ಹಕ್ಕಿಜ್ವರ ತಡೆಗೆ ಮೈಸೂರು ಮೃಗಾಲಯದಲ್ಲಿ ರಾಸಾಯನಿಕ ಸಿಂಪಡಣೆ

ಮೈಸೂರು, ಮಾರ್ಚ್ 19: ಮೈಸೂರು ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಇಂದಿನಿಂದ ರಾಸಾಯನಿಕ ಔಷಧಿ ಸಿಂಪಡಿಸಲಾಗುತ್ತಿದೆ.

ಮೈಸೂರು ಜಿಲ್ಲೆಯಲ್ಲಿ ಹಕ್ಕಿಜ್ವರ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಮೃಗಾಲಯದ ಅಧಿಕಾರಿಗಳು ಈ ಮುನ್ನೆಚ್ಚರಿಕಾ ಕ್ರಮವನ್ನು ತೆಗೆದುಕೊಂಡಿದ್ದು, ಪಕ್ಷಿಗಳ ಹಿಕ್ಕೆಯನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಸದ್ಯ ಮೃಗಾಲಯಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿದ್ದು, ಒಳಗಿರುವ ಪ್ರಾಣಿ ಪಕ್ಷಿಗಳ ಸುರಕ್ಷತೆಗಾಗಿ ವೈರಾಣುಗಳನ್ನು ನಾಶ ಮಾಡುವ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

Chemical Spraying At The Mysuru Zoo For The Prevention of Bird Flu

ಮೃಗಾಲಯದ ಮುಖ್ಯ ದ್ವಾರದಿಂದ ಆವರಣದ ರಸ್ತೆಗಳವರೆಗೆ, ಪಕ್ಷಿಗಳ ಗೂಡುಗಳ ಸುತ್ತ ಹಾಗೂ ಮೃಗಾಲಯದ ಆವರಣದ ಕೊಳಗಳ ಸುತ್ತ ವೈರಾಣು ನಾಶದ ರಾಸಾಯನಿಕ ದ್ರಾವಣದ ಔಷಧಿ ಸಿಂಪಡಿಸಲಾಗಿದ್ದು, ಹಕ್ಕಿಜ್ವರ ಮೃಗಾಲಯದ ಯಾವುದೇ ಪ್ರಾಣಿ, ಪಕ್ಷಿಗಳಿಗೆ ಬರದಂತೆ ಎಲ್ಲ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+