ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

DFRL ಕಂಡು ಹಿಡಿದಿರುವ ಕರಗುವ ಪ್ಲಾಸ್ಟಿಕ್ ಬಗ್ಗೆ ನಿಮಗೆಷ್ಟು ಗೊತ್ತು?

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 9: ಕೇಂದ್ರ ಸರಕಾರ ಏಕ ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸಿದೆ. ಇದರ ಬೆನ್ನಲ್ಲೇ ಮೈಸೂರಿನ ಸಿದ್ದಾರ್ಥ ನಗರದಲ್ಲಿರುವ ರಕ್ಷಣಾ ಆಹಾರ ಸಂಶೋಧನಾ ಪ್ರಯೋಗಾಲಯ (ಡಿಎರ್ಫಆರ್‌ಎಲ್) ಸಂಸ್ಥೆಯು 'ಪರಿಸರ ಸ್ನೇಹಿ ಪ್ಲಾಸ್ಟಿಕ್ ಚೀಲ' ಸಂಶೋಧನೆ ಮಾಡಿದೆ.

ಪ್ಲಾಸ್ಟಿಕ್ ಮಣ್ಣಿನಲ್ಲಿ ಕರಗುವುದಿಲ್ಲ, ಕೊಳೆಯುವುದೂ ಇಲ್ಲ. ಆದರೆ, ಈ ಬ್ಯಾಗ್ ಪ್ಲಾಸ್ಟಿಕ್ ಬ್ಯಾಗ್‌ನಂತೆ ಕಂಡರೂ 180 ದಿನಗಳಲ್ಲಿ ಸಂಪೂರ್ಣ ಮಣ್ಣಿನಲ್ಲಿ ಕೊಳೆತು ಹೋಗುತ್ತದೆ. ಇದರಿಂದ ಪರಿಸರಕ್ಕೆ ಯಾವುದೇ ಮಾರಕ ಇಲ್ಲ ಎಂದು ವಿಜ್ಞಾನಿಗಳು ಹೇಳುತ್ತಾರೆ. ನೈಸರ್ಗಿಕವಾಗಿ ದೊರೆಯುವ ಪಾಲಿಲ್ಯಾಕ್ಟಿಕ್ ಆ್ಯಸಿಡ್, ಪಾಲಿಪೆಟ್‌ನಿಂದ ಈ ಚೀಲವನ್ನು ತಯಾರಿಸಲಾಗಿದೆ. ಇದೇ ತಂತ್ರಜ್ಞಾನದಲ್ಲಿ ತಯಾರಿಸಿದ ಊಟದ ತಟ್ಟೆ, ಚಮಚ, ಆಹಾರ ಪೊಟ್ಟಣಗಳನ್ನು ಭಾರತೀಯ ಸೇನೆಯಲ್ಲಿ ಬಳಸಲಾಗುತ್ತಿದೆ.

ವಿಡಿಯೋ; ಚಿತ್ರದುರ್ಗದಲ್ಲಿ ಚಾಲಕ ರಹಿತ ಯುದ್ಧ ವಿಮಾನದ ಹಾರಾಟವಿಡಿಯೋ; ಚಿತ್ರದುರ್ಗದಲ್ಲಿ ಚಾಲಕ ರಹಿತ ಯುದ್ಧ ವಿಮಾನದ ಹಾರಾಟ

ಈ ಪರಿಸರ ಸ್ನೇಹಿ ಪ್ಲಾಸ್ಟಿಕ್ ಬ್ಯಾಗ್ ಅನ್ನು ಡಿಎಫ್ಆರ್‌ಎಲ್ ಸಂಸ್ಥೆಯ ಡಾ.ಜಾನ್ಸಿ ಜಾರ್ಜ್, ಡಾ.ಎಂ.ಪಾಲ್ ಮುರುಗನ್, ಡಾ.ವಾಸುದೇವನ್ ನೇತೃತ್ವದ 10 ವಿಜ್ಞಾನಿಗಳ ತಂಡ 6 ತಿಂಗಳ ಕಾಲ ಸಂಶೋಧನೆ ನಡೆಸಿ ತಯಾರಿಸಿದೆ. ಸಂಸ್ಥೆಯ ನಿರ್ದೇಶಕರಾದ ಡಾ.ಅನಿಲ್ ದತ್ ಸೆಮ್ವಾಲ್ ಮಾರ್ಗದರ್ಶನ ನೀಡಿದ್ದಾರೆ. ಇದರ ಬಳಕೆ ಹಾಗೂ ಪ್ರಯೋಜನದ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಚಾಮುಂಡಿ ಬೆಟ್ಟದ ಪ್ರಸಾದ ವಿತರಣೆಗೆ 5 ಸಾವಿರ ಬ್ಯಾಗ್‌ಗಳನ್ನು ನೀಡಲಾಗಿದ್ದು, ಜನರಲ್ಲಿ ಅರಿವು ಮೂಡಿಸುವ ಕೆಲಸ ನಡೆದಿದೆ.

