ಸಿಎಫ್ ಟಿಆರ್ಐನಿಂದ ನೆರೆ ಸಂತ್ರಸ್ತರಿಗೆ ರುಚಿಯಾದ ಪೌಷ್ಟಿಕಾಂಶ ಆಹಾರ ಪೂರೈಕೆ
ಮೈಸೂರು, ಆಗಸ್ಟ್ 21: ಜಲಪ್ರಳಯಕ್ಕೆ ತುತ್ತಾಗಿರುವ ಕೇರಳ ಮತ್ತು ಕೊಡಗು ಜನರ ನೆರವಿಗೆ ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ಸಂಶೋಧನಾ ಸಂಸ್ಥೆ ಮುಂದಾಗಿದ್ದು, ಸಂತ್ರಸ್ತರಿಗೆ ಹೈಪ್ರೋಟಿನ್ ಆಹಾರ ತಯಾರಿಕೆ ಮಾಡಿದೆ.
5 ಸಾವಿರ ಕೇರಳದವರಿಗೆ ಹಾಗೂ ಕೊಡಗಿನ 5 ಸಾವಿರ ಮಂದಿಗೆ ಊಟ ರವಾನೆ ಮಾಡಲಾಗಿದೆ. ಉಪ್ಪಿಟ್ಟು, ಅವಲಕ್ಕಿ, ಹೈಪ್ರೊಟಿನ್ ಬಿಸ್ಕೇಟ್ ಮತ್ತು ರಸ್ಕ್ ಗಳು ಜಾಮ್, ಉಪ್ಪಿನಕಾಯಿ ಪ್ಯಾಕೆಟ್ ಗಳನ್ನು ನೀರಿನ ಸಮೇತ ಪ್ಯಾಕ್ ಮಾಡಿ ರವಾನಿಸಲಾಗಿದೆ.
ಅಷ್ಟೇ ಅಲ್ಲ, ಪ್ರತಿನಿತ್ಯ 10 ಸಾವಿರ ಮಂದಿ ಸಂತ್ರಸ್ತರಿಗೆ ಆಹಾರ ತಯಾರಿಸಿ ಪೂರೈಸಲು ಸಿದ್ಧವಿದ್ದೇವೆ ಎಂದು ಸಿ.ಎಫ್.ಟಿ.ಆರ್.ಐ ವಿಜ್ಞಾನಿಗಳು ತಿಳಿಸಿದ್ದಾರೆ.

"ಕೇರಳ ಮತ್ತು ಕೊಡಗಿನ ನೆರೆ ಸಂತ್ರಸ್ತರಿಗೆ ಸಿಎಫ್ಟಿಆರ್ಐನಿಂದ ಆಹಾರ ಪೂರೈಸುವ ಸಣ್ಣ ಕೆಲಸ ಮಾಡುತ್ತಿದ್ದೇವೆ. ಸುಮಾರು 10 ಸಾವಿರ ಜನರಿಗೆ ದಿಢೀರ್ ತಯಾರು ಮಾಡುವ ಉಪ್ಪಿಟ್ಟು ಮಿಶ್ರಣ ಕೊಡುತ್ತಿದ್ದೇವೆ. ಬಿಸಿ ನೀರು ಹಾಕಿ ಈ ಉಪ್ಪಿಟ್ಟನ್ನು ತಿನ್ನಬಹುದಾಗಿದೆ.
1 ಕೆಜಿ ಪ್ಯಾಕೆಟ್ಗಳಲ್ಲಿ ಈ ಎಲ್ಲ ಸಿದ್ಧಪಡಿಸಿದ ಆಹಾರವನ್ನು ಗಂಜಿ ಕೇಂದ್ರಗಳಿಗೆ ಕೊಡುತ್ತಿದ್ದೇವೆ. ಇದರ ಜೊತೆಗೆ ಹುಳಿ ಅವಲಕ್ಕಿ ಮಿಶ್ರಣ, ಚಪಾತಿ, ಉಪ್ಪಿನ ಕಾಯಿ, ರಸ್ಕ್ ಮತ್ತು ಬಿಸ್ಕೆಟ್ಗಳನ್ನು ಸಿದ್ಧಪಡಿಸಲಾಗುತ್ತಿದೆ. ನಮ್ಮಲ್ಲಿರುವ ತಂತ್ರಜ್ಞಾನವನ್ನು ಬಳಸಿ ರುಚಿಯಾಗಿ ಶುಚಿಯಾದ ಆಹಾರ ಸಿದ್ಧಪಡಿಸಲಾಗುತ್ತಿದೆ.

