ಮಹಾನಗರ ಪಾಲಿಕೆ ಫಲಿತಾಂಶದ ಬಳಿಕ ಮೈಸೂರಿನಲ್ಲಿ ಮಾರಾಮಾರಿ
ಮೈಸೂರು, ಸೆಪ್ಟೆಂಬರ್.3: ಮೈಸೂರು ಮಹಾನಗರ ಪಾಲಿಕೆಯ ಫಲಿತಾಂಶವೇನೋ ಹೊರಬಿದ್ದಿದೆ. ಆದರೆ ಫಲಿತಾಂಶ ಬಂದ ನಂತರ ನಗರದಲ್ಲಿ ಮಾರಾಮಾರಿ ನಡೆದಿದೆ. ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದನೆಂದು ಆರೋಪಿಸಿ ಎಸ್‍ಡಿಪಿಐ ಕಾರ್ಯಕರ್ತನ ಮೇಲೆ ಕೈ ಕಾರ್ಯಕರ್ತರು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಇಂದು ಸೋಮವಾರ ನಡೆದಿದೆ.
ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ನೂತನ ಪಾಲಿಕೆ ಸದಸ್ಯರೊಬ್ಬರ ಕಡೆಯಿಂದ ಎಸ್ ಡಿಪಿಐ ಕಾರ್ಯಕರ್ತರ ಮೇಲೆ ಹಲ್ಲೆ ನಡೆದಿದೆ.
ಮೈಸೂರಿನ ಶಾಂತಿನಗರದ ರಮ್ಜಾ ಮಸೀದಿ ಬಳಿ ಈ ಘಟನೆ ನಡೆದಿದ್ದು, ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯ ಆರೋಪ ಮಾಡಲಾಗುತ್ತಿದೆ. ತನ್ನ ವಿರುದ್ಧ ಮತ ಚಲಾಯಿಸಿದ್ದರು ಎಂದು ಎಂದು ಆರೋಪಿಸಿ ಪಡ್ಡು ಎಂಬುವವರು ಜೀಪ್ ನಿಂದ ಇಳಿದು ಎಸ್ ಡಿಪಿಐನ ಹಕೀಬ್ ಸೈದು , ಜೆಡಿಎಸ್ ನ ರಶೀದ್ , ಯಾಸೀನ್ ಎಂಬುವವರಿಗೆ ಥಳಿಸಿದ್ದಾರೆ.

ಹಲ್ಲೆಯಿಂದ ಗಾಯಗೊಂಡಿರುವ ಗಾಯಾಳುಗಳನ್ನ ಕೆ ಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ನೂತನ ಪಾಲಿಕೆ ಸದಸ್ಯ ಅಯಾಜ್ ಪಾಷಾ ಬೆಂಬಲಿಗರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications