ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ ಉದ್ಘಾಟನೆಯಂದೇ ಚಲನಚಿತ್ರೋತ್ಸವ: ಈ ಸಲದ ವಿಶೇಷವೇನು?

|
Google Oneindia Kannada News

ಮೈಸೂರು, ಸೆಪ್ಟೆಂಬರ್.26: ನಾಡಹಬ್ಬ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ಯುವ ದಸರಾ, ರೈತ ದಸರಾ, ಮಹಿಳೆಯರು ಮತ್ತು ಮಕ್ಕಳ ದಸರಾ..ಹೀಗೆ ವಿವಿಧ ದಸರಾಗಳ ಮಧ್ಯೆಯೇ ಉತ್ಸವವೊಂದು ನಡೆಯುತ್ತದೆ. ಅದು ದಸರಾ ಚಲನಚಿತ್ರೋತ್ಸವ.

ವಿಶ್ವ, ರಾಷ್ಟ್ರ, ರಾಜ್ಯ, ಪ್ರಾದೇಶಿಕ ಮಟ್ಟದ ವಿವಿಧ ಭಾಷೆ, ಸಂಸ್ಕೃತಿ, ಪರಂಪರೆಯನ್ನು ಬಿಂಬಿಸುವ ಚಲನಚಿತ್ರಗಳನ್ನು ಈ ಉತ್ಸವದಲ್ಲಿ ಪ್ರದರ್ಶಿಸುವುದು ವಾಡಿಕೆ. ಈ ಬಾರಿ ಅ.12ರಿಂದ 17ರವರೆಗೆ ದಸರಾ ಚಲನಚಿತ್ರೋತ್ಸವ ನಗರದ ಐನಾಕ್ಸ್ ನ ಮೂರು ಸ್ಕ್ರೀನ್ ಗಳಲ್ಲಿ ತಲಾ ನಾಲ್ಕು ಪ್ರದರ್ಶನಗಳನ್ನು ಏರ್ಪಡಿಸಲು ಚಲನಚಿತ್ರೋತ್ಸವ ಸಮಿತಿ ಆಲೋಚಿಸಿದೆ.

ದಸರಾ ವಸ್ತು ಪ್ರದರ್ಶನ: ಈ ಬಾರಿ ಪ್ರಾಧಿಕಾರವೇ ನಿರ್ವಹಿಸಲಿದೆಯಾ?ದಸರಾ ವಸ್ತು ಪ್ರದರ್ಶನ: ಈ ಬಾರಿ ಪ್ರಾಧಿಕಾರವೇ ನಿರ್ವಹಿಸಲಿದೆಯಾ?

ಒಂದೇ ಕಡೆ ಪ್ರದರ್ಶನ ಏರ್ಪಡಿಸಿರುವುದರಿಂದ ಸಿನಿಪ್ರಿಯರಿಗೆ ಅನುಕೂಲ ಎಂಬುದು ಸಮಿತಿಯ ಚಿಂತನೆ. ಒಟ್ಟು 72 ಚಲನಚಿತ್ರಗಳು ಈ ಬಾರಿ ಸಾರ್ವಜನಿಕರ ವೀಕ್ಷಣೆಗೆ ದೊರೆಯಲಿವೆ. ಅದರಲ್ಲಿ ಮೂರು ವಿಭಾಗಗಳಿದ್ದು, ಅಂತಾರಾಷ್ಟ್ರೀಯ, ಭಾರತ ಪನೋರಮ ಮತ್ತು ಜನಪ್ರಿಯ ಚಿತ್ರಗಳು ಎಂಬುದಾಗಿ ವಿಂಗಡಿಸಲಾಗಿದೆ.

Dasara Film Festival will be held from 12th to 17th this time

ಈ ಬಾರಿಯೂ ಚಲನಚಿತ್ರೋತ್ಸವ ದಸರಾ ಉದ್ಘಾಟನೆಯಂದೇ ನಡೆಯಲಿದೆ. ಆದರೆ, ಚಿತ್ರಗಳ ಪ್ರದರ್ಶನ ಮಾತ್ರ ಎರಡು ದಿನಗಳ ನಂತರ ಆರಂಭವಾಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

 ದಸರಾ ಕಾರ್ ರೇಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ ದಸರಾ ಕಾರ್ ರೇಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಕೊಡಗಿನ ಬೆಡಗಿ ನಿಧಿ ಸುಬ್ಬಯ್ಯ

ಇದಲ್ಲದೆ, ಸಿನಿಮಾಗಳಿಗೆ ಸಂಬಂಧಿಸಿದಂತೆ ಒಂದು ದಿನದ ಕಾರ್ಯಾಗಾರವನ್ನೂ ಏರ್ಪಡಿಸಲು ಪ್ರಯತ್ನ ನಡೆದಿದ್ದು, ಐನಾಕ್ಸ್ ಅಲ್ಲದೆ, ಡಿಆರ್ ಸಿಗೂ ಚಿತ್ರೋತ್ಸವವನ್ನು ವಿಸ್ತರಿಸಬೇಕೆ ಎಂಬ ಕುರಿತು ಚರ್ಚೆ ನಡೆದಿದೆ.

ಅಂತಿಮವಾಗಿ ದಸರಾ ಉನ್ನತಾಧಿಕಾರ ಸಮಿತಿ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

 ಮಾವುತರಿಗೆ ಸ್ಪೆಷಲ್ ಊಟ ಬಡಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾವುತರಿಗೆ ಸ್ಪೆಷಲ್ ಊಟ ಬಡಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ದಸರಾ ಚಲನಚಿತ್ರೋತ್ಸವವನ್ನು ಅತ್ಯಾಧುನಿಕ ಸುಸಜ್ಜಿತ ಮಾಲ್ ಗಳಲ್ಲಿ ಮಾತ್ರ ಆಯೋಜಿಸುತ್ತಿರುವುದಕ್ಕೆ ಸಾರ್ವಜನಿಕರ ವಲಯದಲ್ಲಿ ಆಕ್ಷೇಪ ವ್ಯಕ್ತವಾಗಿದೆ. ಸಾಮಾನ್ಯ ಚಿತ್ರಮಂದಿರಗಳಲ್ಲಿ ಕೂಡ ಚಲನಚಿತ್ರೋತ್ಸವ ಆಯೋಜಿಸಿದರೆ ಇನ್ನೂ ಹೆಚ್ಚು ಮಂದಿ ವೀಕ್ಷಿಸಲು ಅನುಕೂಲವಾಗುತ್ತದೆ.

ಐನಾಕ್ಸ್ ಅಥವಾ ಡಿಆರ್ ಸಿಗಳಂತಹ ಕಡೆ ನಡೆಯುವ ಪ್ರದರ್ಶನಗಳಿಗೆ ಜನಸಾಮಾನ್ಯರು ಹೋಗುವುದು ಕಷ್ಟಸಾಧ್ಯ. ಈ ಬಗ್ಗೆ ಸಮಿತಿ ಆಲೋಚಿಸಬೇಕು ಎಂದು ಜನರು ಆಗ್ರಹಿಸಿದ್ದಾರೆ.

English summary
Dasara Film Festival will be held from 12th to 17th this time. Film Festival Committee plans to make four shows on Inax's three screens.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X