ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

2023ಕ್ಕೆ ವರುಣಾ ವಿಧಾನಸಭಾ ಕ್ಷೇತ್ರದಿಂದಲೇ ಮಾಜಿ ಸಿಎಂ ಸಿದ್ದರಾಮಯ್ಯ ಸ್ಫರ್ಧೆ!

|
Google Oneindia Kannada News

ಮೈಸೂರು, ಸೆಪ್ಟೆಂಬರ್ 26: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 2023 ವಿಧಾನಸಭೆಗೆ ವರುಣಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಇದಕ್ಕೆ ಪುಷ್ಟಿ ಎಂಬಂತೆ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ವಿವಿಧ ಅಭಿವೃದ್ಧಿ ಕಾರ್ಯವನ್ನು ಉದ್ಘಾಟಿಸುತ್ತಿದ್ದಾರೆ. ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಹೋದ ಕಡೆಯೆಲ್ಲಾ ಮುುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಜೈ ಎಂಬ ಜೈಕಾರ ಕೇಳಿಬರುತ್ತಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಿನ 2023ರ ಚುನಾವಣೆಯಲ್ಲಿ ಯಾವ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ವಿವರ ಆಗಿಂದಾಗ್ಗೆ ಚರ್ಚೆಯಾಗುತ್ತಿದೆ. ಸಿದ್ದರಾಮಯ್ಯರವರು ತಾವು ಈ ಹಿಂದೆ ಸ್ಪರ್ಧಿಸಿದ್ದ ವರುಣಾ ವಿಧಾನಸಭೆಯಲ್ಲೇ ಸ್ಪರ್ಧಿಸಲಿದ್ದಾರೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿದೆ. ಪ್ರಸ್ತುತ ಸಿದ್ದರಾಮಯ್ಯ ಪುತ್ರ ಯತೀಂದ್ರ ವರುಣಾ ಕ್ಷೇತ್ರದ ಶಾಸಕರಾಗಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಬದಾಮಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದಾರೆ. 2018 ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಮತ್ತು ಬದಾಮಿ ವಿಧಾನಸಭಾ ಕ್ಷೇತ್ರದಿಂದ ಸಿದ್ದರಾಮಯ್ಯ ಸ್ಪರ್ಧೆಯನ್ನು ಮಾಡಿದ್ದರು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತರೆ ಬದಾಮಿಯಲ್ಲಿ ಕೆಲವೇ ಸಾವಿರ ಮತಗಳ ಅಂತರದಲ್ಲಿ ಪ್ರಯಾಸದ ಗೆಲುವನ್ನು ಸಿದ್ದರಾಮಯ್ಯ ಕಂಡರು. ಇದರಿಂದಾಗಿ ಸಿದ್ದರಾಮಯ್ಯಗೆ ಸೇಫಾಗಿರುವ ಕ್ಷೇತ್ರದ ಅವಶ್ಯಕತೆಯಿದೆ.

