ಮೈಸೂರು: ನಾನಾ ಸಿಹಿ ತಿನಿಸುಗಳನ್ನು ಹಂಚಿ ರಾಜಣ್ಣನ ಹುಟ್ಟುಹಬ್ಬ ಆಚರಣೆ
ಮೈಸೂರು, ಏಪ್ರಿಲ್ 24 : ನಟಸಾರ್ವಭೌಮ, ರಸಿಕರ ರಾಜ ಡಾ.ರಾಜ್ ಕುಮಾರ್ ಅವರ 89ನೇ ಹುಟ್ಟುಹಬ್ಬವನ್ನು ಸೋಮವಾರ ಮೈಸೂರಿನ ಹೋಟೆಲ್ ಮಾಲೀಕರ ಸಂಘ ಹಾಗೂ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಶಿವಸೈನ್ಯ ಸಂಘದ ವತಿಯಿಂದ ಅರಮನೆ ಎದುರಿನ ಡಾ.ರಾಜ್ ಕುಮಾರ್ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಅದ್ದೂರಿಯಾಗಿ ಆಚರಿಸಲಾಯಿತು.
ಡಾ.ರಾಜ್ ಹುಟ್ಟು ಹಬ್ಬದ ಪ್ರಯುಕ್ತ ಅಭಿಮಾನಿಗಳಿಗೆ ಮೈಸೂರುಪಾಕು, ಲಾಡು, ಸೋನ್ಪಾಪಡಿ, ಜಿಲೇಬಿ,ಜಾಂಗೀರ್, ಬಾದುಷ, ಬಾದಾಮ್ ಪುರಿ ಸೇರಿದಂತೆ ಸುಮಾರು ಹತ್ತುಸಾವಿರ ಸಿಹಿಯನ್ನು ಹಂಚಿ ಡಾ. ರಾಜ್ ಅವರ ಹುಟ್ಟುಹಬ್ಬವನ್ನು ಆಚರಿಸಿದರು.[ಚಿತ್ರ ಸಂಪುಟ: ರವೀಂದ್ರ ಕಲಾಕ್ಷೇತ್ರದಲ್ಲಿ ಡಾ. ರಾಜ್ ಜನ್ಮ ದಿನಾಚರಣೆ]

ಇನ್ನೂ ಡಾ.ಶಿವರಾಜ್ ಕುಮಾರ್ ಅಭಿಮಾನಿಗಳ ಶಿವಸೈನ್ಯ ಸಂಘದ ವತಿಯಿಂದ ಅಭಿಮಾನಿಗಳಿಗೆ 5೦೦ ಏಳನೀರು, ಟಮೋಟ ಬಾತ್ ಹಾಗೂ ಕೇಸರಿ ಬಾತ್ ನ್ನು ಸುಮಾರು ಒಂದು ಸಾವಿರ ಮಂದಿಗೆ ಹಂಚಿರುವುದು ವಿಶೇಷವಾಗಿತ್ತು.

ಡಾ.ರಾಜ್ ಹುಟ್ಟುಹಬ್ಬದ ಪ್ರಯುಕ್ತ ಡೋಲುಕುಣಿತ, ನಾದಸ್ವರ ಮತ್ತು ವೀರಗಾಸೆ ನೃತ್ಯಗಳನ್ನು ಏರ್ಪಡಿಸಲಾಗಿತ್ತು.












Click it and Unblock the Notifications