ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ 8 ಕಿಲೋ ಮೀಟರ್‌ ಸೈಕಲ್ ಟ್ರ್ಯಾಕ್ ನಿರ್ಮಾಣ, ಮಾರ್ಗಗಳ ವಿವರ ಇಲ್ಲಿದೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ನವೆಂಬರ್‌, 09: ಮೈಸೂರು ಸಾಂಸ್ಕೃತಿಕ ನಗರಿ ಹೇಗೋ ಹಾಗೆಯೇ ಸೈಕಲ್ ನಗರಿ ಕೂಡ ಆಗಿದೆ. ಪರಿಸರ ಸ್ನೇಹಿ ಸೈಕಲ್ ಸವಾರಿಯನ್ನು ಉತ್ತೇಜಿಸುವ ಸಲುವಾಗಿ ನಗರದಲ್ಲಿ 8 ಕಿಲೋ ಮೀಟರ್‌ ಸೈಕಲ್ ಟ್ರ್ಯಾಕ್ ನಿರ್ಮಾಣಕ್ಕೆ ಅಗತ್ಯ ಸಿದ್ಧತೆ ನಡೆಯುತ್ತಿದೆ.

ಮೈಸೂರು ಬೆಂಗಳೂರಿನ ರೀತಿ ಆಗಬಾರದು ಎಂಬುದು ಹಲವರ ಅಭಿಪ್ರಾಯ ಆಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಈಗಾಗಲೇ 'ಟ್ರಿಣ್ ಟ್ರಿಣ್' ಯೋಜನೆಯನ್ನು ಜಾರಿಗೆ ತರಲಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಟ್ರಿಣ್ ಟ್ರಿಣ್ ಯೋಜನೆಗೆ ಚಾಲನೆ ನೀಡಿದ್ದರು. ಅಲ್ಲದೇ ಸ್ವತಃ ಸೈಕಲ್ ಚಾಲನೆ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಇದು ದೇಶದಲ್ಲೇ ಮೊಟ್ಟಮೊದಲ ಸೈಕಲ್ ಯೋಜನೆ ಆಗಿದೆ. ಮೈಸೂರಿನ 52 ಡಾಕಿಂಗ್ ಸೆಂಟರ್‌ಗಳಲ್ಲಿ 450 ಬೈಸಿಕಲ್‌ಗಳು 'ಟ್ರಿಣ್ ಟ್ರಿಣ್' ಅಡಿ ಸೇವೆ ನೀಡುತ್ತಿವೆ.

ಇವರೇ ನೋಡಿ ಸ್ವದೇಶಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸೃಷ್ಟಿಕರ್ತಇವರೇ ನೋಡಿ ಸ್ವದೇಶಿ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿನ ಸೃಷ್ಟಿಕರ್ತ

ನಗರದಲ್ಲಿ ಟ್ರಿಣ್ ಟ್ರಿಣ್ ಸೈಕಲ್ ಬಳಸುವ ಕುರಿತಂತೆ 17,300 ಜನ ತಮ್ಮ ಹೆಸರನ್ನು ನೋಂದಣಿ ಮಾಡಿಸಿಕೊಂಡು ಕಾರ್ಡ್ ಪಡೆದಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಸೈಕಲ್ ಪ್ರೇಮಿಗಳು, ಪ್ರವಾಸಿಗರು "ಟ್ರಿಣ್ ಟ್ರಿಣ್" ಸೈಕಲ್ ಅನ್ನು ಹೆಚ್ಚು ಬಳಕೆ ಮಾಡುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಮೈಸೂರು ನಗರಪಾಲಿಕೆ 4 ಕೋಟಿ ರೂಪಾಯಿ ವೆಚ್ಚದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡುತ್ತಿದೆ.

ವಾಯುಮಾಲಿನ್ಯ ತಡೆಯಲು ಕ್ರಮ

ವಾಯುಮಾಲಿನ್ಯ ತಡೆಯಲು ಕ್ರಮ

ಇನ್ನೆರಡು ವಾರದಲ್ಲಿ ಕಾಮಗಾರಿಗೆ ಚಾಲನೆ ದೊರೆಯಲಿದೆ. ಮೈಸೂರು ಸುಂದರ ನಗರವಾಗಿದ್ದು, ಇಲ್ಲಿ 12 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದೆ. ಆರೂವರೆ ಲಕ್ಷ ವಾಹನಗಳಿವೆ. ಜಗತ್ತಿನ 600 ನಗರಗಳಲ್ಲಿ ಸಾರ್ವಜನಿಕ ಸೈಕಲ್ ಬಳಕೆ ವ್ಯವಸ್ಥೆ ಇದೆ. ಇತರೆ ವಾಹನಗಳಿಂದ ದಟ್ಟಣೆ, ವಾಯುಮಾಲಿನ್ಯ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಪರಿಸರ ಸ್ನೇಹಿ ವಾಹನಗಳನ್ನು ಬಳಸಬೇಕು ಎಂಬುದು ದಶಕಗಳಿಂದ ಕೂಗು ಕೇಳಿ ಬರುತ್ತಲೇ ಇದೆ.

