ಸೈಕಲ್ ಪ್ಯೂರ್ ಅಗರಬತ್ತಿ ಗೋದಾಮಿಗೆ ಬೆಂಕಿ: ಲಕ್ಷಾಂತರ ರೂ. ನಷ್ಟ
ಮೈಸೂರು, ಜೂನ್.10 : ಪ್ರಸಿದ್ಧ ಸೈಕಲ್ ಪ್ಯೂರ್ ಅಗರಬತ್ತಿ ಗೋದಾಮಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿರುವ ಘಟನೆ ಭಾನುವಾರ ಬೆಳಗ್ಗೆ 8 ಗಂಟೆಗೆ ಸಂಭವಿಸಿದೆ. ಅಶೋಕಪುರಂನ ರೈಲ್ವೆ ಕಾರ್ಯಾಗಾರದ ಮಾನದಂವಾಡಿ ರಸ್ತೆ ಬಳಿಯಲ್ಲಿ ಈ ಘಟನೆ ನಡೆದಿದೆ.
ಲಕ್ಷಾಂತರ ಮೌಲ್ಯದ ಅಗರಬತ್ತಿ ಉಪಕರಣಗಳು ಬೆಂಕಿಗಾಹುತಿಯಾಗಿವೆ ಎನ್ನಲಾಗಿದ್ದು, ಘಟನೆ ಮಾಹಿತಿ ಪಡೆದುಕೊಂಡು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎನ್ ಆರ್ ಸಮೂಹದ ಒಡೆತನದಲ್ಲಿರುವ ಅತಿದೊಡ್ಡ ಧೂಪದ್ರವ್ಯ ಉತ್ಪಾದಕರಾಗಿರುವ ಜನಪ್ರಿಯ ಸೈಕಲ್ ಪ್ಯೂರ್ ಅಗರಬತ್ತಿ ಉದ್ಯಮದಲ್ಲಿ ಪ್ರಮುಖ ಪೂರೈಕೆದಾರರಾಗಿ ಗುರುತಿಸಿಕೊಂಡಿದೆ. ಮೈಸೂರು ಅಗರಬತ್ತಿ ತಯಾರಿಕೆಗೆ ಬಹಳ ಪ್ರಸಿದ್ಧ. ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಂಡು ಬರುತ್ತಿರುವುದರಿಂದ ದೇಶದೆಲ್ಲೆಡೆ ಭಾರಿ ಬೇಡಿಕೆ.

ರಾಜ್ಯ, ಅಂತರರಾಜ್ಯ, ಅಲ್ಲದೆ ವಿವಿಧ ದೇಶಗಳಿಗೂ ರಫ್ತಾಗುವ ಮೈಸೂರು ಅಗರಬತ್ತಿಯ ಇತಿಹಾಸವೂ ಕುತೂಹಲಕಾರಿ.











Click it and Unblock the Notifications