ಈಡುಗಾಯಿ ಒಡೆಯುವ ವಿಚಾರಕ್ಕೆ ಕಿರಿಕ್:ಇಬ್ಬರು ಯುವಕರಿಗೆ ಗಂಭೀರ ಗಾಯ

ಮೈಸೂರು, ಫೆಬ್ರವರಿ 27: ದೇವಸ್ಥಾನದಲ್ಲಿ ಈಡುಗಾಯಿ ಒಡೆಯುವ ವಿಚಾರಕ್ಕೆ ಜಗಳವಾಗಿ ಇಬ್ಬರು ಯುವಕರು ಗಾಯಗೊಂಡ ಘಟನೆ ಮೈಸೂರಿನ ನಂಜನಗೂಡು ತಾಲೂಕಿನ ಗಟ್ಟವಾಡಿಯಲ್ಲಿ ನಡೆದಿದೆ.

ಘಟನೆಯಲ್ಲಿ ಗಾಯಗೊಂಡಿರುವವರನ್ನು ಮಹದೇವಸ್ವಾಮಿ ಹಾಗೂ ಮಂಜು ಎಂದು ಗುರುತಿಸಲಾಗಿದೆ. ಹೊಸದಾಗಿ ಹಾಕಲಾಗಿದ್ದ ಟೈಲ್ಸ್ ಮೇಲೆ ಯುವಕರು ತೆಂಗಿನಕಾಯಿ ಒಡೆಯಲು ಮುಂದಾದಾಗ ಕೆಲವರು ವಿರೋಧಿಸಿದ್ದಾರೆ.

ಆ ನಂತರವೂ ಯುವಕರು ಟೈಲ್ಸ್ ಮೇಲೆ ಈಡುಗಾಯಿ ಒಡೆಯಲು ಹೋದಾಗ ಮಾತಿನ ಚಕಮಕಿ ಶುರುವಾಗಿ ಯುವಕರ ತಲೆ ಮೇಲೆ ಕೆಲವರು ತೆಂಗಿನಕಾಯಿ ಒಡೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಗಲಾಟೆಯ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಕೂಡ ಮಾಡಿದ್ದಾರೆ.

Fight between youths to broke the coconut in Nanjangud

ಗ್ರಾಮದಲ್ಲಿ ನಡೆದ ಮಾರಮ್ಮನ ಹಬ್ಬ ಆಚರಣೆ ವೇಳೆ ಇತ್ತೀಚೆಗೆ ನವೀಕರಣಗೊಂಡ ಮಾರಮ್ಮನ ದೇವಸ್ಥಾನದಲ್ಲಿ ಈಡುಗಾಯಿ ಒಡೆಯುವ ವಿಚಾರದಲ್ಲಿ ಈ ತೆರನಾದ ಘಟನೆ ನಡೆದಿರುವುದರಿಂದ ಗ್ರಾಮದಲ್ಲಿ ಬಿಗುವಿನ ವಾತಾವರಣ ಉಂಟಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+