ಮೈಸೂರು: ಮಗನ ಅಕಾಲಿಕ ಸಾವಿಗೆ ಮನನೊಂದು ವೈದ್ಯದಂಪತಿ ಆತ್ಮಹತ್ಯೆ
ಮೈಸೂರು,ಮಾರ್ಚ್ 28 : ಹಲವು ವರುಷಗಳಿಂದ ವೈದ್ಯ ವೃತ್ತಿ ಮಾಡಿಕೊಂಡಿದ್ದ ದಂಪತಿ ಮಗನ ಸಾವಿನಿಂದ ಮನನೊಂದು ನೇಣಿಗೆ ಶರಣಾದ ಘಟನೆ ಮೈಸೂರಿನ ಸರಸ್ವತಿಪುರಂನಲ್ಲಿ ನಡೆದಿದೆ.
ಮೃತರನ್ನು ಸರಸ್ವತಿಪುರಂನ ಡಾ.ಸತೀಶ್ ಕುಮಾರ್ ಮತ್ತು ಡಾ. ವೀಣಾ ಎಂದು ಗುರುತಿಸಲಾಗಿದೆ. ದಂಪತಿಗೆ ಇದ್ದ ಒಬ್ಬನೇ ಮಗ ಕಳೆದ ಎಂಟು ವರ್ಷಗಳ ಹಿಂದೆ ಕುಕ್ಕರಹಳ್ಳಿ ಜಂಕ್ಷನ್ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದ. ಆಗಿನಿಂದಲೇ ಮಾನಸಿಕವಾಗಿ ನೊಂದಿದ್ದ ದಂಪತಿ ತಮ್ಮ ವೈದ್ಯ ವೃತ್ತಿಯನ್ನು ನಿಲ್ಲಿಸಿದರು.
ನಿನ್ನೆ ಸಂಜೆ (ಮಾರ್ಚ್ 28) ಇಬ್ಬರೂ ದಂಪತಿ ಒಂದೇ ಸೀರೆಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ಅಕ್ಕ ಪಕ್ಕದ ಮನೆಯವರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಇಂದು ಬೆಳಿಗ್ಗೆ ವೈದ್ಯ ದಂಪತಿಯ ಸಂಬಂಧಿಗಳು ಇವರಿಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ಕಾರಣ, ಪಕ್ಕದ ಮನೆಯವರಿಗೆ ಕರೆ ಮಾಡಿ ಗಮನಿಸಲು ಹೇಳಿದ್ದಾರೆ. ಅವರು ಕಿಟಕಿಯ ಬಳಿ ಬಂದು ನೋಡಲಾಗಿ ಕೃತ್ಯ ಬೆಳಕಿಗೆ ಬಂದಿದೆ. ದಂಪತಿ ನೇಣಿಗೆ ಶರಣಾಗುವ ಮುನ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ರದಲ್ಲಿ 'ನಮ್ಮ ಸಾವಿಗೆ ನಾವೇ ಹೊಣೆ'. ಮಗನ ಅಗಲಿಕೆಯಿಂದ ಸಾಯುತ್ತಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ನೆರೆಹೊರೆಯವರು ಸರಸ್ವತಿಪುರಂ ಠಾಣೆಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.












Click it and Unblock the Notifications