ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಸ್ಪೆಷಲ್: ವೋಡಾಫೋನ್ ಸಹಿ ಅಭಿಯಾನ

By Mahesh
|
Google Oneindia Kannada News

ಮೈಸೂರು, ಅ.12: ಭಾರತದ ಅಗ್ರಗಣ್ಯ ಟೆಲಿಕಾಂ ಸಂಸ್ಥೆ ವೋಡಾಫೋನ್ ಹಾಗೂ ಮೈಸೂರು ಜಿಲ್ಲಾಡಳಿತ ಜಂಟಿಯಾಗಿ 'We Love Mysore Dasara' ಎಂಬ ಆಶಯವುಳ್ಳ ಅತಿದೊಡ್ಡ ಹಸ್ತಾಕ್ಷರ ಬೋರ್ಡ್ ಅಭಿಯಾನ ಆರಂಭಿಸಿದೆ.

ಅಕ್ಟೋಬರ್ 9 ರಂದು ಆರಂಭವಾದ ಈ ಅಭಿಮಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಗೃಹ ಸಚಿವ ಕೆಜೆ ಜಾರ್ಜ್, ಶಾಸಕ ವಾಸು, ಚಾಮರಾಜನಗರ ಉಸ್ತುವಾರಿ ಮಹದೇವ ಪ್ರಸಾದ್ ಅವರ ಸಮ್ಮುಖದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗಿತ್ತು. ಉತ್ತಮ ಸಂದೇಶವುಳ್ಳ ದೇಶದ ಅತಿದೊಡ್ಡ ಬೋರ್ಡ್ ಇದಾಗಲಿದೆ ಅಕ್ಟೋಬರ್ 13 ರಂದು ಹಸ್ತಾಕ್ಷರ ಸಂಗ್ರಹಕ್ಕೆ ಮುಕ್ತಾಯ ಹಾಡಲಾಗುತ್ತದೆ ಎಂದು ವೋಡಾಫೋನ್ ವಕ್ತಾರರು ಹೇಳಿದ್ದಾರೆ.

ಕರ್ನಾಟಕ ವೋಡಾಫೋನ್ ಮುಖ್ಯಸ್ಥರಾದ ಅಪೂರ್ವ ಮೆಹ್ರೋತ್ರಾ ಮಾತನಾಡಿ, ಸಾರ್ವಜನಿಕರ ಜತೆ ಉತ್ತಮವಾಗಿ ಬಾಂಧವ್ಯಹೊಂದುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶ. 'We love Mysore Dasara' ಎಂಬುದು ವಿಶಿಷ್ಟವಾದ ಸಹಿ ಅಭಿಯಾನವಾಗಿದೆ.

ನವರಾತ್ರಿ ಹಬ್ಬದ ಸಂಭ್ರಮ ಹಾಗೂ ಹೆಮ್ಮೆಯನ್ನು ಸಾರಲು ಮೈಸೂರು ದಸರಾ ಉತ್ತಮ ವೇದಿಕೆ ಒದಗಿಸಿದೆ. ಸಾರ್ವಜನಿಕರು ಅನೇಕ ಗಣ್ಯರು ಸಂತೋಷದಿಂದ ಈ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಸುಂದರ ಸಂದೇಶ, ಶುಭ ಹಾರೈಕೆ ಮೂಲಕ ದಸರಾ ಸಂಭ್ರಮವನ್ನು ವಿಶೇಷವಾಗಿಸಿದ್ದಾರೆ ಎಂದಿದ್ದಾರೆ.

Vodafone The Longest Signature and message Board in the country

ವೋಡಾಫೋನ್ ಸಮೂಹ ಸಂಸ್ಥೆ ಜಾಗತಿಕವಾಗಿ 408 ಮಿಲಿಯನ್ ಬಳಕೆದಾರರನ್ನು ಹೊಂದಿದೆ (ಜೂ.30,2013ರ ಮಾಹಿತಿಯಂತೆ) ಸುಮಾರು 30 ದೇಶಗಳಲ್ಲಿ 40ಕ್ಕೂ ಅಧಿಕ ಜಾಲ ಮಿತ್ರರ ಜತೆಗೂಡಿ ಮಾಹಿತಿ, ತಂತ್ರಜ್ಞಾನ ಹಾಗೂ ಟೆಲಿಕಾಂ ಸೇವೆ ಒದಗಿಸುತ್ತಿದೆ.

ವೊಡಾಫೋನ್ ಸಂಸ್ಥೆಯು 1994ರಿಂದಲೇ ದೇಶದಲ್ಲಿ ಅಸ್ತಿತ್ವದಲ್ಲಿ ಇದೆ. 2007ರ ಮೇ ತಿಂಗಳಿನಲ್ಲಿ ನಡೆದ ಸ್ವಾಧೀನ ಪ್ರಕ್ರಿಯೆಯಲ್ಲಿ, ಬ್ರಿಟನ್ ಮೂಲದ ವೊಡಾಫೋನ್, ಹಚಿಸನ್ ಎಸ್ಸಾರ್ ಲಿಮಿಟೆಡ್‌ನ (ಎಚ್‌ಇಎಲ್) ಶೇ 67ರಷ್ಟು ಪಾಲನ್ನು ಹಾಂಕಾಂಗ್ ಮೂಲದ ಹಚಿಸನ್ ಗ್ರೂಪ್‌ನಿಂದ ಖರೀದಿಸಿತ್ತು. ವರ್ಷದ ಆರಂಭದಲ್ಲಿ ವೊಡಾಫೋನ್ ಇಂಟರ್‌ನ್ಯಾಷನಲ್ ಹೋಲ್ಡಿಂಗ್ಸ್, 2007ರಲ್ಲಿ ಹಚ್ ಎಸ್ಸಾರ್ ಸಂಸ್ಥೆ ಸ್ವಾಧೀನಪಡಿಸಿಕೊಂಡ ವಹಿವಾಟಿಗೆ ಸಂಬಂಧಿಸಿದಂತೆ ರೂ. 11,000 ಕೋಟಿಗಳಷ್ಟು ಆದಾಯ ತೆರಿಗೆ ಮಾಫಿ ಪಡೆದಿತ್ತು.

ವೋಡಾಫೋನ್ ವೆಬ್ ಸೈಟ್ :www.vodafone.com
ಟ್ವಿಟ್ಟರ್ ಐಡಿ : @VodafoneIN

English summary
Vodafone India, one of India’s leading telecommunications service providers, with the support of the District Administration of Mysore and Mysore Palace, has initiated a unique signature cum message campaign on the theme ‘We love Mysore Dasara’.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X