DFRL Developed Biodegradable Carry Bag, Check here for Whats the Special of Bag

ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಶ್ರೀರಂಗಪಟ್ಟಣ ರಂಗನಾಥ ಸ್ವಾಮಿ ದೇವಾಲಯ ಸೇರಿದಂತೆ ಇತರ ದೇವಾಲಯಗಳಿಗೆ ನೀಡುವ ಉದ್ದೇಶವೂ ಇದೆ. ಇಲ್ಲಿ ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಮಾಲ್, ಅಂಗಡಿಗಳಿಗೂ ವಿತರಿಸುವ ಆಲೋಚನೆಯನ್ನು ಡಿಎಫ್‌ಆರ್‌ಎಲ್ ಸಂಸ್ಥೆ ಹೊಂದಿದೆ.

"ಮನೆಯಲ್ಲಿನ ಹಸಿ ಕಸವನ್ನು ಪ್ಲಾಸ್ಟಿಕ್‌ಗಳಲ್ಲಿ ಪಟ್ಟಣ ಕಟ್ಟಿ ಪಾಲಿಕೆಯ ಕಸ ಸಂಗ್ರಹ ವಾಹನಕ್ಕೆ ನೀಡಲಾಗುತ್ತದೆ. ಅದನ್ನು ಬೇರ್ಪಡಿಸುವುದು ಪೌರ ಕಾರ್ಮಿಕರಿಗೆ ಸವಾಲಾಗಿದೆ. ಸಂಸ್ಥೆಯ ತಂತ್ರಜ್ಞಾನದ ಕೈ ಚೀಲ ಬಳಸಿದರೆ ಮನೆಯಲ್ಲಿಯೇ ಕರಗಿಸಿ ಗೊಬ್ಬರ ಮಾಡಬಹುದು" ಎಂದು ಸಂಸ್ಥೆಯ ನಿರ್ದೇಶಕ ಡಾ.ಅನಿಲ್ ದತ್ ಸೆಮ್ವಾಲ್ ತಿಳಿಸಿದ್ದಾರೆ.

DFRL Developed Biodegradable Carry Bag, Check here for Whats the Special of Bag

ಏನಿದರ ವಿಶೇಷ?
ಈ ಚೀಲ 5 ಕೆ.ಜಿ ಭಾರದ ವಸ್ತುಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿದೆ. ಸಾಮಾನ್ಯವಾಗಿ ಇದೇ ಪ್ರಮಾಣದ ಬಟ್ಟೆಯ ಬ್ಯಾಗಿಗೆ 10 ರಿಂದ 15 ರೂ. ಬೆಲೆ ಇರುತ್ತದೆ. ಆದರೆ, ಡಿಎಫ್ಆರ್‌ಎಲ್ ಕಂಡು ಹಿಡಿದಿರುವ ಪ್ಲಾಸ್ಟಿಕ್ ಬ್ಯಾಗ್ ದರ ಕೇವಲ 2 ರೂ. ಈ ಬ್ಯಾಗ್ ಮಣ್ಣಲ್ಲಿ ಕೊಳೆಯುವುದರಿಂದ ಯಾವುದೇ ಕುರುಹು ಇರುವುದಿಲ್ಲ. ಮತ್ತು ಕಸದ ಸಮಸ್ಯೆಯನ್ನು ತಪ್ಪಿಸುತ್ತದೆ. ಈ ಜೈವಿಕ ವಿಘಟನೀಯ ಚೀಲಗಳ ಬಳಕೆಯನ್ನು ಜನಪ್ರಿಯಗೊಳಿಸುವುದರಿಂದ ಘನತ್ಯಾಜ್ಯ ಸಂಗ್ರಹವಾಗುವುದನ್ನು ತಪ್ಪಿಸಬಹುದು.

ತಯಾರಿಕೆ ಹೇಗೆ?
ನೈಸರ್ಗಿಕವಾಗಿ ದೊರೆಯುವ ಜೈವಿಕ ವಿಘಟನೀಯ ಹಾಗೂ ಪಿ-ಬ್ಯಾಟ್ ಪಾಲಿಮರ್ ಬಳಸಿ ಈ ಚೀಲವನ್ನು ತಯಾರಿಸಲಾಗಿದೆ. ಇದೇ ತಂತ್ರಜ್ಞಾನದಲ್ಲಿ ಊಟದ ತಟ್ಟೆ, ಚಮಚ ಹಾಗೂ ಆಹಾರ ಪೊಟ್ಟಣಗಳನ್ನು ಮುಂದಿನ ದಿನಗಳಲ್ಲಿ ತಯಾರಿಸುವ ಆಲೋಚನೆ ಸಂಸ್ಥೆಗೆ ಇದೆ. ಇದಕ್ಕೆ ಬಳಸಿರುವ ಯಂತ್ರ ಭಾರತದ್ದೇ ಆಗಿದೆ ಎಂಬುದು ಮತ್ತೊಂದು ವಿಶೇಷ. ಇದರಿಂದ ಸಮುದ್ರ, ಪರಿಸರಕ್ಕೆ ಯಾವುದೇ ಹಾನಿ ಇಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

English summary
Defence Food Research Laboratory has Developed biodegradable carry bags for food distribution. This can be used as an alternative to the existing non-degradable single-use plastics.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X