ವರುಣಾದಲ್ಲಿ ಸಿದ್ದು, ಯತೀಂದ್ರಗಾಗಿ ಕ್ಷೇತ್ರ ಹುಡುಕಾಟ

ವರುಣಾದಲ್ಲಿ ಸಿದ್ದು, ಯತೀಂದ್ರಗಾಗಿ ಕ್ಷೇತ್ರ ಹುಡುಕಾಟ

ಮಾಜಿ ಸಿಎಂ ಸಿದ್ದರಾಮಯ್ಯಗೆ ರಾಜ್ಯದ ಹಲವು ಕ್ಷೇತ್ರಗಳಲ್ಲಿ ಸ್ಪರ್ಥಿಸುವಂತೆ ಆಹ್ವಾನಗಳಿವೆ. ಕೋಲಾರ, ಬದಾಮಿ, ಚಾಮರಾಜಪೇಟೆ ಸೇರಿದಂತೆ ವಿವಿಧ ಕ್ಷೇತ್ರಗಳ ಆಹ್ವಾನವಿದೆ. ಆದರೆ ಸಿದ್ದರಾಮಯ್ಯಗೆ ವರುಣಾ ಕ್ಷೇತ್ರವೇ ದಿ ಬೆಸ್ಟ್ ಎನಿಸಿದೆಯಂತೆ. ಸಿದ್ದರಾಮಯ್ಯ ಕ್ಷೇತ್ರದಲ್ಲಿ ಚಿರಪರಿಚಿತ ವ್ಯಕ್ತಿ. ಈ ಸಲ ತನ್ನ ಕಡೆಯ ಚುನಾವಣೆ ತಾನೂ ಗೆದ್ದರೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂಬ ಪ್ರಚಾರವನ್ನು ಮಾಡಿದರೆ ಸ್ಪರ್ಧೆಯೇ ಇಲ್ಲದಂತೆ ಪ್ರಯಾಸರಹಿತವಾಗಿ ಗೆಲುವನ್ನು ಪಡೆಯಬಹುದು ಎಂಬ ಚಿಂತನೆಯಲ್ಲಿದ್ದಾರಂತೆ. ತಾವು ವರುಣಾದಿಂದ ಸ್ಪರ್ಧೆಯನ್ನು ಮಾಡಿದರೆ ತಮ್ಮ ಮಗನಿಗೆ ಮತ್ತೊಂದು ಸೇಫ್ ಕ್ಷೇತ್ರವನ್ನು ನೋಡಲು ಸಿದ್ದರಾಮಯ್ಯ ತಮ್ಮ ಆಪ್ತರಿಗೆ ತಿಳಿಸಿದ್ದಾರೆ ಎಂಬ ಮಾತು ಚಾಲ್ತಿಗೆ ಬಂದಿದೆ.

ಮುಂದಿನ ಮುಖ್ಯಮಂತ್ರಿ ಸಿದ್ದುಗೆ ಜೈಕಾರ!

ಮುಂದಿನ ಮುಖ್ಯಮಂತ್ರಿ ಸಿದ್ದುಗೆ ಜೈಕಾರ!

ವರುಣಾ ಕ್ಷೇತ್ರದ ಉದ್ದಗಲಕ್ಕೂ ಸಿದ್ದರಾಮಯ್ಯ ಹೋಗುತ್ತಿದ್ದಾರೆ. ಕಾಮಗಾರಿ ಪೂರ್ಣಗೊಂಡ ವಿವಿಧ ಕಟ್ಟಡಗಳ ಉದ್ಘಾಟನೆಯಾಗುತ್ತಿದೆ. ಈ ವೇಳೆ ಸಿದ್ದರಾಮಯ್ಯ ವರುಮಾ ಕ್ಷೇತ್ರದಲ್ಲಿ ಹೋದ ಕಡೆಯಲ್ಲೆಲ್ಲಾ ಜೈಕಾರ ಮೊಳಗುತ್ತಿದೆ. ಸಿದ್ದರಾಮಯ್ಯಗೆ ಮುಂದಿನ ಸಿಎಂ ಎಂದು ಜನ ಜೈಕಾರವನ್ನು ಹಾಕುತ್ತಿದ್ದಾರೆ. ಈ ವೇಳೆ ಸ್ಥಳೀಯರು ಸಿದ್ದರಾಮಯ್ಯರವವರಿಗೆ ವರುಣಾದಿಂದಲೇ ಸ್ಪರ್ಥಿಸಿ ಭಾರಿ ಅಂತರದಲ್ಲಿ ಗೆಲ್ಲಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಇದರಿಂದಾಗಿ ಸಿದ್ದರಾಮಯ್ಯ ವರುಣಾ ಕ್ಷೇತ್ರದಲ್ಲಿ ಸ್ಫರ್ಥಿಸುವ ಸಾಧ್ಯತೆಯೇ ಹೆಚ್ಚಾಗುತ್ತಿದೆ.

