ಸಿಎಂ ಬೊಮ್ಮಾಯಿ ಹೇಳಿದ 'ನಮ್ಮ ಆಪತ್ಬಾಂಧವ' ಜೆಡಿಎಸ್ ಶಾಸಕ
ಮೈಸೂರು, ಅ 6: ಮೈಸೂರು ದಸರಾ - 2021 ಉದ್ಘಾಟನೆಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ತಮ್ಮ ಹಿಂದಿನ ಜನತಾ ಪರಿವಾರದ ಸದಸ್ಯರೊಬ್ಬರನ್ನು ತುಂಬಿದ ಸಭೆಯಲ್ಲಿ ನೆನಪಿಸಿಕೊಂಡಿದ್ದಾರೆ. ಇಲ್ಲಿ ಇರಬೇಕಾದವರು ಅಲ್ಲಿದ್ದಾರೆ ಎಂದು ಸಭೆಯಲ್ಲಿ ಹಾಸ್ಯ ಚಟಾಕಿ ಹಾರಿಸಿದ್ದಾರೆ.
ಮೋದಿ ಯುಗ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದ ಸಿಎಂ ಬೊಮ್ಮಾಯಿ, 20 ದಿನದ ಕಾರ್ಯಕ್ರಮದ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಸ್ಥಳೀಯ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಕೂಡಾ ಹಾಜರಿದ್ದರು.
ಸಮರ್ಥ ಆಡಳಿತಗಾರರಾಗಿ ಒಂದು ರಾಜ್ಯ ಮತ್ತು ದೇಶವನ್ನು ಎರಡು ದಶಕಗಳ ಕಾಲ ನರೇಂದ್ರ ಮೋದಿ ಮುನ್ನಡೆಸಿದ ಅಂಗವಾಗಿ ಮೈಸೂರು ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಇಪ್ಪತ್ತು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಈ ಕಾರ್ಯಕ್ರಮವಲ್ಲದೇ, ಬಸವರಾಜ ಬೊಮ್ಮಾಯಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇದರಲ್ಲಿ, ಸರ್ಕಾರದ ಯಾವುದೇ ಯೋಜನೆ ಮತ್ತು ಅವುಗಳ ಸ್ಥಿತಿಗತಿಗಳನ್ನು ಆನ್‌ಲೈನ್ ಮೂಲಕ ತಕ್ಷಣ ಪಡೆಯಲು ಸಿಎಂ ಡ್ಯಾಶ್ ಬೋರ್ಡ್ ಚಾಲನೆ ನೀಡುವ ಕಾರ್ಯಕ್ರಮ ಕೂಡಾ ಒಂದಾಗಿತ್ತು. ಮೋದಿ ಯುಗ್ ಉತ್ಸವದಲ್ಲಿ ಜೆಡಿಎಸ್ ಶಾಸಕರಿಗೆ ಆಪತ್ಬಾಂಧವ ಎಂದ ಸಿಎಂ ಬೊಮ್ಮಾಯಿ.

ಅವರ ಹೆಸರಿನಲ್ಲಿ ಪ್ರತಾಪ ಮತ್ತು ಸಿಂಹ ಎರಡೂ ಇದೆ ಅವರ ಕಡೆ
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಅವರ ಬಗ್ಗೆ ಹೆಮ್ಮೆಯ ಮಾತನಾಡಿದ ಸಿಎಂ ಬೊಮ್ಮಾಯಿ, "ಅವರ ಹೆಸರಿನಲ್ಲಿ ಪ್ರತಾಪ ಮತ್ತು ಸಿಂಹ ಎರಡೂ ಇದೆ ಅವರ ಕಡೆ. ಯಾವಾಗ ಪ್ರತಾಪ ತೋರಿಸುತ್ತಾನೆ ಗೊತ್ತಾಗುವುದಿಲ್ಲ, ಯಾವಾಗ ಸಿಂಹ ಘರ್ಜನೆ ಮಾಡುತ್ತಾನೆ ಗೊತ್ತಾಗುವುದಿಲ್ಲ. ಅತ್ಯಂತ ಕಿಲಾಡಿ ಮತ್ತು ಕ್ರಿಯಾಶೀಲ ಲೋಕಸಭಾ ಸದಸ್ಯ" ಎಂದು ಪ್ರತಾಪ್ ಸಿಂಹ ಅವರನ್ನು ಸಿಎಂ ಬೊಮ್ಮಾಯಿ ಸಭೆಯಲ್ಲಿ ಹೊಗಳಿದರು.

ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಬಗ್ಗೆ ಮಾತನಾಡುತ್ತಾ ಸಿಎಂ ಬೊಮ್ಮಾಯಿ
ಕೃಷ್ಣರಾಜ ಕ್ಷೇತ್ರದ ಶಾಸಕ ರಾಮದಾಸ್ ಬಗ್ಗೆ ಮಾತನಾಡುತ್ತಾ ಸಿಎಂ ಬೊಮ್ಮಾಯಿ, "ಪ್ರಭು ಶ್ರೀರಾಮಚಂದ್ರನಿಗೆ ಹನುಮಂತ ಇದ್ದ ಹಾಗೇ, ನಮ್ಮ ರಾಮದಾಸ್ ಅವರು ಪ್ರಧಾನಿ ಮೋದಿಯವರ ಪರಮ ಭಕ್ತ. ಅವರ ಈ ಸಂಬಂಧ ಮೋದಿಯವರು ಪ್ರಧಾನಿಯಾಗಿದ್ದಾರೆ ಎಂದಲ್ಲ, ಅವರು ಗುಜರಾತಿನ ಮುಖ್ಯಮಂತ್ರಿ ಆಗುವ ಮೊದಲು ಕೂಡಾ ಮೋದಿಯವರ ಹಿಂಬಾಲಕರಾಗಿದ್ದಾರೆ. ರಾಮದಾಸ್ ಅವರು ಮೋದಿಯವರನ್ನು ಭೇಟಿಯಾದಾಗ ಅವರನ್ನು ಅತ್ಯಂತ ಆದರದಿಂದ ಅವರನ್ನು ಗೌರವಿಸುತ್ತಾರೆ"ಎಂದು ಬೊಮ್ಮಾಯಿ ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರನ್ನು ಸಂಭೋದಿಸುತ್ತಾ
ಸಭೆಯಲ್ಲಿ ಭಾಗವಹಿಸಿದ್ದ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಅವರನ್ನು ಸಂಭೋದಿಸುತ್ತಾ ಬೊಮ್ಮಾಯಿ ಹೇಳಿದ್ದು ಹೀಗೆ. "ನಮ್ಮ ಆತ್ಮೀಯ ಮಿತ್ರರು, ಈ ಕಡೆ (ಬಿಜೆಪಿ) ಇರಬೇಕಾದವರು, ಆ ಕಡೆ (ಜೆಡಿಎಸ್) ಇರುವಂತಹ, ಅಲ್ಲೇ ಇದ್ದರೂ ಕೂಡಾ ನಮ್ಮವರಾದಂತಹ, ಮೋದಿಯವರ ಹುಟ್ಟುಹಬ್ಬಕ್ಕೆ ಶುಭಾಶಯವನ್ನು ಬರೆದು ಹಾಕಿದಂತಹ, ನಮ್ಮ ಹೃದಯಾಂತರಾಳದ ಪ್ರೀತಿಯನ್ನು ತೋರಿಸಿರುವಂತಹ, ನಮ್ಮ ಮಹೇಶ್ ಅಣ್ಣನವರೇ, ನೀವು ಸದಾ ಕಾಲ ನಮ್ಮ ಆಪತ್ಬಾಂಧವರು" ಎಂದು ಬೊಮ್ಮಾಯಿ ಹೇಳಿದರು.

