ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಶೀಘ್ರದಲ್ಲಿ ಸಂಪುಟ ವಿಸ್ತರಣೆಯಾಗಲಿದೆ : ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜೂನ್ 24 : ಗೃಹ ಸಚಿವ ಸ್ಥಾನಕ್ಕೆ ಜಿ. ಪರಮೇಶ್ವರ್ ನೀಡಿರುವ ರಾಜೀನಾಮೆ ಪತ್ರವನ್ನು ರಾಜ್ಯಪಾಲರಿಗೆ ರವಾನೆ ಮಾಡಲಾಗಿದ್ದು, ಅದು ಅಂಗೀಕಾರವಾಗಲಿದೆ. ಶೀಘ್ರವೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಸಚಿವ ಸಂಪುಟ ವಿಸ್ತರಣೆ : ಯಾರು ಯಾರು ರೇಸಿನಲ್ಲಿದ್ದಾರೆ?ಸಚಿವ ಸಂಪುಟ ವಿಸ್ತರಣೆ : ಯಾರು ಯಾರು ರೇಸಿನಲ್ಲಿದ್ದಾರೆ?

ಮೈಸೂರಿನಲ್ಲಿ ಇಂದು ಮಾತನಾಡಿದ ಸಿದ್ದರಾಮಯ್ಯ, ''ಸಂಪುಟದಲ್ಲಿ ಮೂರು ಸ್ಥಾನ ಖಾಲಿಯಿದೆ. ಹೀಗಾಗಿ ಸಧ್ಯದಲ್ಲೇ ಸಂಪುಟ ವಿಸ್ತರಣೆ ಮಾಡಲಾಗುತ್ತದೆ. ಆದರೆ ಯಾವಾಗ, ಹೇಗೆ ಎಂಬುದನ್ನ ಇನ್ನೂ ಚರ್ಚಿಸಿಲ್ಲ'' ಎಂದು ತಿಳಿಸಿದರು. ''ರೈತರ ಸಾಲಮನ್ನಾ ವಿಚಾರ ಸಂಬಂಧ ಇಂದು ಆದೇಶ ಹೊರ ಬೀಳಲಿದೆ. ಜೂನ್ 20ರವರಗೆ ತೆಗೆದುಕೊಂಡಿರುವ ಎಲ್ಲ ಸಾಲ ಮನ್ನಾವಾಗಲಿದೆ. ಇನ್ನು ರಾಜ್ಯದಲ್ಲಿ ಮುಂಗಾರು ಕೊರತೆ ಇದ್ದು, ಮುಂದಿನ ದಿನಗಳಲ್ಲಿ ಮೋಡ ಬಿತ್ತನೆ ಮಾಡಲಾಗುವುದು'' ಎಂದು ಹೇಳಿದರು.

CM Siddaramaiah holds review meeting with Health officials in Mysuru

ಎಲ್ಲರಿಗೂ ತಿಳಿದಿದೆ: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಮ್ಮ ವಿರುದ್ಧ ಕುಟುಂಬ ರಾಜಕಾರಣದ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಯಾವುದು ಅಪ್ಪ ಮಕ್ಕಳ ಪಕ್ಷ ಅಂತ ಎಲ್ಲರಿಗೂ ತಿಳಿದಿದೆ‌. ನಮ್ಮ‌ಮನೆಯಲ್ಲಿ ಎಷ್ಟು ಜನ ಶಾಸಕರಾಗಿದ್ದಾರೆ. ದೇವೇಗೌಡರ ಮನೆಯಲ್ಲಿ ಎಷ್ಟು ಮಂದಿ ಶಾಸಕರಾಗಿದ್ದಾರೆ ಎಂದು ಪ್ರಶ್ನಿಸಿದರು.

ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ, ಹೊಸಬರಿಗೆ ಅದೃಷ್ಟ?ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ, ಹೊಸಬರಿಗೆ ಅದೃಷ್ಟ?

ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ವಿರುದ್ದ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ''ಬಿಎಸ್ ವೈ ಒಬ್ಬ ಸುಳ್ಳುಗಾರ. ಅವರ ಹೇಳಿಕೆಗಳಿಗೆ ಉತ್ತರ ಕೊಡುತ್ತಾ ಕೂರಲು ಸಾಧ್ಯವಿಲ್ಲ'' ಎಂದು ಕಿಡಿ ಕಾರಿದರು.

