ಮೈಸೂರಿನಲ್ಲಿ ಮಳೆಗೆ ಮೊದಲ ಬಲಿ : ಜಿಲ್ಲಾಡಳಿತದಿಂದ ಎಲ್ಲೋ ಅಲರ್ಟ್ ಘೋಷಣೆ
ಮೈಸೂರು, ಆಗಸ್ಟ್ 9 : ಮೈಸೂರಿನಲ್ಲಿ ಮಹಾಮಳೆಗೆ ಮನೆಯ ಗೋಡೆ ಕುಸಿದು ವ್ಯಕ್ತಿ ಮೃತಪಟ್ಟಿರುವ ಘಟನೆ ಹುಣಸೂರು ತಾಲ್ಲೂಕಿನ ವೀರನಹೊಸಹಳ್ಳಿಯಲ್ಲಿ ನಡೆದಿದೆ.
ಈ ಭಾಗದಲ್ಲಿ ಕಳೆದ ಒಂದು ವಾರಗಳಿಂದಲೂ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಮನೆ ಗೋಡೆ ಕುಸಿದು ಬಿದ್ದ ಪರಿಣಾಮ 35 ವರ್ಷದ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಸರ್ಕಾರ ಮೃತ ಕುಟುಂಬಕ್ಕೆ ಜಿಲ್ಲಾಡಳಿತದಿಂದ 5 ಲಕ್ಷ ಪರಿಹಾರ ಘೋಷಿಸಿದೆ.
ಮಹಾಮಳೆಗೆ ಧುಮ್ಮಿಕ್ಕುತ್ತಿವೆ ಕಾವೇರಿ ಕೊಳ್ಳದ ಅಣೆಕಟ್ಟೆಗಳು
ಹುಣಸೂರು ಪಟ್ಟಣದ ಬ್ರಾಹ್ಮಣರ ಬಡಾವಣೆಯ ಶ್ರೀ ಚಂದ್ರಮೌಳೇಶ್ವರ ದೇವಸ್ಥಾನ ಜಲಾವೃತಗೊಂಡಿದ್ದು, ದೇವಸ್ಥಾನದ ಮೆಟ್ಟಿಲಿನವರೆಗೂ ಲಕ್ಷ್ಮಣ ತೀರ್ಥನದಿಯ ಪ್ರವಾಹದ ನೀರು ಹರಿದುಬರುತ್ತಿದೆ. ಸಂಜೆ ವೇಳೆಗೆ ದೇವಸ್ಥಾನ ಮುಳುಗುವ ಆತಂಕ ಎದುರಾಗಿದೆ. ಮತ್ತೊಂದು ಪ್ರಕರಣದಲ್ಲಿ ಅಬ್ಬೂರು ಗ್ರಾಮದಲ್ಲಿ ಮನೆಗೆ ನೀರಿ ನುಗ್ಗಿದ ಪರಿಣಾಮ ಮೂವರು ಅಸ್ವಸ್ಥಗೊಂಡಿದ್ದು ಹನಗೋಡು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಳುಗಿದ ಕೇರಳದಲ್ಲಿ ಏರುತ್ತಿದೆ ಸಾವಿನ ಲೆಕ್ಕ; ಜನಜೀವನ ಅಸ್ತವ್ಯಸ್ತ
ಮೈಸೂರಿನ ಜಿಲ್ಲೆಯಲ್ಲಿ ಎಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಆಗಸ್ಟ್ 10 ರಿಂದ 16ವರ ಮಧ್ಯದಿಂದ ಭಾರೀ ಮಳೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ಮೇಲ್ವಿಚಾರಣಾ ಕೇಂದ್ರದಿಂದ ಮುನ್ಸೂಚನೆ ನೀಡಿದ ಕಾರಣ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್ ಈ ಮಾಹಿತಿ ನೀಡಿದ್ದಾರೆ.












Click it and Unblock the Notifications