ಕೊನೆಗೂ ಕೃಪೆ ತೋರಿದ ವರುಣ: ಮೈಸೂರಿನಲ್ಲಿ ದೀಪಾವಳಿ ಖರೀದಿ ಭರಾಟೆ ಜೋರು

ಮೈಸೂರು, ನವೆಂಬರ್‌ 01: ಬೆಲೆ ಏರಿಕೆ ನಡುವೆಯೂ ಜನ ಬೆಳಕಿನ ಹಬ್ಬ ದೀಪಾವಳಿಯನ್ನು ಆಚರಿಸುವ ಸಲುವಾಗಿ ಮೈಸೂರು ನಗರದ ವಿವಿಧ ಮಾರುಕಟ್ಟೆ ಪ್ರದೇಶಗಳಲ್ಲಿ ಹೂವು, ಹಣ್ಣು ತರಕಾರಿ, ಪಟಾಕಿ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿರುವ ದೃಶ್ಯ ಕಂಡು ಬಂದಿದೆ. ಮಹಿಳೆಯರು ಪುರುಷರಾದಿಯಾಗಿ ವಸ್ತುಗಳನ್ನು ಖರೀದಿಸಿ ಹಬ್ಬಾಚರಣೆಗೆ ಮುಂದಾಗಿರುವುದು ಕಂಡು ಬಂದಿದೆ.

ಈ ನಡುವೆ ಬೆಳಕಿನ ಹಬ್ಬದ ಸಂಭ್ರಮದಲ್ಲಿರುವ ಮೈಸೂರಿಗರು ಗುರುವಾರ ನರಕ ಚತುರ್ದಶಿಯನ್ನು ಸಂಭ್ರಮದಿಂದ ಆಚರಿಸಿದ್ದು, ಶನಿವಾರದ ಬಲಿಪಾಡ್ಯಮಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ನಗರದ ಪ್ರಮುಖ ಮಾರುಕಟ್ಟೆಗಳಾದ ದೇವರಾಜ ಮಾರುಕಟ್ಟೆ, ಮಂಡಿ ಮಾರ್ಕೆಟ್, ವಾಣಿವಿಲಾಸ ಮಾರುಕಟ್ಟೆ, ಧ್ವನಂತ್ರಿ ರಸ್ತೆ, ಅಗ್ರಹಾರ ವೃತ್ತ, ನಂಜುಮಳಿಗೆ, ಜೆಕೆ ಮೈದಾನದ ರಸ್ತೆ ಸೇರಿದಂತೆ ನಗರದ ನಾನಾ ರಸ್ತೆ ಹಾಗೂ ರಸ್ತೆ ಬದಿಗಳಲ್ಲಿ ಬೆಳಗ್ಗೆಯಿಂದಲೇ ಸಾರ್ವಜನಿಕರು ಹಬ್ಬದ ಉತ್ಸಾಹದಲ್ಲಿ ಹಬ್ಬಕ್ಕೆ ಬೇಕಾದ ಹಣ್ಣು, ಹೂವು, ತರಕಾರಿ, ಪೂಜಾ ಸಾಮಗ್ರಿ ಖರೀದಿಸಿದರು.

Deepavali Shopping Has Been Brisk In Mysuru Despite The Price Hike

ಹಬ್ಬದ ವೇಳೆ ಮನೆಯನ್ನು ಬೆಳಗುವ ಹಣತೆಗಳಿಗೆ ಎಳ್ಳೆಣ್ಣೆ ಹಾಕಿ ಸಾಲು ಸಾಲಾಗಿ ಜೋಡಿಸಿ ದೀಪ ಬೆಳಗುವುದು ಸಂಪ್ರದಾಯ. ಸದ್ಯ ಮಾರುಕಟ್ಟೆಯಲ್ಲಿರುವ ಪರಿಸರ ಸ್ನೇಹಿ ಮಣ್ಣಿನ ಹಣತೆಗಳಿಗೆ ಹೆಚ್ಚಿನ ಬೇಡಿಕೆ ಇದ್ದು, ಹೆಚ್ಚಿನ ವ್ಯಾಪಾರ ವಹಿವಾಟು ನಡೆಯಿತು. ಹಬ್ಬಕ್ಕೆ ನಾಲ್ಕೈದು ದಿನ ಇರುವಾಗಲೇ ವಿವಿಧ ಬಗೆಯ ಆಕೃತಿಯ ಹಣತೆಗಳು ಮಾರುಕಟ್ಟೆಗೆ ಬಂದಿವೆ.

