ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚುನಾವಣೆ ನೀತಿ ಸಂಹಿತೆ ಹಿನ್ನೆಲೆ : ಅಕ್ರಮ ಮದ್ಯ ಮಾರಾಟದಲ್ಲಿ ಇಳಿಕೆ

|
Google Oneindia Kannada News

ಮೈಸೂರು, ಏಪ್ರಿಲ್ 27 : ಲೋಕಸಭೆ ಚುನಾವಣೆ ಹಿನ್ನೆಲೆ ಮೈಸೂರಿನಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದ ಕಾರಣ ಅಕ್ರಮ ಮದ್ಯ ಮಾರಾಟದ ಮೇಲೆ ನಿಗಾ ವಹಿಸಿದ ಪರಿಣಾಮ ಮದ್ಯ ಮಾರಾಟದಲ್ಲಿ ಕುಸಿತ ಕಂಡಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಕಳೆದ ವರ್ಷ 2018- 19 ಮಾರ್ಚ್ ನಲ್ಲಿ 3,17,298 ಕೇಸ್ ಗಳು ಮದ್ಯ ಮಾರಾಟವಾಗಿದ್ದರೆ, ಚುನಾವಣಾ ನೀತಿ ಸಂಹಿತೆ ಜಾರಿಯಾದ ಪರಿಣಾಮ ಈ ವರ್ಷ ಮಾರ್ಚ್ ನಲ್ಲಿ 2,37,754 ಕೇಸ್ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ 79,541 ಕೇಸ್ ಮದ್ಯ ಮಾರಾಟದಲ್ಲಿ ಇಳಿಕೆಯಾಗಿದೆ.

ಅರ್ಧದರಕ್ಕೆ ಮದ್ಯ, ಉಚಿತ ಮೇಕೆ, ಆಭರಣ : ಇದು ಪ್ರಣಾಳಿಕೆ ಅರ್ಧದರಕ್ಕೆ ಮದ್ಯ, ಉಚಿತ ಮೇಕೆ, ಆಭರಣ : ಇದು ಪ್ರಣಾಳಿಕೆ

ಮಾರ್ಚ್ 10ರಂದು ಚುನಾವಣಾ ಅಧಿಸೂಚನೆ ಘೋಷಣೆಯಾಗುತ್ತಿದ್ದಂತೆ, ನೀತಿ ಸಂಹಿತೆ ಜಾರಿಗೆ ಬಂದು ಅಕ್ರಮವಾಗಿ ಮಾರಾಟವಾಗುತ್ತಿದ್ದ ಮದ್ಯದ ಪ್ರಮಾಣಕ್ಕೆ ಕಡಿವಾಣ ಹಾಕಲು ವಿಶೇಷ ಕಾರ್ಯಾಚರಣೆ ಕೂಡ ಆರಂಭವಾಯಿತು.

Due to election code of conduct Illegal alcohol sales has been reduced in Mysuru

ಇನ್ನು ಮತದಾನ ನಡೆದ ಒಂದೂವರೆ ತಿಂಗಳ ಅವಧಿಯಲ್ಲಿ ಅಕ್ರಮ ಮದ್ಯ ಮಾರಾಟ ಸಂಬಂಧ ಅಬಕಾರಿ ಪೊಲೀಸರು ವಿಶೇಷ ಕಾರ್ಯಾಚರಣೆಯನ್ನು ಸಹ ನಡೆಸಿದ್ದರು. ನಿಗದಿಗಿಂತ ಹೆಚ್ಚು ಪ್ರಮಾಣದಲ್ಲಿ ಮದ್ಯ ಸಾಗಿಸುವವರನ್ನು ಬಂಧಿಸಿ ಮದ್ಯವನ್ನು ಸಹ ವಶಕ್ಕೆ ಪಡೆಯಲಾಗಿದೆ.

