• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೊಬೈಲ್ ಕರೆಗೆ ಓಗೊಟ್ಟು ಬ್ಯಾಂಕ್ ಮಾಹಿತಿ ಕೊಟ್ಟೀರಾ ಜೋಕೆ!

By ಮೈಸೂರು ಪ್ರತಿನಿಧಿ
|

ಮೈಸೂರು, ನವೆಂಬರ್, 20 : ಮೋಸ ಹೋಗುವವರು ಎಲ್ಲಿ ತನಕ ಇರುತ್ತಾರೋ ಅಲ್ಲಿ ತನಕ ಮೋಸ ಮಾಡುವವರು ಇರುತ್ತಾರೆ ಎಂಬ ಮಾತಿಗೆ ಇಂಬುಕೊಡುವಂತೆ ಇತ್ತೀಚೆಗೆ ಮೊಬೈಲ್ ಗೆ ಕರೆ ಮಾಡಿ ಬ್ಯಾಂಕ್ ಸಿಬ್ಬಂದಿ ಎಂದು ಪರಿಚಯಿಸಿಕೊಂಡು ಮಾಹಿತಿ ಪಡೆದು ಹಣ ಎಗರಿಸುತ್ತಿರುವ ಪ್ರಕರಣ ಅಲ್ಲಲ್ಲಿ ಕೇಳಿ ಬರುತ್ತಿದ್ದರೂ ಎಚ್ಚೆತ್ತುಕೊಳ್ಳದ ಕಾರಣ ಒಬ್ಬರಲ್ಲ ಒಬ್ಬರು ಮೋಸ ಹೋಗುತ್ತಲೇ ಇದ್ದಾರೆ.

ಬ್ಯಾಂಕ್ ಸಿಬ್ಬಂದಿ ಎಂದು ಹೇಳಿಕೊಂಡು ಮೋಸದ ಜಾಲ ಹೆಣೆದಿದ್ದ ವ್ಯಕ್ತಿಯ ಜಾಲಕ್ಕೆ ಮಂಡ್ಯದ ಮಳವಳ್ಳಿ ತಾಲೂಕಿನ ಟಿ.ಕೆ.ಹಳ್ಳಿಯ ನಿವೃತ್ತ ನೌಕರ ಮುನಿಸಿದ್ದಯ್ಯ ಎಂಬ ವ್ಯಕ್ತಿ ಸಿಲುಕಿ ತನ್ನ ಹಣ ಕಳೆದುಕೊಂಡಿದ್ದಾನೆ.[ಎಟಿಎಂ ನಂಬರ್ ಕೊಟ್ಟು 14 ಸಾವಿರ ಕಳಕೊಂಡ್ರು]

ಗ್ರಾಮದ ನಿವೃತ್ತ ನೌಕರನಾದ ಮುನಿಸಿದ್ದಯ್ಯ ಕೆನರಾ ಬ್ಯಾಂಕಿನಲ್ಲಿ ಉಳಿತಾಯ ಖಾತೆ (0552101002033) ಹೊಂದಿದ್ದು ನಿವೃತ್ತರಾದ ಸಂದರ್ಭದಲ್ಲಿ ಬಂದಿದ್ದ ಹಣವನ್ನು ಜಮಾ ಮಾಡಿದ್ದರು. ನವೆಂಬರ್ 19 ರ ಗುರುವಾರದವರೆಗೆ ಇವರ ಖಾತೆಯಲ್ಲಿ 2,21,301 ರೂ. ಇತ್ತು.

