ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಕ್ಷ್ಮಿ ಪುತ್ರನಿಗೆ 'ಶ್ರೀದತ್ತಾತ್ರೇಯ' ಎಂದು ನಾಮಕರಣ ಮಾಡಿದ ಮಹಾರಾಣಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಸೆಪ್ಟೆಂಬರ್ 15: ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿದ್ದ ಲಕ್ಷ್ಮಿ ಎಂಬ ಹೆಣ್ಣಾನೆಯು ಸೆಪ್ಟೆಂಬರ್ 13ರಂದು ಅರಮನೆ ಬಳಿಯ ಕೋಡಿ ಸೋಮೇಶ್ವರ ದೇಗುಲದ ಬಳಿ ಗಂಡು ಮರಿಗೆ ಜನ್ಮ ನೀಡಿತ್ತು.

Dasara Elephant Lakshmis calf named as Sridattatreya by Pramoda Devi wadiyar

ಅರಮನೆಯೊಂದಿಗೆ ಸಂಬಂಧ ಹೊಂದಿದ್ದ ಲಕ್ಷ್ಮಿ ಮರಿಯೊಂದಕ್ಕೆ ಜನ್ಮ ನೀಡಿದ್ದಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಸಂತಸ ವ್ಯಕ್ತಪಡಿಸಿದ್ದರು. ಇದೀಗ ಪ್ರಮೋದಾದೇವಿ ಒಡೆಯರ್ ಮರಿ ಆನೆಗೆ 'ಶ್ರೀದತ್ತಾತ್ರೇಯ' ಎಂದು ನಾಮಕರಣ ಮಾಡಿದ್ದಾರೆ. ಸುರಕ್ಷತಾ ದೃಷ್ಟಿಯಿಂದ ಅರಮನೆಯಲ್ಲೇ ಲಕ್ಷ್ಮಿ ಹಾಗೂ ಮರಿ ಆನೆ ಇರಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಮರಿ ಆನೆ ಬಳಿ ಯಾರು ಹೋಗದಂತೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.

ಲಕ್ಷ್ಮಿ ಗರ್ಭಿಣಿ ಎನ್ನುವುದು ಗೊತ್ತೇ ಇರಲಿಲ್ಲವಂತೆ!
ಜಂಬೂ ಸವಾರಿಗೆ ತಿಂಗಳಿರುವಾಗಲೇ ಎಲ್ಲಾ 14 ಆನೆಗಳಿಗೂ ತರಬೇತಿ ನೀಡಲಾಗುತ್ತಿದೆ. ಈ ಪೈಕಿ 21 ವರ್ಷದ ಆನೆ ಲಕ್ಷ್ಮಿ ಮಂಗಳವಾರ ರಾತ್ರಿ ಆರೋಗ್ಯವಂತ ಮರಿ ಆನೆಗೆ ಜನ್ಮ ನೀಡಿದೆ. ಆದರೆ ಅರಮನೆ ಆವರಣದಲ್ಲಿ ಹೆರಿಗೆಯಾದ ಲಕ್ಷ್ಮಿ ಆನೆ ಗರ್ಭಿಣಿ ಎಂಬುದೇ ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಅಥವಾ ಮಾವುತರಿಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ದಸರಾ ಜಂಬೂ ಸವಾರಿಗಾಗಿ ತರಬೇತಿ ನೀಡಲಾಗುತ್ತಿರುವ 14 ಆನೆಗಳಿಗೆ ಹೆಚ್ಚಿನ ಆರೈಕೆ ಮತ್ತು ಪೋಷಣೆಯನ್ನು ನೀಡಲಾಗಿದ್ದರೂ, ಅರಣ್ಯ ಅಧಿಕಾರಿಗಳು, ಪಶುವೈದ್ಯರು ಮತ್ತು ಮಾವುತರು ಅವುಗಳಲ್ಲಿ ಒಂದು ತುಂಬು ಗರ್ಭಿಣಿ ಎಂದು ತಿಳಿದುಕೊಳ್ಳುವಲ್ಲಿ ವಿಫಲರಾಗಿದ್ದರು. 2017 ರಲ್ಲಿ ಮೊದಲ ಬಾರಿಗೆ ದಸರಾಗೆ ಲಕ್ಷ್ಮಿಯನ್ನು ಕರೆತರಲಾಯಿತು, ಆ ಸಮಯದಲ್ಲಿ ಫಿರಂಗಿ ಗುಂಡು ಹಾರಿಸುವಾಗ ಭೀತಿಗೊಳಗಾಗಿದ್ದರಿಂದ ಜಂಬೂ ಸವಾರಿ ಮೆರವಣಿಗೆಯಿಂದ ಹೊರಗಿಡಲಾಗಿತ್ತು.

ಮಂಗಳವಾರ ಮಧ್ಯಾಹ್ನ ಲಕ್ಷ್ಮಿ ಆನೆಯ ನಡವಳಿಕೆಯಲ್ಲಿ ಸ್ವಲ್ಪ ಬದಲಾವಣೆ ಕಂಡುಬಂದಿತ್ತು. ತಕ್ಷಣ ನಾವು ಈ ಆನೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಡಿಸಿದ ನಂತರ ಗರ್ಭಿಣಿ ಎಂದು ಗೊತ್ತಾಯಿತು. ಅದೇ ರಾತ್ರಿ ಗಂಡು ಮರಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮರಿ ಆರೋಗ್ಯವಾಗಿವೆ ಎಂದು ಡಿಎಫ್‌ಒ ಕರಿಕಾಳನ್‌ ಮಾಧ್ಯಮಕ್ಕೆ ತಿಳಿಸಿದ್ದರು.

ಜಂಬೂ ಸವಾರಿಗಾಗಿ ಆನೆ ಶಿಬಿರಕ್ಕೆ ಆನೆಗಳನ್ನು ಪರೀಕ್ಷಿಸಲು ಹೋದಾಗ ಈ ಆನೆ ಗರ್ಭಿಣಿ ಎಂದು ಗೊತ್ತಿರಲಿಲ್ಲ. ಹಾಗಾಗಿ ದಸರಾದಲ್ಲಿ ಭಾಗವಹಿಸಲು ಈ ಆನೆಯನ್ನು ಆಯ್ಕೆ ಮಾಡಲಾಗಿತ್ತು ಎಂದು ಅವರು ಮಾಹಿತಿ ನೀಡಿದ್ದರು.

ಅರಣ್ಯ ಇಲಾಖೆ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ
ತುಂಬು ಗರ್ಭಿಣಿ ಆನೆಯನ್ನು ದಸರಾಗೆ ಕರೆತಂದು ಅದಕ್ಕೆ ಶಬ್ಧ ತಾಲೀಮು ಸೇರಿದಂತೆ ಹಲವು ರೀತಿಯ ತರಬೇತಿಗಳನ್ನು ನೀಡುವ ಮೂಲಕ ಮಾನಸಿಕ ಹಿಂಸೆಯನ್ನು ನೀಡಲಾಗಿದೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳಳ ಜಾಗೃತ ವೇದಿಕೆ ವತಿಯಿಂದ ಅರಮನೆ ಬಳಿ ಪ್ರತಿಭಟನೆ ನಡೆಸಿದ ಘಟನೆಯೂ ಗುರುವಾರ ನಡೆದಿದೆ.

ಈ ವೇಳೆ ಮಾತನಾಡಿದ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು, ಅರಣ್ಯ ಇಲಾಖೆ ತಾನೇ ರೂಪಿಸಿದ ಮಾರ್ಗಸೂಚಿಗೆ ವಿರುದ್ಧವಾಗಿ ನಡೆದುಕೊಂಡಿದೆ. ಮಾರ್ಗಸೂಚಿಯ ಪ್ರಕಾರ ಮಸ್ತಿಯಲ್ಲಿರುವ ಗಂಡಾನೆ ಹಾಗೂ ಗರ್ಭಿಣಿಯಾದ ಹೆಣ್ಣಾನೆಯನ್ನು ದಸರಾ ಮಹೋತ್ಸವಕ್ಕೆ ಕರೆತರುವಂತಿಲ್ಲ. ಇದಕ್ಕಾಗಿ ಎರಡು ತಿಂಗಳ ಮುಂಚಿತವಾಗಿಯೇ ಎಲ್ಲಾ ಆನೆಗಳಿಗೆ ಆರೋಗ್ಯ ತಪಾಸಣೆಯನ್ನು ಮಾಡಿಸಲಾಗುತ್ತದೆ. ಆದರೆ ಅರಣ್ಯ ಇಲಾಖೆ ಲಕ್ಷಿ ಗರ್ಭಿಣಿ ಆನೆಯನ್ನು ಗುರುತಿಸುವಲ್ಲಿ ವಿಫಲವಾಗಿದೆ. ಇದು ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯವೇ ಸರಿ ಎಂದು ಬೇಸರ ವ್ಯಕ್ತಪಡಿಸಿದರು.

English summary
The male calf of Dasara elephant Lakshmi has been named as Sridattatreya by Dr. Pramoda Devi Wadiyar, meber of of royal family of Mysuru on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X