ಸುಮಾರು 15 ದಿನಗಳ ಕಾಲ ಈ ಆಹಾರ ಕೆಡದಂತೆ ತಯಾರು ಮಾಡಲಾಗುತ್ತಿದೆ" ಎನ್ನುತ್ತಾರೆ ವಿಜ್ಞಾನಿ ಸತ್ಯಂದ್ರ.
ಸಿಎಫ್ ಟಿಆರ್ ಐನ 250 ಮಂದಿಯ ತಂಡ ಎರಡು ದಿನಗಳಿಂದ ಆಹಾರ ತಯಾರಿಕೆಯಲ್ಲಿ ತೊಡಗಿದೆ. ಈಗಾಗಲೇ ಸಂಸ್ಕರಿಸಿದ ರವೆ ಉಪ್ಪಿಟ್ಟಿನ ಮಿಕ್ಸಿ ಪುಡಿಯನ್ನು ನಿತ್ಯ 250ರಿಂದ 300 ಕೆಜಿವರೆಗೆ ತಯಾರು ಮಾಡುತ್ತಿದ್ದೇವೆ.

15 ದಿನಗಳವರೆಗೂ ಶೇಖರಿಸಿ ಇದರ ಪುಡಿ ಬಳಸಬಹುದಾಗಿದ್ದು, ತಣ್ಣೀರಿನಲ್ಲಿ 25 ನಿಮಿಷ ಅಥವಾ ಬಿಸಿ ನೀರಿನಲ್ಲಿ 10 ನಿಮಿಷ ನೆನೆಸಿ ಉಪ್ಪಿಟ್ಟನ್ನು ಸವಿಯಬಹುದಾಗಿದೆ. ಇಲ್ಲವಾದರೆ ಹಾಗೆಯೂ ಸಹ ಸೇವಿಸಿ ನೀರು ಕುಡಿಯುವಂತೆಯೂ ಸಂಸ್ಕರಿಸಲಾಗಿದೆ. ಅಂತೆಯೇ ಅವಲಕ್ಕಿ ಉಪ್ಪಿಟ್ಟನ್ನು ಸಹ ತಯಾರು ಮಾಡಲಾಗುತ್ತಿದೆ.
ನಿತ್ಯ 200 ಕೆ.ಜಿ. ರಸ್ಕ್ ತಯಾರಿಸಲಾಗುತ್ತಿದೆ. ಗಂಟೆಗೆ 75 ಕೆ.ಜಿ. ಬಿಸ್ಕೆಟ್ ತಯಾರಿಸುತ್ತಿದ್ದು, ದಿನಕ್ಕೆ 150ರಿಂದ 200 ಕೆ.ಜಿ ಪ್ರೊಟಿನ್ ಯುಕ್ತ ಬಿಸ್ಕೆಟ್ ಗಳನ್ನು ತಯಾರು ಮಾಡಲಾಗುತ್ತಿದೆ.

20 ಸಾವಿರ ಮಂದಿಗೆ ನೀಡುವಷ್ಟು ಆಹಾರ ನಿತ್ಯ ತಯಾರು ಮಾಡಲಾಗುತ್ತಿದ್ದು, ಒಂದು ವಾರ ಆಹಾರವನ್ನು ಕಳುಹಿಸಿಕೊಡಲಾಗುವುದು. ಆನಂತರವೂ ಇದೇ ಪರಿಸ್ಥಿತಿ ಮುಂದುವರಿದರೆ ಸಿಎಫ್ಆರ್ ಐ ನಿರ್ವಹಣೆ ಮಾಡಲಿದೆ" ಎಂದು ನಿರ್ದೇಶಕ ಡಾ.ಆರ್.ಸುಬ್ರಹ್ಮಣ್ಯನ್ ತಿಳಿಸಿದ್ದಾರೆ.
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications