಬಸ್; ಮೈಸೂರಿನ ಅಯ್ಯಪ್ಪ ಭಕ್ತರು ಪಾರು
ಮೈಸೂರು, ಫೆಬ್ರವರಿ 15: ಅಯ್ಯಪ್ಪನ ದರ್ಶನಕ್ಕೆ ತೆರಳಿದ್ದ ಬಸ್ ಬೆಂಕಿಗೆ ಆಹುತಿಯಾಗಿದ್ದು, ಕರ್ನಾಟಕದಿಂದ ಶಬರಿಮಲೆಗೆ ತೆರಳಿದ್ದ 35ಕ್ಕೂ ಹೆಚ್ಚು ಮಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ನಿನ್ನೆ ಸಂಜೆ ಘಟನೆ ನಡೆದಿದ್ದು, ನೆಲಕ್ಕಲ್ ನಿಂದ ಪಂಪಾಗೆ ಕೇರಳ ಸರ್ಕಾರಿ ಬಸ್‌ನಲ್ಲಿ ತೆರಳುವಾಗ ಬೆಂಕಿ ಹೊತ್ತಿಕೊಂಡಿದೆ. ಬಸ್ ನಲ್ಲಿ ಮೈಸೂರಿನ ಹೂಟಗಳ್ಳಿಯ 23 ಮಂದಿ ಅಯ್ಯಪ್ಪನ ಭಕ್ತರು ಇದ್ದರು.

ಟಯರ್ ಸ್ಫೋಟಗೊಂಡು ಇದ್ದಕ್ಕಿದ್ದಂತೆ ಬಸ್ ಹೊತ್ತಿ ಉರಿದಿದೆ. ಸ್ಥಳೀಯರು ಹಾಗೂ ಇತರೆ ಪ್ರಯಾಣಿಕರಿಂದ ಭಕ್ತರ ರಕ್ಷಣೆ ಮಾಡಲಾಗಿದೆ. ಘಟನೆಯಿಂದ ಓರ್ವ ಯುವಕನಿಗೆ ಗಾಯವಾಗಿದ್ದು, ಆತನನ್ನು ಕೇರಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್ ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ.












Click it and Unblock the Notifications