• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭೂ ಸ್ವಾಧೀನ ಪರಿಹಾರ ವಿಳಂಬ: ಮುಡಾ ಆಯುಕ್ತರ ಕಾರು ವಶಕ್ಕೆ ಕೋರ್ಟ್‌ ಆದೇಶ

By ಮೈಸೂರು ಪ್ರತಿನಿಧಿ
|

ಮೈಸೂರು, ಜನವರಿ 28: ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡುವಲ್ಲಿ ವಿಳಂಬವಾದ ಕಾರಣದಿಂದ ರೈತರೊಬ್ಬರು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಸ್ವಾಧೀನಪಡಿಸಿಕೊಂಡ ಭೂಮಿಗೆ ಪರಿಹಾರ ನೀಡದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯವು, ಮುಡಾ ಆಯುಕ್ತರ ಕಾರನ್ನೆ ವಶಪಡಿಸಿಕೊಳ್ಳುವಂತೆ ಆದೇಶ ಹೊರಡಿಸಿದೆ.

ಮೈಸೂರು ಅರಮನೆಯ ಕ್ಯಾಂಡಲ್ ಹೋಲ್ಡರ್ ಗಳ ಅನ್ ಲೈನ್ ಹರಾಜು ಮೈಸೂರು ಅರಮನೆಯ ಕ್ಯಾಂಡಲ್ ಹೋಲ್ಡರ್ ಗಳ ಅನ್ ಲೈನ್ ಹರಾಜು

ಎರಡು ದಶಕಗಳ ಹಿಂದೆ ಲೇಔಟ್ ನಿರ್ಮಾಣಕ್ಕಾಗಿ ರೈತರ ಜಮೀನನ್ನು ಮುಡಾ ಸ್ವಾಧೀನಪಡಿಸಿಕೊಂಡಿಸಿತ್ತು. ಆದರೆ ಭೂ ಮಾಲೀಕರು ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ, ಪರಿಹಾರದ ಹಣ ಪಾವತಿಸುವಲ್ಲಿ ದಿವ್ಯ ನಿರ್ಲಕ್ಷ್ಯ ಮೆರೆದಿತ್ತು.

ನಂತರ ಅರ್ಜಿದಾರರು ನ್ಯಾಯಾಲಯದ ಮೆಟ್ಟಿಲು ಏರಿದರು. ಈ ಹಿನ್ನೆಲೆಯಲ್ಲಿ ಮುಡಾಗೆ ಸೇರಿದ 5 ವಾಹನಗಳನ್ನು ಜಪ್ತಿ ಮಾಡುವಂತೆ ನಾಲ್ಕನೇ ಎಸಿಜೆ ನ್ಯಾಯಾಲಯ ಆದೇಶ ಹೊರಡಿಸಿದೆ.

ಈ ಐದು ವಾಹನಗಳಲ್ಲಿ ಮೂಡಾ ಆಯುಕ್ತರ ಕಾರು ಸೇರಿದಂತೆ ಪ್ರಾಧಿಕಾರದ ಎರಡು ಕಾರುಗಳಿಗೆ ನ್ಯಾಯಾಲಯದ ಅಮೀನರು ನೋಟಿಸ್ ಪ್ರತಿ ಅಂಟಿಸಿದ್ದಾರೆ. ಸುದೀರ್ಘ ವಿಳಂಬದ ನಂತರವಾದರೂ ಮೂಡಾ ಭೂಮಿ ಕಳೆದುಕೊಂಡು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದವರಿಗೆ ಕೂಡಲೇ ಹಣ ಪಾವತಿಸುವುದೇ ಎಂದು ಕಾದು ನೋಡಬೇಕಿದೆ.

English summary
The court, hearing the non-payment of compensation for the land acquired, ordered the MUDA Commissioner's car be seized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X