ಮೈಸೂರು ವಿವಿಯಲ್ಲಿ ಚನ್ನಪಟ್ಟಣಗೊಂಬೆ ಪರಿಣಿತಿ ಕೇಂದ್ರ

ಮೈಸೂರು, ಆಗಸ್ಟ್ 24: ಚನ್ನಪಟ್ಟಣ ಗೊಂಬೆ ಎಂದರೆ ಯಾರಿಗೆ ತಾನೆ ತಿಳಿದಿಲ್ಲ, ಇಡೀ ದೇಶದಲ್ಲೇ ಸುಪ್ರಸಿದ್ಧಿ ಪಡೆದಿರುವ ಗೊಂಬೆಗಳಾಗಿವೆ. ಈ ಕಲೆಯನ್ನು ಉಳಿಸಿಕೊಂಡು ಹೋಗುವುದರ ಕತೆಗೆ ವಿಶ್ವದೆಲ್ಲೆಡೆ ಪಸರಿಸುವ ಉದ್ದೇಶದಿಂದ ಮೈಸೂರು ವಿವಿಯಲ್ಲಿ ಗೊಂಬೆ ತಯಾರಕರ ಪರಿಣಿತ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದೆ.

ಚನ್ನಪಟ್ಟಣ ಗೊಂಬೆಗಳಿಗೆ ಮತ್ತಷ್ಟು ಮಾರುಕಟ್ಟೆ ಒದಗಿಸಿ ವಿಶಿಷ್ಟ ಕಲೆಯನ್ನು ಉಳಿಸಿ-ಬೆಳೆಸುವ ಉದ್ದೇಶದಿಂದ ಮೈಸೂರು ವಿಶ್ವವಿದ್ಯಾಲಯದಲ್ಲಿ ಚನ್ನಪಟ್ಟಣ ಬೊಂಬೆ ತಯಾರಕರಿಗೆ ಪರಿಣತಿ ಕೇಂದ್ರ ತೆರೆಯಲು ಉನ್ನತ ಶಿಕ್ಷಣ ಇಲಾಖೆ ತೀರ್ಮಾನಿಸಿದ್ದು, ಬಜೆಟ್ ನಲ್ಲಿ ಘೋಷಿಸಿರುವ ನೂತನ ವಿಶ್ವವಿದ್ಯಾಲಯಗಳನ್ನು ಆರಂಭಿಸಿರುವ ಕುರಿತು ಉನ್ನತ ಶಿಕ್ಷಣ ಇಲಾಖೆ ಗುರುವಾರ ನಡೆಸಿದ ಜ್ಞಾನ ಆಯೋಗದ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ದಸರಾ ಮುಗಿದ ಬಳಿಕ ಪರಿಣಿತಿ ಕೇಂದ್ರ ಮತ್ತು ಪ್ರವಾಸೋದ್ಯಮ, ಕ್ರೀಡೆ, ಸಿನಿಮಾ, ಭದ್ರತೆ, ಕೌಶಲ್ಯಾಭಿವೃದ್ಧಿ, ವಿಶ್ವವಿದ್ಯಾಲಯಗಳಿಗೂ ಸಮಿತಿ ಮಾಡಲು ಚರ್ಚಿಸಲಾಯಿತು.

Channapatna toys center for excellence in Myuru University

ಖಾಸಗಿ ಸಹಭಾಗಿತ್ವದಲ್ಲಿ ತಲಾ ಮೂರು ಕೋಟಿ ರೂ. ವೆಚ್ಚದಲ್ಲಿ ತುಮಕೂರಿನಲ್ಲಿ ಕ್ರೀಡೆ ಮತ್ತು ಅಂಗಸಾಧನೆ ವಿಶ್ವವಿದ್ಯಾಲಯ, ಶಿವಮೊಗ್ಗದಲ್ಲಿ ತಾಯಿನಾಡು ಭದ್ರತಾ ವಿಶ್ವವಿದ್ಯಾಲಯ ಹಾಗೂ ಹಂಪಿಯಲ್ಲಿ ಪ್ರವಾಸೋದ್ಯಮ ವಿಶ್ವವಿದ್ಯಾಲಯ, ರಾಮನಗರದಲ್ಲಿ ಸಿನಿಮಾ ವಿವಿ ಕೌಶಲ್ಯಾಭಿವೃದ್ಧಿ ವಿವಿ ಆರಂಭಿಸುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+