ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಅರಮನೆ ಆವರಣದಲ್ಲಿ ಗಂಡು ಮರಿಗೆ ಜನ್ಮ ನೀಡಿದ ದಸರಾ ಆನೆ ಲಕ್ಷ್ಮಿ

|
Google Oneindia Kannada News

ಮೈಸೂರು, ಸೆಪ್ಟೆಂಬರ್ 14: ದಸರಾ ಜಂಬೂ ಸವಾರಿ ತಂಡದ ಲಕ್ಷ್ಮಿ ಹೆಸರಿನ ಆನೆ ಮಂಗಳವಾರ ರಾತ್ರಿ ಗಂಡು ಮರಿಗೆ ಜನ್ಮ ನೀಡಿದೆ. ಆನೆ ಹಾಗೂ ಮರಿ ಎರಡು ಆರೋಗ್ಯವಾಗಿದ್ದು, ದಸರಾ ಗಜಪಡೆಯಿಂದ ಲಕ್ಷ್ಮಿ ಆನೆಯನ್ನು ಪ್ರತ್ಯೇಕಿಸಲಾಗಿದೆ.

ಮರಿ ಇರುವುದರಿಂದ ಅರಮನೆಯ ಆವರಣದ ನಿರ್ಬಂಧಿತ ಪ್ರದೇಶದಲ್ಲಿ ಲಕ್ಷ್ಮಿ ಮತ್ತು ಮರಿಯನ್ನು ಇರಿಸಲಾಗಿದ್ದು, ಎರಡು ಆರೋಗ್ಯದಿಂದ ಇದ್ದು, ಮುಂದಿನ ಕೆಲವು ದಿನಗಳವರೆಗೂ ಲಕ್ಷ್ಮಿ ಆನೆಗೆ ತೊಂದರೆ ಕೊಡಬಾರದು ಎಂದು ಅರಣ್ಯ ಅಧಿಕಾರಿಗಳು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ. ಲಕ್ಷ್ಮಿ ಮತ್ತು ಮರಿಯ ಫೋಟೋವನ್ನು ಮುಂದಿನ ದಿನಗಳಲ್ಲಿ ಹಂಚಿಕೊಳ್ಳಲಾಗುವುದು ಪ್ರಕಟಣೆ ಹೊರಡಿಸಿದ್ದಾರೆ.

ಮೈಸೂರು ದಸರಾ ವಿಶೇಷ; ದಸರಾ ಗಜಪಡೆ ಸುಂದರವಾಗಿ ಕಾಣುವುದು ಹೇಗೆ?ಮೈಸೂರು ದಸರಾ ವಿಶೇಷ; ದಸರಾ ಗಜಪಡೆ ಸುಂದರವಾಗಿ ಕಾಣುವುದು ಹೇಗೆ?

ಇನ್ನು ದಸರಾ ಜಂಬೂಸವಾರಿಯಲ್ಲಿ ಭಾಗವಹಿಸಲು ವಿವಿಧ ಆನೆ ಬಿಡಾರಗಳಿಂದ ಮೊದಲ ತಂಡದಲ್ಲಿ 9 ಹಾಗೂ 2ನೇ ತಂಡದಲ್ಲಿ 5 ಸೇರಿದಂತೆ ಒಟ್ಟು 14 ಆನೆಗಳು ಮೈಸೂರು ಅರಮನೆಗೆ ಆಗಮಿಸಿವೆ. ಈಗಾಗಲೆ 14 ಆನೆಗಳಿಗೆ ತಾಲೀಮು ಆರಂಭಗೊಂಡಿದೆ. ಅಂಬಾರಿ ಆನೆ ಅಭಿಮನ್ಯು ನೇತೃತ್ವದ 14 ಆನೆಗಳು ದಸರಾ ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿದ್ದು, ಚೈತ್ರಾ, ಕಾವೇರಿ, ಲಕ್ಷ್ಮಿ ಹಾಗೂ ವಿಜಯಾ ಹೆಣ್ಣಾನೆಗಳಾಗಿವೆ.

ಲಕ್ಷ್ಮಿ ಆನೆ ಮರಿ ಹಾಕಿರುವುದರಿಂದ ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವುದು ಬಹುತೇಕ ಅನುಮಾನವಾಗಿದೆ. 15 ವರ್ಷದ ಹಿಂದಿನ ದಸರಾದಲ್ಲಿ ಭಾಗವಹಿಸಿದ್ದ ಸರಳ ಎಂಬ ಆನೆಯೂ ಸಹಾ ಅರಮನೆಯಲ್ಲೇ ಮರಿಗೆ ಜನ್ಮ ನೀಡಿದ್ದು, ಆ ಮರಿಗೆ ಚಾಮುಂಡಿ ಎಂದು ಹೆಸರಿಡಲಾಗಿತ್ತು.