ವೇದಿಕೆಯಲ್ಲಿ ಕೇಸರಿ ಶಾಲನ್ನು ಸಾ.ರಾ.ಮಹೇಶ್ ಅವರಿಗೆ ಹಾಕಲು ಸಂಘಟಕರು ಹಾಕಲು ಬಂದಾಗ
ವೇದಿಕೆಯಲ್ಲಿ ಕೇಸರಿ ಶಾಲನ್ನು ಸಾ.ರಾ.ಮಹೇಶ್ ಅವರಿಗೆ ಹಾಕಲು ಸಂಘಟಕರು ಹಾಕಲು ಬಂದಾಗ, ಅದನ್ನು ಹಾಕಿಸಿಕೊಳ್ಳದೇ ಕೈಯಲ್ಲೇ ತೆಗೆದುಕೊಂಡ ಮಹೇಶ್ ಅವರು ನಂತರ ಸಚಿವ ಬೈರತಿ ಬಸವರಾಜ್ ಮತ್ತು ಶಾಸಕ ರಾಮದಾಸ್ ಹೇಳಿದ ನಂತರ ಶಾಲನ್ನು ಹಾಕಿಕೊಂಡರು. ಮೋದಿ ಯುಗ್ ಉತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಎಸ್.ಟಿ.ಸೋಮಶೇಖರ್, ಸ್ಥಳೀಯ ಜನಪ್ರತಿನಿಧಿಗಳು ಸೇರಿದಂತೆ ಮುಖಂಡರ ದಂಡೇ ಹರಿದು ಬಂದಿತ್ತು.
-
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ -
ಬೆಂಗಳೂರಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚುರುಕು:12 ಬ್ಲ್ಯಾಕ್ ಸ್ಪಾಟ್ ನಿರ್ಮೂಲನೆ, 35 ಲೋಡ್ ತ್ಯಾಜ್ಯ ತೆರವು -
ದಾವಣಗೆರೆಯಲ್ಲಿ ಹೈಡ್ರಾಮಾ: ಪ್ರದೀಪ್ ಈಶ್ವರ್ ಪ್ರಚಾರದ ವೇಳೆ ಚಪ್ಪಲಿ, ಪೊರಕೆ ತೋರಿಸಿದ ಬಿಜೆಪಿ ಕಾರ್ಯಕರ್ತರು -
ಬೆಂಗಳೂರಿನ ಫುಟ್ಪಾತ್ಗಳ ದುರಸ್ತಿಗೆ ಶ್ರಮಿಸಿದ್ದ ಕೆನಡಾ ಪ್ರಜೆ ಈಗ ಮಿಜೋರಾಂಗೆ ಶಿಫ್ಟ್: 'ಬೆಂಗಳೂರಿಗೆ ವಿದಾಯ' ಎಂದ Vlogger -
Vijay Mallya: ವಿಜಯ್ ಮಲ್ಯ ಆರ್ಸಿಬಿಗೆ ಇಂಗ್ಲೀಷ್ ಪದಗಳಲ್ಲಿ ಕನ್ನಡದ ವಿಶೇಷ ಸಂದೇಶ: ಭಾರೀ ವೈರಲ್ -
ಸಕಲೇಶಪುರ: ಬೆಟ್ಟದ ಭೈರವೇಶ್ವರ ದೇವಸ್ಥಾನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ವೇಳೆ ಸ್ಥಳೀಯರಿಂದ ಹಲ್ಲೆ -
ಐಪಿಎಲ್ 2026: ಆರ್ಸಿಬಿ-ಎಸ್ಆರ್ಎಚ್ ಪಂದ್ಯದ ಸಮಯ, ನೇರಪ್ರಸಾರ, ಸಂಪೂರ್ಣ ತಂಡಗಳ ವಿವರ ತಿಳಿಯಿರಿ -
March 28 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ












Click it and Unblock the Notifications