ಮೈಸೂರು: ಮಹಾಮಾರಿ ಡೆಂಗ್ಯೂಗೆ ಇಂಜಿನಿಯರಿಂಗ್ ವಿದ್ಯಾರ್ಥಿನಿ ಬಲಿ
ಮೈಸೂರು, ಜೂನ್ 18 : ಮಹಾಮಾರಿ ಡೆಂಗ್ಯೂ ಜ್ವರಕ್ಕೆ ಬಲಿಯಾದ ಪ್ರಕರಣಗಳು ಮೈಸೂರಿನಲ್ಲಿ ದಿನೇ ದಿನೇ ಹೆಚ್ಚುತ್ತಿದ್ದು, ಇದೀಗ ಮಾರಕ ಡೆಂಗ್ಯೂ ಇಂಜಿನಿಯರಿಂಗ್ ವಿದ್ಯಾರ್ಥಿನಿಯನ್ನು ಬಲಿ ತೆಗೆದುಕೊಂಡಿದೆ.
ಮೈಸೂರಿನ ಉದಯಗಿರಿ ಬಡಾವಣೆ ನಿವಾಸಿ ನೂರ್ ಜಾನ್ (24) ಡೆಂಗ್ಯೂವಿನಿಂದ ಮೃತಪಟ್ಟ ಯುವತಿ. ನೂರ್ ಜಾನ್ ಗೆ ಇತ್ತೀಚೆಗೆ ತೀವ್ರ ಜ್ವರ ಕಾಣಿಸಿಕೊಂಡ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ನೂರ್ ಜಾನ್ ಸಾವನ್ನಪ್ಪಿದ್ದಾಳೆ.

ಚನ್ನಪಟ್ಟಣದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಿಮ ವರ್ಷದ ವ್ಯಾಸಂಗ ಮಾಡುತ್ತಿದ್ದಳು. ಇತ್ತೀಚೆಗಷ್ಟೆ ಮೈಸೂರಿನ ಅಶೋಕಪುರಂನಲ್ಲಿ ಬಾಲಕಿ ಡೆಂಗ್ಯೂಗೆ ಬಲಿಯಾಗಿದ್ದಳು. ಜತೆಗೆ ನಂಜಗೂಡಿನಲ್ಲೂ ಡೆಂಗ್ಯೂ ಮಹಾಮಾರಿ ಅಟ್ಟಹಾಸ ಮೆರೆದಿತ್ತು.












Click it and Unblock the Notifications