Dasara Elephant Lakshmi gave Birth to a Male Baby on Sep 13 at Mysuru Palace Premises

ಇನ್ನೂ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳಿಗೆ ವಿಶೇಷ ಆಹಾರ ನೀಡಿ ತಯಾರು ಮಾಡಲಾಗುತ್ತಿದೆ. ಆಗಸ್ಟ್‌ 10ರಂದು ಅರಮನೆ ಪ್ರವೇಶಿಸಿದ ಗಜಪಡೆಗೆ ಮರುದಿನ 09 ಆನೆಗಳಿಗೆ ತೂಕ ಪರೀಕ್ಷೆ ನಡೆಸಲಾಗಿತ್ತು. ಬಳಿಕ ಶುಕ್ರವಾರ ಮೊದಲ ಮತ್ತು ಎರಡನೇ ತಂಡ ಸೇರಿ ಎಲ್ಲಾ 14 ಆನೆಗಳಿಗೂ ನಡೆಸಿದ ತೂಕ ಪರೀಕ್ಷೆಯಲ್ಲಿ ಅಂಬಾರಿ ಆನೆ ಅಭಿಮನ್ಯು 4770 ರಿಂದ 5 ಸಾವಿರ ಕೆ.ಜಿಗೆ ಹೆಚ್ಚಳವಾಗಿದ್ದು, ಒಟ್ಟು 230 ಕೆ.ಜಿ. ಹೆಚ್ಚಿಸಿಕೊಂಡಿತ್ತು.

ಗಜಪಡೆ ತೂಕ ಪರೀಕ್ಷೆ; ಅರ್ಜುನ ಮತ್ತೆ ಟಾಪರ್, 5 ಟನ್ ತಲುಪಿದ ಅಭಿಮನ್ಯುಗಜಪಡೆ ತೂಕ ಪರೀಕ್ಷೆ; ಅರ್ಜುನ ಮತ್ತೆ ಟಾಪರ್, 5 ಟನ್ ತಲುಪಿದ ಅಭಿಮನ್ಯು

ಭವಿಷ್ಯದ ಅಂಬಾರಿ ಆನೆ ಎಂದೇ ಗುರುತಿಸಿಕೊಳ್ಳುತ್ತಿರುವ ಹಾಗೂ 2ನೇ ಬಾರಿಗೆ ದಸರಾ ಉತ್ಸವದಲ್ಲಿ ಪಾಲ್ಗೊಂಡಿರುವ ಭೀಮ ಒಂದು ತಿಂಗಳಲ್ಲಿ ಎಲ್ಲಾ ಆನೆಗಳಿಗಿಂತ ಹೆಚ್ಚು ತೂಕ ಹೆಚ್ಚಿಸಿಕೊಂಡಿದ್ದಾನೆ. ಪುಂಡಾನೆ ಪಳಗಿಸುವ ಪಂಟರ್‌ ಬರೋಬ್ಬರಿ 425 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಕಳೆದ ತಿಂಗಳ ತೂಕ ಪರೀಕ್ಷೆಯಲ್ಲಿ 3,950 ಕೆ.ಜಿ ಭಾರವಿದ್ದ ಭೀಮ 4,345 ಕೆ.ಜಿ ತೂಗಿದನು.

ಹಾಗೆಯೇ ಮಹೇಂದ್ರ 4,450 ಕೆ.ಜಿ ತೂಗುವ ಮೂಲಕ 200 ಕೆ.ಜಿ ತೂಕ ಹೆಚ್ಚಿಸಿಕೊಂಡಿದ್ದಾನೆ. ಉಳಿದಂತೆ ಧನಂಜಯ 4,890 ಕೆ.ಜಿ.ತೂಕ ಹೊಂದಿದ್ದಾನೆ. ಮೊದಲ ತೂಕದ ಪರೀಕ್ಷೆಯಲ್ಲಿ 4,810 ಕೆ.ಜಿ. ಇದ್ದ ಧನಂಜಯ, ಒಂದು ತಿಂಗಳ ಅಂತರದಲ್ಲಿ 80 ಕೆ.ಜಿ.ತೂಕ ಹೆಚ್ಚಿಸಿಕೊಂಡಿದ್ದಾನೆ. ಮೊದಲ ತಂಡದ ಹೆಣ್ಣಾನೆಗಳಾದ ಕಾವೇರಿ 3,245 (ಮೊದಲು 3,105) ಕೆ.ಜಿ., ಚೈತ್ರಾ 3,235 (ಮೊದಲು 3,050) ಕೆ.ಜಿ., ಲಕ್ಷ್ಮೀ 3,150 (ಮೊದಲು 2,920) ಕೆ.ಜಿ. ತೂಕ ಹೊಂದಿವೆ.

English summary
Dasara Elephant Lakshmi has given birth to a baby elephant on Tuesday. Lakshmi was separated from other elephants in the camp and kept her in a restricted area within the palace premises. Both Lakshmi and baby elephant are doing good.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X