CM Siddaramaiah holds review meeting with Health officials in Mysuru

ಆರೋಗ್ಯಾಧಿಕಾರಿಗಳೊಂದಿಗೆ ಸಭೆ: ಮೈಸೂರಿನಲ್ಲಿ ಡೆಂಗ್ಯೂ, ವೈರಲ್ ಜ್ವರ ಹೆಚ್ಚಿದ ಹಿನ್ನೆಲೆ ಆರೋಗ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದರು. ಮೈಸೂರಿನಲ್ಲಿ ಕಳೆದ ಕೆಲವು ದಿನಗಳಿಂದ ಡೆಂಗ್ಯೂ ಕಾಣಿಸಿಕೊಂಡಿದ್ದು ಆರು ಮಂದಿ ಮೃತಪಟ್ಟಿದ್ದಾರೆ. ಅಷ್ಟೇ ಅಲ್ಲದೇ ನಗರದಲ್ಲಿ ವೈರಲ್ ಫೀವರ್ ಹೆಚ್ಚುತ್ತಿದೆ. ಈ ಕುರಿತು ವೈದ್ಯಾಧಿಕಾರಿಗಳ ಸಭೆ ನಡೆಸಿದ ಸಿದ್ದರಾಮಯ್ಯ ಮಾಹಿತಿ ಪಡೆದರು.

ಸದ್ಯಕ್ಕೆ ಸಂಪುಟ ವಿಸ್ತರಣೆ, ಪುನರ್ ರಚನೆ ಇಲ್ಲ: ಸಿದ್ದರಾಮಯ್ಯಸದ್ಯಕ್ಕೆ ಸಂಪುಟ ವಿಸ್ತರಣೆ, ಪುನರ್ ರಚನೆ ಇಲ್ಲ: ಸಿದ್ದರಾಮಯ್ಯ

ಸ್ವಾಮಿ ವಿವೇಕಾನಂದ ಸ್ಮಾರಕ ನಿರ್ಮಾಣಕ್ಕೆ ಸ್ಥಳ ನೀಡಲು ಕೇಂದ್ರ, ರಾಜ್ಯ ಸರ್ಕಾರ, ಜಿಲ್ಲಾಡಳಿತ ಶ್ರೀರಾಮಕೃಷ್ಣಾಶ್ರಮಕ್ಕೆ ಹಕ್ಕು ನೀಡಿದೆ.ಆದರೆ ಶಿಕ್ಷಣ ಇಲಾಖೆ ಈ ಆದೇಶಕ್ಕೆ ವಿರುದ್ಧವಾಗಿ ಎನ್.ಟಿ.ಎಂ. ಶಾಲೆ ಕಾರ್ಯನಿರ್ವಹಿಸಲು ಮುಂದಾಗಿತ್ತು. ವಿವೇಕಾನಂದ ಸ್ಮಾರಕಕ್ಕೆ ಸಹಕರಿಸಿ ಎಂದು ಸಾಹಿತಿ ಸಿಪಿಕೆ, ವಕೀಲ ಅರುಣ್ ಕುಮಾರ್ ಹಾಗೂ ರಾಮಕೃಷ್ಣಾಶ್ರಮದ ಸ್ವಾಮೀಜಿ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿ ಮನವಿ ಸಲ್ಲಿಸಿದರು.

CM Siddaramaiah holds review meeting with Health officials in Mysuru

ಇದೇ ವೇಳೆ ಪೌರಕಾರ್ಮಿಕರನ್ನು ಖಾಯಂಗೊಳಿಸಿದ್ದಕ್ಕೆ ಪೌರಕಾರ್ಮಿಕರು ಮುಖ್ಯಮಂತ್ರಿಗಳನ್ನು ಅಭಿನಂದಿಸಿ ಹಾರ ಹಾಕಿ ಸನ್ಮಾನಿಸಿದರು. . ಸಿದ್ದರಾಮಯ್ಯ ಅವರು ಮೈಸೂರಿಗೆ ಆಗಮಿಸಿರುವ ವಿಷಯ ತಿಳಿದ ಸಾರ್ವಜನಿಕರು ತಮ್ಮ ಅಹವಾಹಲುಗಳನ್ನು ಸಲ್ಲಿಸಲು ನಗರದ ಟಿ.ಕೆ. ಬಡಾವಣೆಯಲ್ಲಿರುವ ಸಿಎಂ ನಿವಾಸದ ಎದುರು ಬೆಳಿಗ್ಗೆಯಿಂದಲೇ ನೂರಾರು ಮಂದಿ ಸಾರ್ವಜನಿಕರು ಜಮಾಯಿಸಿದ್ದರು.

English summary
Chief Minister Siddaramaiah clarifies that, his cabinet expansion will be done soon after the governor accepts Home Minister G. Parameshwar's resignation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X