ರಾಜ್ಯದೆಲ್ಲೆಡೆ ಪ್ರಚಾರದ ಅನಿವಾರ್ಯತೆ

ರಾಜ್ಯದೆಲ್ಲೆಡೆ ಪ್ರಚಾರದ ಅನಿವಾರ್ಯತೆ

ಮಾಜಿ ಸಿಎಂ ಸಿದ್ದರಾಮಯ್ಯಗೆ ಮರುಜನ್ಮವನ್ನು ಕೊಟ್ಟ ಕ್ಷೇತ್ರವೆಂದರೆ ಅದು ಬದಾಮಿ. ಬದಾಮಿ ಕ್ಷೇತ್ರದಲ್ಲಿ ರಾಜಕೀಯವಾಗಿ ಹಲವಾರು ಏರುಪೇರುಗಳು ಉಂಟಾಗಿದೆ. ಸಿದ್ದುಗೆ ಸೇಫ್ ಕ್ಷೇತ್ರವಾಗಿದ್ದ ಬದಾಮಿಯಲ್ಲಿ ಭಾರಿ ಪೈಪೋಟಿ ಎದುರಾಗುವ ಸಾಧ್ಯತೆಯಿದೆ. ಬದಾಮಿ ಕ್ಷೇತ್ರವನ್ನೇ ಗಮನಿಸುತ್ತಾ ಕುಳಿತರೇ ರಾಜ್ಯದ ವಿವಿಧ ಕ್ಷೇತ್ರಗಳಲ್ಲಿ ಚುನಾವಣೆ ಪ್ರಚಾರವನ್ನು ಮಾಡುವುದು ಕಷ್ಠವಾಗಲಿದೆ. ಹೊಸ ಕ್ಷೇತ್ರಗಳನ್ನು ಹುಡುಕಿದರೇ ಜನರ ಪರಿಚಯವಿರುವುದಿಲ್ಲ. ಇದರಿಂದಾಗಿ ಬದಾಮಿಗಿಂತಲೂ ವರುಣಾ ದಿ ಬೆಸ್ಟ್ ಎಂಬ ನಿರ್ಧಾರಕ್ಕೆ ಸಿದ್ದರಾಮಯ್ಯ ಬಂದಿದ್ದಾರೆ ಎನ್ನಲಾಗಿದೆ.

ಸಿದ್ದುಗೆ ಕೊನೆಯ ಚಾನ್ಸ್

ಸಿದ್ದುಗೆ ಕೊನೆಯ ಚಾನ್ಸ್

ಬಿಜೆಪಿಯ ಮೇಲೆ ಸಾಕಷ್ಟು ಭ್ರಷ್ಟಾಚಾರದ ಆರೋಪಗಳಿವೆ. ಯಡಿಯೂರಪ್ಪನಂತಹ ಬೇರೊಬ್ಬ ನಾಯಕ ಬಿಜೆಪಿಯಲ್ಲಿಲ್ಲ. ಬೊಮ್ಮಾಯಿಗೆ ಅಷ್ಟು ಚಾರ್ಮ್‌ ಕಾಣಿಸುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್ ಮತ್ತು ಸಿದ್ದರಾಮಯ್ಯಗೆ ಆಶಾಕಿರಣದಂತೆ 2023ರ ಚುನಾವಣೆ ಕಾಣಿಸುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲು ಇದೇ ಕಡೆಯ ಅವಕಾಶವಾಗಿದೆ. ಸಿದ್ದರಾಮಯ್ಯ ಯಶಸ್ವಿಯಾಗಿ 5 ವರ್ಷ ಮುಖ್ಯಮಂತ್ರಿಯಾಗಿ ಆಡಳಿತ ನೀಡಿದರು 2018ರ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಬೇಕಾಯಿತು. ಸೋಲಿಗೆ ಕಾರಣ ಏನಿದ್ದರು ಸೋಲು ಒಪ್ಪಿಕೊಳ್ಳಬೇಕಾಯಿತು. ಇದೀಗ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೊಮ್ಮೆ ಸಿಎಂ ಆಗಲು ಬಯಸಿದ್ದು. ಸೇಫಾಗಿರುವ ವರುಣಾ ಕ್ಷೇತ್ರದಲ್ಲಿ ಗೆದ್ದು ಸಿಂಹಾಸನಕ್ಕೆ ಏರುಲು ಸುಲಭ ಮಾರ್ಗ ಆಯ್ದುಕೊಳ್ಳುತ್ತಿದ್ದಾರೆ.

English summary
former Chief Minister Siddaramaiah will contest the 2023 assembly from Varuna constituency. Siddaramaiah is inaugurating various development works in Varuna constituency as a push for this. Wherever Siddaramaiah goes in Varuna constituency, chants of Jai for the next Chief Minister Siddaramaiah are heard, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X