ಲೋಕಸಭಾ ಚುನಾವಣೆ: ರಾಜ್ಯದಲ್ಲಿ 4 ದಿನ 'ಮದ್ಯ ಮಾರಾಟ' ಬಂದ್ ಲೋಕಸಭಾ ಚುನಾವಣೆ: ರಾಜ್ಯದಲ್ಲಿ 4 ದಿನ 'ಮದ್ಯ ಮಾರಾಟ' ಬಂದ್

ಜಿಲ್ಲೆಯಲ್ಲಿ ಅನುಮತಿ ಪಡೆದ ಎಲ್ಲ ಮದ್ಯದ ಅಂಗಡಿಗಳಿಗೆ ಸರಕಾರ, ರಾಜ್ಯ ಪಾನೀಯ ನಿಗಮ ನಿಯಮಿತ ಮೂಲಕ ನೇರ ಮಧ್ಯೆ ಪೂರೈಸಲಾಗಿದ್ದು, ಚುನಾವಣೆ ಸಂದರ್ಭಗಳಲ್ಲಿ ಎಷ್ಟೇ ಡಿಮ್ಯಾಂಡ್ ಬಂದರೂ ನಿಗಮ ಪೂರೈಸುವುದಿಲ್ಲ. ಏಕೆಂದರೆ, ಚುನಾವಣೆ ವೇಳೆ ಚುನಾವಣಾ ಆಮಿಷಕ್ಕೆ ಮದ್ಯ ಬಳಕೆಯಾಗಲಿದೆ ಎಂಬ ಉದ್ದೇಶಕ್ಕೆ ಪೂರೈಕೆಯಲ್ಲಿ ನಿಯಂತ್ರಣ ಹೇರಲಾಗಿತ್ತು. ಜೊತೆಗೆ ಅಬಕಾರಿ ಇಲಾಖೆ ಕೂಡ ಅಕ್ರಮ ಮದ್ಯ ಸಾಗಿಸುವವರ ವಿರುದ್ಧ ಹದ್ದಿನಕಣ್ಣು ಇಟ್ಟಿತ್ತು.

ಏಪ್ರಿಲ್, ಮೇ ತಿಂಗಳಲ್ಲಿ ಕುಡಕರಿಗೆ ಯಾವ ಯಾವ ದಿನ 'ಡ್ರೈ ಡೇಸ್ ಏಪ್ರಿಲ್, ಮೇ ತಿಂಗಳಲ್ಲಿ ಕುಡಕರಿಗೆ ಯಾವ ಯಾವ ದಿನ 'ಡ್ರೈ ಡೇಸ್

ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ 40 ದಿನಗಳಲ್ಲಿ 2.25 ಕೋಟಿ ರೂ ಮೌಲ್ಯದ ಮದ್ಯ ಮತ್ತು 22,814 ಲೀ ಬಿಯರ್ ವಶಪಡಿಸಿಕೊಳ್ಳಲಾಗಿದೆ. ಮೂರು ವರ್ಷಗಳಲ್ಲಿ ಪೂರೈಸಿದ ಮದ್ಯ ಪ್ರಮಾಣ ಆಧರಿಸಿ ಅದರಲ್ಲಿ ಶೇ.10ರಷ್ಟು ಹೆಚ್ಚು ಮದ್ಯವನ್ನು ಪೂರೈಸಲಾಗುತ್ತದೆ. ಒಂದೊಮ್ಮೆ ಅದಕ್ಕಿಂತ ಹೆಚ್ಚು ಮದ್ಯದ ಬೇಡಿಕೆಯನ್ನು ಮಾರಾಟಗಾರರು ಸಲ್ಲಿಸಿದರೆ, ಯಾವ ಉದ್ದೇಶಕ್ಕೆ ಬಳಕೆಯಾಗುತ್ತದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಿ ಬಳಿಕವೇ ಪೂರೈಸಬೇಕಾಗುತ್ತದೆ ಎನ್ನುತ್ತಾರೆ ಅಬಕಾರಿ ಇಲಾಖೆಯ ಅಧಿಕಾರಿ ವೃಂದ.

ಒಟ್ಟಾರೆ ಈ ಬಾರಿ ಚುನಾವಣೆ ಕಟ್ಟೆಚರದ ಪರಿಣಾದ ಮದ್ಯ ಮಾರಾಟದಲ್ಲಿ ಇಳಿಕೆ ಕಂಡಿರುವುದು ಮಾತ್ರ ಸ್ತುತ್ಯಾರ್ಹ.

English summary
Due to election code of conduct Illegal alcohol sales has been reduced in Mysuru. Last year, 3,17,298 cases were sold in alcohol, while the number has been down in March was 2,37,754 in this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X