ಪ್ರಮುಖವಾಗಿ ಶಂಖುವಿನಾಕಾರ, ಆನೆ ಮೇಲಿರುವ ಹಣತೆ, ಒಂಟೆ ಹಣತೆ, ಕುದುರೆ ಮೇಲಿರುವ ಹಣತೆ, ಗಿಳಿ ಮೇಲೆ, ನಕ್ಷತ್ರಾಕಾರ, ಬುಟ್ಟಿಯಾಕಾರ, ಕಮಲ ಹೂವಿನಾಕಾರ, ಗುಲಾಬಿಯಾಕಾರ, ಸ್ತ್ರೀಯರು ಸ್ವಾಗತಿಸುತ್ತಿರುವ ಹಣತೆ, ಪಿಂಗಾಣಿ ಹಣತೆ, ಗ್ಲಾಸ್ನಿಂದ ತಯಾರಿಸಿರುವ ಹಣತೆ, ಮಣ್ಣಿನ ಹಣತೆ ಹೀಗೆ ವಿವಿಧ ಬಗೆಯ ಹಣತೆಗಳು ಮಾರುಕಟ್ಟೆಯಲ್ಲಿ ಭರ್ಜರಿಯಾಗಿ ಮಾರಾಟವಾದವು.

Deepavali Shopping Has Been Brisk In Mysuru Despite The Price Hike

ಸಾಮಾನ್ಯವಾಗಿ ಹಬ್ಬಗಳು ಬಂತೆಂದರೆ ಹೂವಿನ ದರ ಗಗನಕ್ಕೇರುತ್ತದೆ. ಆದರೆ, ದೀಪಾವಳಿಗೆ ಹೆಚ್ಚಾಗಿ ಹೂವನ್ನು ಬಳಸದಿರುವುದರಿಂದ ದರ ಹೆಚ್ಚು ಏರಿಕೆಯಾಗಿಲ್ಲ. ಸೇವಂತಿಗೆ ಒಂದು ಮಾರಿಗೆ 100 ರೂ, ಚಂಡು ಹೂ ಕೆಜಿಗೆ 50, ಕನಕಾಂಬರ ಮಾರಿಗೆ 150, ಕಾಕಡ 50 ರೂ, ಮಲ್ಲಿಗೆ 150 ರೂ, ಗುಲಾಬಿ ಕೆಜಿಗೆ 200 ರೂ, ತಾವರೆ 2ಕ್ಕೆ 50 ರೂಗೆ ಮಾರಾಟವಾಯಿತು. ತರಕಾರಿ ದರವೂ ಏರಿಕೆಯಾಗಿರಲಿಲ್ಲ. ತೆಂಗಿನಕಾಯಿ 50 ರೂಗೆ ಎರಡು, ಬೀನ್ಸ್ 60-80, ಕ್ಯಾರೆಟ್ 60, ಬೀಟ್ರೋಟ್ 40, ಬದನೆಕಾಯಿ 40, ಕೋಸು 20, ಕ್ಯಾಪ್ಸಿಕಂ 60, ನುಗ್ಗೆ 100 ರಿಂದ 120, ಹುಳಿ ಟೊಮೆಟೊ 40 ರೂಗೆ ಮಾರಾಟವಾಯಿತು.

ಪಟಾಕಿ ಖರೀದಿ ಜೋರು

ಬೆಲೆ ಏರಿಕೆ ನಡುವೆಯೂ ಪಟಾಕಿ ಖರೀದಿ ಜೋರಾಗಿ ನಡೆಯುತ್ತಿದೆ. ನಗರದ ಹೆಬ್ಬಾಳು ಕೈಗಾರಿಕಾ ಪ್ರದೇಶ, ಜೆಕೆ ಮೈದಾನ, ಇಟ್ಟಿಗೆಗೂಡು, ಸರಸ್ವತಿಪುರಂ, ಪಡುವಾರಹಳ್ಳಿ, ಚಾಮುಂಡಿಪುರ, ನಂಜುಮಳಿಗೆ, ರಾಮಕೃಷ್ಣನಗರ, ಕುವೆಂಪುನಗರ, ಅಕ್ಷಯಭಂಡಾರ, ಕುಂಬಾರಕೊಪ್ಪಲು ಸೇರಿದಂತೆ ನಗರದ ವಿವಿಧೆಡೆ ತೆರೆದಿರುವ ಮಳಿಗೆಗಳಲ್ಲಿ ಪಟಾಕಿಯ ವ್ಯಾಪಾರ ಭರ್ಜರಿಯಾಗಿ ನಡೆಯಿತು. ಕಳೆದ ಎರಡು ದಿನಗಳಿಂದ ಮಳೆರಾಯ ಬಿಡುವು ನೀಡಿರುವುದರಿಂದ ಪಟಾಕಿ ಮಾರಾಟಗಾರರು ಕೊಂಚ ನೆಮ್ಮದಿಯುಸಿರು ಬಿಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+