ಮೈಸೂರು ಬಿಜೆಪಿಯಲ್ಲಿ ಶುರುವಾಗಿದೆ ಫೇಸ್ ಬುಕ್ ಜಟಾಪಟಿ
ಮೈಸೂರು, ಅಕ್ಟೋಬರ್ 9: ಬಿಜೆಪಿಯಲ್ಲಿ ಕೆ ಆರ್ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಕಮಲ ಪಾಳಯದಲ್ಲಿ ಫೇಸ್ ಬುಕ್ ವಾರ್ ಆರಂಭವಾಗಿದೆ. ಕೆ.ಆರ್.ಕ್ಷೇತ್ರದ ಬಿಜೆಪಿ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪಕ್ಷದ ಒಳಗೇ ಜಟಾಪಟಿ ಶುರುವಾಗಿದೆ.
ಮುಖಂಡ ರಾಮದಾಸ್ ಬೆಂಬಲಿಗ ನಾಗರಾಜ್ ಪೈ ಎಂಬಾತ ಬಿಜೆಪಿ ಮುಖಂಡರನ್ನು ಫೇಸ್ ಬುಕ್ ನಲ್ಲಿ ನಿಂದಿಸಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ. ರಾಮದಾಸ್ ಗೆ ಟಿಕೆಟ್ ಕೈತಪ್ಪುತ್ತಿರುವುದು ತಿಳಿಯುತ್ತಿದ್ದಂತೆ ಬೆಂಬಲಿಗರು ಹತಾಶೆಯಿಂದ ಬಹಿರಂಗವಾಗಿಯೇ ಫೇಸ್ ಬುಕ್ ವಾಲ್ ನಲ್ಲಿ ತೇಜೋವಧೆ ಮಾಡತೊಡಗಿದ್ದಾರೆ ಎಂಬ ದೂರು ಕೇಳಿಬಂದಿದೆ.

ಬಿಜೆಪಿ ಮುಖಂಡ ಎಚ್.ವಿ. ರಾಜೀವ್ ಹಾಗೂ ಪ್ರಭಾರಿ ಎನ್.ವಿ. ಫಣೀಶ್ ಅವರನ್ನು ಕುರಿತು ಫೇಸ್ ಬುಕ್ ನಲ್ಲಿ ನಿಂದಿಸಲಾಗಿದೆ. ಇಬ್ಬರು ನಾಯಕರು ಕೆ.ಆರ್. ಕ್ಷೇತ್ರದ ಆಕಾಂಕ್ಷಿಗಳಾಗಿದ್ದಾರೆ. 'ಎಂ ಎಲ್ ಎ ಆಗೋಕೆ ಬೇಕು ಯೋಗ್ಯತೆ ಹಾಗೂ ಟೀ ಪುಡಿ ಮಾರೋರೇಲ್ಲ ಶಾಸಕರಾಗಲ್ಲ' ಎಂಬಿತ್ಯಾದಿ ಮಾತುಗಳಿಂದ ರಾಜೀವ್ ಅವರನ್ನು ನಿಂದಿಸಲಾಗಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ಅಭಿವೃದ್ಧಿ ಮಂತ್ರ ಪಠಿಸುವ ಬಿಜೆಪಿ ನಾಯಕರು, ಸಾಮಾಜಿಕ ಜಾಲತಣಗಳಲ್ಲಿನ ರಾಜಕೀಯ ಕೆಸರೆರಚಾಟಕ್ಕೆ ವೇದಿಕೆ ಮಾಡಿಕೊಂಡಿದ್ದಾರೆ, ಶಿಸ್ತಿನ ಪಕ್ಷದಲ್ಲಿ ಅಶಿಸ್ತಿನ ವರ್ತನೆ, ಬೆಂಬಲಿಗರಿಗೆ ಲಗಾಮು ಹಾಕುವಲ್ಲಿ ಮುಖಂಡರು ವಿಫಲರಾಗಿದ್ದಾರೆ ಎಂಬ ಮಾತೂ ಕೇಳಿಬರುತ್ತಿದೆ. ಸಾಮಾಜಿಕ ಜಾಲತಣಗಳಲ್ಲಿ ಅಭಿವೃದ್ಧಿ ಮಂತ್ರ ಪಠಿಸುವ ಬಿಜೆಪಿ ಮಂದಿಯಿಂದ ಸಾಮಾಜಿಕ ಜಾಲತಣಗಳಲ್ಲಿನ ರಾಜಕೀಯ ಕೆಸರೆರಚಾಟಕ್ಕೆ ಸಾರ್ವಜನಿಕರಿಂದ ಖಂಡನೆ ವ್ಯಕ್ತವಾಗಿದೆ.











Click it and Unblock the Notifications