ಮೈಸೂರಿಗರಿಗೆ ಗುಡ್ ನ್ಯೂಸ್: ಸೆಪ್ಟೆಂಬರ್ ನಿಂದ ಪ್ರತಿ ಮನೆಗೂ 24x7 ನೀರು

ಮೈಸೂರು, ಜನವರಿ 29: ಮೈಸೂರಿಗರ ಬಹುದೊಡ್ಡ ಸಮಸ್ಯೆ ಕುಡಿಯುವ ನೀರು. ಒಂದು ಕಡೆ ದಿನವೂ ಬಂದರೆ, ಮತ್ತೊಂದೆಡೆ ವಾರಕ್ಕೆ 2-3 ಬಾರಿ ಬರುತ್ತದೆಂಬ ಮಾತು ಕೇಳಿ ಬರುತ್ತಿದೆ. ಇದಕ್ಕೆ ಇತಿ ಶ್ರೀ ಹಾಡಲು ಈಗಾಗಲೇ ಜಿಲ್ಲಾಡಳಿತ ಸಜ್ಜಾಗಿದೆ.

ನಗರಕ್ಕೆ ಇನ್ನು 8 ತಿಂಗಳಲ್ಲಿ ಪತಿನಿತ್ಯ 24 ಗಂಟೆಗಳ ಕಾಲವೂ ಕುಡಿಯುವ ನೀರು ಸರಬರಾಜು ಆಗಲಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಸಿದ್ಧತೆಗಳೂ ನಡೆಯುತ್ತಿವೆ.

ಮುಂದಿನ ಆಗಸ್ಟ್ ಅಥವಾ ಸೆಪ್ಟೆಂಬರ್ ತಿಂಗಳಿಂದ ಮೈಸೂರು ನಗರದ ಎಲ್ಲ ಬಡಾವಣೆಗಳಲ್ಲೂ ಪ್ರತೀ ಮನೆಗೂ 24x7 ನೀರು ಧಾರಾಳವಾಗಿ ಬರಲಿದೆ. ನೀರು ಸರಬರಾಜು ಯೋಜನೆಗೆ ಸಂಬಂಧಿಸಿದ ಬಹುತೇಕ ಕಾಮಗಾರಿಗಳು ಪೂರ್ಣಗೊಳ್ಳುವ ಹಂತ ತಲುಪಿದೆ.

Corporation will supplying 24 hours of drinking water in Mysuru

ನಗರಕ್ಕೆ ಪ್ರಸ್ತುತ ಸರಬರಾಜಾಗುತ್ತಿರುವ ನೀರು ಹೆಚ್ಚುವರಿಯಾಗಿ ಹೊಂಗಳ್ಳಿ 3ನೇ ಹಂತದಿಂದ 13 ಎಂಎಲ್ ಡಿ ಹಾಗೂ ಮೇಳಾಪುರ 4ನೇ ಹಂತದಿಂದ 30 ಎಂಎಲ್ ಡಿ ಹರಿದುಬರಲಿದೆ. ನಗರಕ್ಕೆ ಒಟ್ಟಾರೆಯಾಗಿ 43 ಎಂಎಲ್ ಡಿ ಹೆಚ್ಚುವರಿ ನೀರು ಹರಿದುಬರಲಿದ್ದು, ಕುಡಿಯುವ ನೀರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ.

ಅಮೃತ್ ಯೋಜನೆ ಕಾಮಗಾರಿಗಳು

ಮೈಸೂರು ನಗರಕ್ಕೆ ಕೇಂದ್ರ ಪುರಸ್ಕೃತ ಅಟಲ್ ನಗರ ಪರಿವರ್ತನಾ ಪುನರುಜ್ಜೀವನ ಅಭಿಯಾನ (ಅಮೃತ್) ಯೋಜನೆಯಡಿ ಒಟ್ಟು 174.87 ಕೋಟಿ ರೂ. ಮಂಜೂರಾಗಿದ್ದು, ಈಗಾಗಲೇ 75.95 ಕೋಟಿ ರೂ. ಬಿಡುಗಡೆಯಾಗಿ ಬಹುತೇಕ ಕಾಮಗಾರಿ ಪೂರ್ಣಗೊಂಡು, ವಿಜಯನಗರ 2ನೇ ಹಂತ ಹಾಗೂ ಯಾದವಗಿರಿಯಲ್ಲಿ ನಿರ್ಮಿಸುತ್ತಿರುವ 13 ಎಂಎಲ್ ಡಿ ಸಾಮರ್ಥ್ಯದ ಜಲಸಂಗ್ರಹಗಾರಗಳ ಕಾಮಗಾರಿ ಹಾಗೂ ಹಳೆಯ 27 ಎಂಎಲ್ ಸಾಮರ್ಥ್ಯದ ಜಲಸಂಗ್ರಹಗಾರದ ದುರಸ್ತಿ ಕಾಮಗಾರಿಗಳು ಮುಂದಿನ ಫೆಬ್ರವರಿ ತಿಂಗಳು ಪೂರ್ಣಗೊಳ್ಳಲಿದೆ.

ಪ್ರವಾಸಿ ತಾಣವಾಗಿರುವ ಚಾಮುಂಡಿಬೆಟ್ಟಕ್ಕೆ ನೀರು ಸರಬರಾಜು ವ್ಯವಸ್ಥೆ ಹಾಗೂ ಜಲಸಂಗ್ರಹಗಾರ ಪಂಪುಮನೆಗಳು ಸುಮಾರು 40 ವರ್ಷಗಳಿಗೂ ಹೆಚ್ಚು ಹಳೆಯದಾಗಿದೆ. ಇಲ್ಲಿ ದಿನಕ್ಕೆ ಕೇವಲ 4ರಿಂದ 5 ಲಕ್ಷ ಲೀ.ನೀರು ಸರಬರಾಜಾಗುತ್ತಿದೆ.

ಇದನ್ನು 2046ನೇ ಇಸವಿಗೆ ಇರಬಹುದಾದ ಜನಸಂಖ್ಯೆ ಹಾಗೂ ಸಾರ್ವಜನಿಕರ ಭೇಟಿಯನ್ನು ಗಮನದಲ್ಲಿಟ್ಟುಕೊಂಡು 3ರಿಂದ 3.6ದಶ ಲಕ್ಷ ಲೀ. ನೀರು ಸರಬರಾಜು ಮಾಡುವ ಯೋಜನೆಯನ್ನು ರೂಪಿಸಲಾಗಿದ್ದು, ಇದು ಸಹ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+