ನವೆಂಬರ್ 19ರ ಗುರುವಾರ ಬೆಳಗ್ಗೆ ಮೊ.ನಂ: 7546034189 ನಿಂದ ಮುಂಬೈ ಕೆನರಾ ಬ್ಯಾಂಕಿನ ಕಚೇರಿಯಿಂದ ಮಾತನಾಡುತ್ತಿದ್ದೇನೆಂದು ವ್ಯಕ್ತಿಯೊಬ್ಬ ಕರೆ ಮಾಡಿ ನಿಮ್ಮ ಎಟಿಎಂ ಕಾರ್ಡ್ ಅವಧಿ ಮುಗಿದಿದ್ದು, ಅದನ್ನು ನವೀಕರಿಸಬೇಕು. ನಿಮ್ಮ ಎಟಿಎಂ ಕಾರ್ಡಿನ ಪೂರ್ಣ ಮಾಹಿತಿ ಕೊಡಿ ಎಂದು ಕೇಳಿದ್ದಾನೆ.[ತನ್ನದಲ್ಲದ ಬೈಕಿನಲ್ಲಿ 4 ಲಕ್ಷ ರೂ.ಇಟ್ಟ, ಕೊನೆಗೆ ಪೇಚಾಡಿದ]

ಇದನ್ನು ನಂಬಿದ ಮುನಿಸಿದ್ದಯ್ಯ ಎಲ್ಲ ಅಗತ್ಯ ಮಾಹಿತಿಯನ್ನು ನೀಡಿದ್ದಾರೆ. ಮಾಹಿತಿ ಪಡೆದುಕೊಂಡ ವ್ಯಕ್ತಿ 5 ನಿಮಿಷದಲ್ಲಿ ಹೊಸ ಪಾಸ್ ವರ್ಡ್ ಕೋಡ್ ನಿಮ್ಮ ಮೊಬೈಲ್ ಗೆ ಬರುತ್ತದೆ, ಅದನ್ನು ಬಳಸಿಕೊಳ್ಳಿ ಎಂದು ಹೇಳಿದ್ದಾನೆ.

ಆದರೆ, 5 ನಿಮಿಷವಾದರೂ ನವೀಕರಿಸಿದ ಬಗ್ಗೆ ಯಾವುದೇ ಪಾಸ್ ವರ್ಡ್ ಕೋಡ್ ಮಾಹಿತಿ ಬಂದಿಲ್ಲ. ಬದಲಿಗೆ ಅವರ ಖಾತೆಯಿಂದ ಹಣ ತೆಗೆಯುತ್ತಿರುವ ಬಗ್ಗೆ ಕ್ಷಣ ಕ್ಷಣಕ್ಕೂ ಮುಂಬೈನ ಹಲವು ಎಟಿಎಂ ಶಾಖೆಗಳಿಂದ 2000, 5000, 4000, 4000, 2000, 4000, 2000, 2000, 2044, 950, 4900, 2500, 2000, 2500, 2500, 6000, 2000, 1000, 4000, 2000, 4000, 2000, 2044, 1000 ಎಂದು 24 ಎಸ್‍ಎಂಎಸ್ ಬಂದಿದೆ.

ತಕ್ಷಣ ಗಾಬರಿಗೊಂಡ ಮುನಿಸಿದ್ದಯ್ಯ ಮಳವಳ್ಳಿ ಕೆನರಾ ಬ್ಯಾಂಕ್ ಕಚೇರಿಗೆ ತೆರಳಿ ಬ್ಯಾಂಕ್ ವ್ಯವಸ್ಥಾಪಕರಿಗೆ ಮಾಹಿತಿ ನೀಡಿ ಖಾತೆಯನ್ನು ಲಾಕ್ ಮಾಡಿಸಿದ್ದಾರೆ. ಆದರೆ ಅದಾಗಲೇ 66,529 ರೂ.ಗಳನ್ನು ವಂಚಕರು ಎಗರಿಸಿದ್ದರು. ಹಣ ಕಳೆದುಕೊಂಡ ಮುನಿಸಿದ್ದಯ್ಯ ಪುರ ಠಾಣೆಗೆ ದೂರು ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
One fake call came to Mysuru person Munisiddayya, from Mumbai. Munisiddayya received that call. Suddenly Mumabi person asked full bank details and atm pass word to him and told your new atm pass come within five minutes. But password is not come. But his bank balance 2 lakh rs is gone on November 19th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more