ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಎಕ್ಸಾಮ್ ಟಿಪ್ಸ್ ಕೊಟ್ಟ ಶಿಕ್ಷಣ ಸಚಿವರು

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 25: ಜಿಲ್ಲಾ ಪಂಚಾಯತ್ ಮೈಸೂರು ಜಿಲ್ಲೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಂಜನಗೂಡು ತಾಲೂಕು ವತಿಯಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳೊಂದಿಗೆ "ಪರೀಕ್ಷೆ ಭಯ ಬಿಡಿ- ಕಲಿಕೆ ಮೇಲೆ ಭರವಸೆ ಇಡಿ' ಕುರಿತು ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪಾಲ್ಗೊಂಡು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.

ನಂಜನಗೂಡು ಕಾರ್ಮೆಲ್ ಕಾನ್ವೆಂಟ್ ನಲ್ಲಿ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮವನ್ನು ಶಿಕ್ಷಣ ಸಚಿವ ಸುರೇಶ್ ಕುಮಾರ್ ಉದ್ಘಾಟಿಸಿ ಮಾತನಾಡಿದ ಅವರು, ನಾನು ನೋಡ್ತಿದ್ದೀನಿ ಈ ಸಂವಾದದಲ್ಲಿ ಮಕ್ಕಳ ಮುಖದಲ್ಲಿ ಭಯ ಕಾಣುತ್ತಿಲ್ಲ. ಭಯ ಕಾಣುತ್ತಿರೋದು ದೊಡ್ಡವರ ಮುಖದಲ್ಲಿ, ಪರೀಕ್ಷೆ ಕುರಿತು ಅನೇಕರಲ್ಲಿ ಗೊಂದಲಗಳಿವೆ ಎಂದರು.

"ವಿವಿ ಕುಲಪತಿಗಳ ಕಾಯ್ದೆಗೆ ತಿದ್ದುಪಡಿ ತರುವುದು ಅಪಾಯಕಾರಿ ಬೆಳವಣಿಗೆ'

ನಿಮ್ಮ ಮನಸ್ಸಿನಲ್ಲಿರುವ ಪ್ರಶ್ನೆ, ಗೊಂದಲ ನಿವಾರಣೆಗೆ ಶಿಕ್ಷಣ ಇಲಾಖೆಯಿಂದ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಕ್ಕಳಿಗಾಗಿ ಎಫ್ಎಕ್ಯೂ ಸಾಮಾನ್ಯವಾಗಿ ಬರುವ ಪ್ರಶ್ನೆ ಕುರಿತು 51 ನಿಮಿಷದ ವಿಡಿಯೋ ಮಾಡಿದ್ದೇವೆ. ಭಾರತದ ಮೊಟ್ಟ ಮೊದಲ ಪ್ರಯತ್ನ ಇದಾಗಿದೆ. ಎಸ್ಎಸ್ಎಲ್ಸಿ ಮಕ್ಕಳ ಜೊತೆ ಸಂವಾದ ಮಾಡಲು ಬಂದಿದ್ದೇನೆ ನಿಮ್ಮ ಪ್ರಶ್ನೆಗಳನ್ನು ಕೇಳಬಹುದು ಎಂದರು.

Education Minister Gave Exam Tips To SSLC Students

ಕಾರ್ಮೆಲ್ ಶಾಲೆಯ ವಿದ್ಯಾರ್ಥಿ ಗಗನ್, "ಪರೀಕ್ಷೆ ಪತ್ರಿಕೆ ಲೀಕ್ ಆಗಿದೆಯೇ ಎಂದು ಕೇಳಿದ್ದಕ್ಕೆ ಸಚಿವರು, ಪತ್ರಿಕೆ ಲೀಕ್ ಆಗಿಲ್ಲ ಪರೀಕ್ಷೆ ಮೂರು ದಿನ ಅಂತ ಮಕ್ಕಳಿಗೆ ಅಂತಿಮ ಪರೀಕ್ಷೆ ಹೇಗಿರುತ್ತದೆ ಎಂದು ತಿಳಿಸಲು ಪತ್ರಿಕೆ ರೆಡಿ ಮಾಡಲಾಗಿದೆ' ಎಂದರು.

ದೊಡ್ಡಕವಲಂದೆ ಶಾಲೆಯ ವಿದ್ಯಾರ್ಥಿನಿ ಮಹೇಶ್ವರಿ ಗಣಿತದಲ್ಲಿ 100 ಅಂಕಗಳಿಸೋದು ಹೇಗೆ? ಲೆಕ್ಕ ಮಾಡೋದಕ್ಕೆ ಸಮಯ ಜಾಸ್ತಿ ಬೇಕು ಎಂದಿದ್ದಕ್ಕೆ ಸಚಿವರು ಗಣಿತ ಪರೀಕ್ಷೆಗೆ ಸಮಯ ಜಾಸ್ತಿ ನೀಡಿದ್ದೇವೆ. ಅರ್ಧ ಗಂಟೆ ಹೆಚ್ಚಿನ ಸಮಯ ನೀಡಿದ್ದೇವೆ ಎಂದರು.

ಪ್ರವಾಸಿಗರಿಗೆ ಡಬಲ್ ಡೆಕ್ಕರ್ ಬಸ್ ನಲ್ಲಿ ಮೈಸೂರು ಸುತ್ತುವ ಮೋಜು...ಪ್ರವಾಸಿಗರಿಗೆ ಡಬಲ್ ಡೆಕ್ಕರ್ ಬಸ್ ನಲ್ಲಿ ಮೈಸೂರು ಸುತ್ತುವ ಮೋಜು...

ವಿದ್ಯಾರ್ಥಿನಿ ಆಶಾ ಪಠ್ಯ ಪುಸ್ತಕದಿಂದ ಹೊರಗಿನ ಪ್ರಶ್ನೆ ಬರುತ್ತೆ ಎಂದಿದ್ದಕ್ಕೆ ಸಚಿವರು ಪಠ್ಯ ಪುಸ್ತಕದ ಒಳಗಿರುವುದನ್ನೇ ಕೊಡೋದು. ಅದನ್ನು ಬದಲಾಯಿಸಿ ಪ್ರಶ್ನೆ ಕೊಟ್ಟಿರುತ್ತಾರೆ ಅಷ್ಟೇ ಎಂದು ಆತಂಕ ದೂರ ಮಾಡಿದರು.

ಮಕ್ಕಳು ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬೇಕು, ತಂದೆ-ತಾಯಿ ಮಕ್ಕಳಿಗೆ ಓದುವಂತೆ ಒತ್ತಡ ಹೇರಬೇಡಿ, ಮಕ್ಕಳು ಭಯ, ಆತಂಕಕ್ಕೆ ಗುಡ್ ಬೈ ಹೇಳಿ ಎಂದು ಎಸ್ಎಸ್ಎಲ್ಸಿ ಮಕ್ಕಳಿಗೆ ಸಲಹೆ ನೀಡಿದರು. ನಂಜನಗೂಡು ತಾಲೂಕಿನ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ 65 ಶಾಲೆಯ 350 ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗಿಯಾಗಿದ್ದರು.

English summary
Education Minister Suresh Kumar participated in the Interaction program with SSLC students Today in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X