ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಪ್ರಕೃತಿ ವಿಕೋಪ ನಿರ್ವಹಣೆ ಬಗ್ಗೆ ಮೈಸೂರಿನಲ್ಲಿ ತರಬೇತಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಜುಲೈ 29: ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣಾ ಕೇಂದ್ರದ ವತಿಯಿಂದ ಮೈಸೂರು ಜಿಲ್ಲಾ ವಿಕೋಪ ನಿರ್ವಹಣಾ ಪರಿಷ್ಕರಣೆ ಕುರಿತು ಎರಡು ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಚಾಲನೆ ನೀಡಲಾಯಿತು.

ವಿವಿಧ ಇಲಾಖೆಗಳಿಂದ 30 ಅಧಿಕಾರಿಗಳು ಭಾಗವಹಿಸಿ ತರಬೇತಿ ಪಡೆದರು. ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮಂಜುನಾಥ ಸ್ವಾಮಿ "ಪ್ರತಿಯೊಂದು ಜಿಲ್ಲೆಯಲ್ಲೂ ಬೇರೆ ಬೇರೆ ವಿಕೋಪ ಅಪಾಯಗಳಿದ್ದು, ಅದಕ್ಕೆ ತಕ್ಕಂತೆ ಯೋಜನೆಗಳನ್ನು ಸಿದ್ದಪಡಿಸಿಕೊಳ್ಳಬೇಕಿದ್ದು, ಸಂಬಂಧಪಟ್ಟ ಎಲ್ಲಾ ಇಲಾಖೆಗಳು ಪೂರಕವಾದ ಮಾಹಿತಿ ನೀಡಿ ಸಹ ಭಾಗಿಗಳಾಗಬೇಕು.

ಬಿಜೆಪಿಯವರಿಗೆ ನಿದ್ದೆಯಲ್ಲೂ ಸಿದ್ದರಾಮಯ್ಯನ ಭೀತಿ ಉಂಟಾಗಿದೆ: ಹೆಚ್. ಆಂಜನೇಯ ಲೇವಡಿ ಬಿಜೆಪಿಯವರಿಗೆ ನಿದ್ದೆಯಲ್ಲೂ ಸಿದ್ದರಾಮಯ್ಯನ ಭೀತಿ ಉಂಟಾಗಿದೆ: ಹೆಚ್. ಆಂಜನೇಯ ಲೇವಡಿ

ಮೈಸೂರಿನಲ್ಲಿ ಸುಮಾರು 71 ವಿಕೋಪ ಅಪಾಯವನ್ನುಂಟು ಮಾಡುವ ಕಾರ್ಖಾನೆಗಳಿವೆ. ಅವುಗಳಿಂದ ಯಾವುದೇ ಅಪಾಯ ಸಂಭವಿಸದಂತೆ ಪೂರ್ವಸಿದ್ದತೆ ಮತ್ತು ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತದಿಂದ ಆಗಾಗ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳುವುದರ ಮೂಲಕ ಅಧಿಕಾರಿಗಳು ಮತ್ತು ಸಮುದಾಯದಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ವಿಕೋಪ ನಿರ್ವಹಣಾ ಯೋಜನೆ ಅನುಷ್ಠಾನ ಮಾಡುವಲ್ಲಿ ಜಿಲ್ಲಾಡಳಿತದೊಂದಿಗೆ ವಿವಿಧ ಇಲಾಖೆಗಳು ಹಾಗೂ ಸಮೂಹ ಭಾಗಿಯಾದರೆ ಯಶಸ್ವಿಯಾಗಿ ಕಾರ್ಯ ನಿರ್ವಹಿಸಬಹುದು ಎಂದು ತಿಳಿಸಿದರು.

Centre for Disaster Management Conducts 2-day Training Program

ತರಬೇತಿ ನಿರ್ದೇಶಕರಾದ ಡಾ. ದಿಲೀಪ್‌ ಕುಮಾರ್‌. ಎಂ ಅವರು ಮೈಸೂರು ಜಿಲ್ಲೆಯಲ್ಲಿ ಸಂಭವನೀಯ ವಿಪತ್ತು ಅಪಾಯಗಳನ್ನು ವಿವರಿಸುತ್ತಾ ಜಿಲ್ಲಾ ವಿಕೋಪ ನಿರ್ವಹಣಾ ಯೋಜನೆಯನ್ನು ಸಿದ್ದಪಡಿಸುವಿಕೆಗೆ ಪಾಲಿಸಬೇಕಾದ NDMP/SDMP ಮಾದರಿಗಳ ಬಗ್ಗೆ ತಿಳಿಸಿದರು. ಮೈಸೂರು ವಿ.ನಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಅನುಕೂಲವಾಗುವ ರೀತಿಯಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಇಲಾಖೆಗಳು ಹಾಗೂ ಅಧಿಕಾರಿಗಳ ನಿರ್ದಿಷ್ಟ ಜವಾಬ್ದಾರಿಗಳನ್ನು ಹಂಚಿಕೆ ಮಾಡಬೇಕಿದೆ ಎಂದು ಕಾರ್ಯಾಗಾರದಲ್ಲಿ ತಿಳಿಸಿದರು.

Centre for Disaster Management Conducts 2-day Training Program

ಕಾರ್ಯಾಗಾರದಲ್ಲಿ ವಿಕೋಪ ನಿರ್ವಹಣೆಯಲ್ಲಿ ಆರೋಗ್ಯ ನಿರ್ವಹಣೆ ಮತ್ತು ಆಸ್ಪತ್ರೆ ವಿಕೋಪ ನಿರ್ವಹಣಾ ಯೋಜನೆ ಕುರಿತು ಜಿಲ್ಲಾ ಹಿರಿಯ ವೈದ್ಯಾಧಿಕಾರಿ ಡಾ. ಮಲ್ಲಿಕಾ ಅವರು ತರಬೇತಿ ನೀಡಿದರು. ಪ್ರಾದೇಶಿಕ ಅಗ್ನಿ ಶಾಮಕ ಅಧಿಕಾರಿಗಳಾದ ಕೆ.ಪಿ ನವೀನ್ ಕುಮಾರ್ ಅವರು ಜಿಲ್ಲೆಗಳಲ್ಲಿ ಅಗ್ನಿ ಅಪಾಯಗಳನ್ನು ಗುರುತಿಸಿದ್ದು ಅವುಗಳನ್ನು ನಿರ್ವಹಿಸಲು ಸಂಬಂಧಪಟ್ಟ ಇಲಾಖೆಗಳ ಸಮನ್ವಯತೆ ಅವಶ್ಯವಿದ್ದು ಪ್ರಾತಿಕ್ಷತೆ ವಿಧಾನ ಮೂಲಕ ಪ್ರಯೋಗಿಕವಾಗಿ ತರಬೇತಿ ನೀಡಿದರು.

English summary
Centre for Disaster Management Conducted 2-day Training Program in Mysuru, more than 36 participated in this program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X