ದಸರಾ ತಿಂಗಳಲ್ಲಿ ಮೈಸೂರಿಗೆ ಲಗ್ಗೆ ಇಟ್ಟ 4 ಲಕ್ಷ ಪ್ರವಾಸಿಗರುದಸರಾ ತಿಂಗಳಲ್ಲಿ ಮೈಸೂರಿಗೆ ಲಗ್ಗೆ ಇಟ್ಟ 4 ಲಕ್ಷ ಪ್ರವಾಸಿಗರು

8.7 ಕಿ.ಮೀ. ಉದ್ದದ ಟ್ರ್ಯಾಕ್ ನಿರ್ಮಾಣ

8.7 ಕಿ.ಮೀ. ಉದ್ದದ ಟ್ರ್ಯಾಕ್ ನಿರ್ಮಾಣ

ನಗರದ ಹೃದಯ ಭಾಗದಲ್ಲಿ 8.7 ಕಿಲೋ ಮೀಟರ್‌ ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. ಖಾಸಗಿ ಏಜೆನ್ಸಿಯೊಂದಕ್ಕೆ ಈ ಜವಾಬ್ದಾರಿಯನ್ನು ನೀಡಿದ್ದು, ವರ್ಕ್ ಆರ್ಡರ್ ನೀಡಲಾಗಿದೆ. ಈಗಾಗಲೇ ಲಲಿತ ಮಹಲ್ ರಸ್ತೆ ಮತ್ತು ಕೆ.ಆರ್.ಎಸ್. ರಸ್ತೆ ಚೆಲುವಾಂಬ ಪಾರ್ಕ್ ಬಳಿ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗಿದೆ.

ಟ್ರ್ಯಾಕ್ ಹಾದುಹೋಗುವ ಪ್ರದೇಶಗಳು?

ಟ್ರ್ಯಾಕ್ ಹಾದುಹೋಗುವ ಪ್ರದೇಶಗಳು?

ನಗರದ ಪ್ರಮುಖ ಮತ್ತು ಜನನಿಬಿಡ ರಸ್ತೆಗಳಲ್ಲೇ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಪ್ರತಿಮೆಯಿಂದ ಕುಕ್ಕರಹಳ್ಳಿ ರಸ್ತೆ, ಕೌಟಿಲ್ಯ ವೃತ್ತದಿಂದ ಮುಡಾ ಕಚೇರಿ, ರಾಮಸ್ವಾಮಿ ವೃತ್ತದಿಂದ ಬಲ್ಲಾಳ್ ಸರ್ಕಲ್, ಕುಕ್ಕರಹಳ್ಳಿಯಿಂದ ವಿಶ್ವ ಮಾನವ ಜೋಡಿ ರಸ್ತೆ ಮಾರ್ಗವಾಗಿ ರಿಂಗ್ ರಸ್ತೆ, ಅಶೋಕ ವೃತ್ತದಿಂದ ಟೆನ್ನಿಸ್ ಕೋರ್ಟ್, ಚಾಮರಾಜ ಜೋಡಿ ರಸ್ತೆ, ರಮಾವಿಲಾಸ ರಸ್ತೆ, ಕೌಟಿಲ್ಯ ವೃತ್ತದ ರಸ್ತೆ, ರಾಮಸ್ವಾಮಿ ವೃತ್ತದಿಂದ ದಾಸಪ್ಪ ವೃತ್ತ, ಮೈಸೂರು ವಿಶ್ವವಿದ್ಯಾನಿಲಯದ ರಸ್ತೆಯವರೆಗೂ ಸೈಕಲ್ ಟ್ರ್ಯಾಕ್ ನಿರ್ಮಾಣ ಮಾಡಲಾಗುತ್ತದೆ.

"ಟ್ರಿಣ್ ಟ್ರಿಣ್" ಯೋಜನೆಗೆ ಕ್ರಮ

''ಮುಂದಿನ ಪೀಳಿಗೆಗೆ ಉತ್ತಮ ಪರಿಸರ ನೀಡಬೇಕಾಗಿರುವುದು ನಮ್ಮ ಆದ್ಯ ಕರ್ತವ್ಯ ಆಗಿದೆ. ಈ ನಿಟ್ಟಿನಲ್ಲಿ ಮೈಸೂರಿನಲ್ಲಿ ಸೈಕಲ್ ಸವಾರಿಗೆ ಉತ್ತೇಜನ ನೀಡುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. "ಟ್ರಿಣ್ ಟ್ರಿಣ್" ಯೋಜನೆ ಸದ್ಯ ಚಾಲ್ತಿಯಲ್ಲಿದೆ. ಅದೇ ರೀತಿ ಇದೀಗ 8.7 ಕಿಲೋ ಮೀಟರ್‌ ಉದ್ದದ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. ಎರಡು ವಾರದೊಳಗೆ ಕಾಮಗಾರಿ ಆರಂಭಗೊಳ್ಳಲಿದೆ,'' ಎಂದು ಮೇಯರ್ ಶಿವಕುಮಾರ್ ತಿಳಿಸಿದ್ದಾರೆ.

English summary
Preparations underway for construction of 8 km cycle track in Mysuru to prevent air pollution.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X