• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪದವಿ ಸಮಾರಂಭಕ್ಕೆ ಡ್ರೆಸ್ ಕೋಡ್

|

ಮೈಸೂರು, ನವೆಂಬರ್ 18 : ಇತ್ತೀಚೆಗಷ್ಟೇ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪುಷ್ಪಲತಾ ಅಮರ್ ನಾಥ್ ಆಯ್ಕೆಯಾಗಿದ್ದಾರೆ. ಸೋಮವಾರ ನಡೆಯುವ ಅವರ ಪದಸ್ವೀಕಾರ ಸಮಾರಂಭಕ್ಕೆ ಇದೇ ರೀತಿ, ಬಣ್ಣದ ಬಟ್ಟೆ ಹಾಕಿಕೊಂಡು ಬರಬೇಕು ಎಂದು ತಾಕೀತು ಮಾಡಿರುವುದು ಮಾತ್ರ ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಪದಸ್ವೀಕಾರ ಸಮಾ​ರಂಭಕ್ಕೆ ಹೆಣ್ಣು ಮಕ್ಕಳು ನೀಲಿ ಸೀರೆ ಮತ್ತು ಕುತ್ತಿಗೆ ಮುಚ್ಚುವ ಕುಪ್ಪುಸ ತೊಡಬೇಕು. ಲಿಪ್ ಸ್ಟಿಕ್‌ ಹಚ್ಚಿ​ಕೊ​ಳ್ಳು​ವುದು ಸೇರಿದಂತೆ ಯಾವುದೇ ರೀತಿಯ ಮೇಕಪ್‌ ಮಾಡಿಕೊಳ್ಳಬಾ​ರದು. ಭಾರೀ ಒಡ​ವೆ​ಗ​ಳನ್ನು ಧರಿಸಬಾರದು. ಸ್ಕರ್ಟ್ ಹಾಗೂ ಸ್ಲೀವ್ ಲೆಸ್‌ ಉಡುಪು ತೊಟ್ಟು ಬರಬಾ​ರದು ಎಂದು ಕಾರ್ಯ​ಕರ್ತೆಯ​ರಿಗೆ ಪುಷ್ಪಾ ಅಮರನಾಥ್ ಸೂಚಿಸಿದ್ದಾರೆ ಎನ್ನಲಾಗಿದೆ.

ಸೀರೆ ಧರಿಸಿಯೇ ಕರ್ತವ್ಯ ನಿರ್ವಹಿಸುವುದಕ್ಕೆ ಅವಕಾಶ ಕೊಡಿ ಎಂದ ಮಹಿಳಾ ಪೊಲೀಸರು

ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆಯಾಗಿ ಆಯ್ಕೆ​ಯಾ​ಗಿ​ರುವ ಪುಷ್ಪಾ ಅವರ ಪದಸ್ವೀಕಾರ ಸಭೆಯನ್ನು ‌ದಿವಂಗತ ಪ್ರಧಾನಿ ಇಂದಿರಾ ಗಾಂಧಿ ಜಯಂತಿ ದಿನವಾದ ನವೆಂಬರ್ 19ರಂದು ಆಯೋ​ಜನೆ ಮಾಡ​ಲಾ​ಗಿದೆ. ಈ ಸಭೆ ಪೂರ್ವ​ಭಾವಿ ಸಿದ್ಧತೆ ನಡೆ​ಸಲು ಇತ್ತೀ​ಚೆಗೆ ಆಯೋ​ಜಿ​ಸಿಗಿದ್ದ ಬ್ಲಾಕ್‌ ಕಾಂಗ್ರೆಸ್‌ ಮಹಿಳಾ ಅಧ್ಯಕ್ಷೆಯ ಸಭೆ​ಯಲ್ಲಿ ಪುಷ್ಪಾ ಈ ಸೂಚನೆ ನೀಡಿ​ದ್ದಾರೆ ಎನ್ನ​ಲಾ​ಗಿ​ದೆ.

ಇದಕ್ಕೆ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರಿಂದ ತೀವ್ರ ಆಕ್ಷೇಪ ವ್ಯಕ್ತ​ವಾ​ಗಿ​ದೆ. ರಾಜ್ಯ ಮಹಿಳಾ ಕಾಂಗ್ರೆಸ್‌ನ ನೂತನ ಅಧ್ಯಕ್ಷೆಯಾದ ತಕ್ಷಣ ಇಂತಹ ಸೂಚನೆ ನೀಡುವುದು ಎಷ್ಟು ಸರಿ? ನಾವು ಯಾವ ರೀತಿ ದಿರಿಸು ತೊಡಬೇಕು ಎಂದು ಅಧ್ಯಕ್ಷೆ ತೀರ್ಮಾನ ಮಾಡಬೇಕಾ? ಇಷ್ಟವಾದ ಬಟ್ಟೆ ತೊಟ್ಟು, ಅಲಂಕಾರ ಮಾಡಿಕೊಂಡು ಬರುವುದು ವೈಯಕ್ತಿಕ ವಿಚಾರ ಎಂದು ಆಕ್ಷೇಪ ವ್ಯಕ್ತವಾಗುತ್ತಿದೆ.

English summary
There is pro and against discussion about KPCC woman wing president oath taking ceremony, which will be held in Mysuru on Monday. Pushpa Amaranath, who is selected as president, instructed members to follow dress code. Now this issue become topic for discussion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X