ಮಾನವೀಯತೆ ಹೆಸರಲ್ಲಿ ನಾವು ರಾಜಕೀಯ ಮಾಡುತ್ತೇವೆ- ರಾಜನಾಥ್ ಸಿಂಗ್
ಮೈಸೂರು, ಏಪ್ರಿಲ್ 29: 9 ವರ್ಷದಿಂದ ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಕೆಲಸ ನಡೆಯುತ್ತಿದೆ. ಭ್ರಷ್ಟಾಚಾರ ರಹಿತ ಸರಕಾರ ನೀಡಿದ್ದಾರೆ. ಭ್ರಷ್ಟಾಚಾರ ರಹಿತವಾಗಿ ರಾಜ್ಯದಲ್ಲೂ ಕೆಲಸ ಮಾಡಲಾಗುವುದು. ಭ್ರಷ್ಟಾಚಾರ ನಡೆದರೆ ಅವರ ಮನೆಯನ್ನು ಜಪ್ತಿ ಮಾಡಲಾಗುವುದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದರು.
ನಗರದ ವಿವೇಕಾನಂದ ಸರ್ಕಲ್ ಬಳಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಭ್ರಷ್ಟಾಚಾರ ನಿಗ್ರಹ ಮಾಡಲು ದೇಶದಲ್ಲಿ ವ್ಯವಸ್ಥೆ ಬದಲಾಯಿಸಬೇಕು. ನಾನು ದೆಹಲಿಯಿಂದ 100 ಪೈಸೆ ಕಳುಹಿಸಿದರೆ ಜನರಿಗೆ ತಲುಪುವುದು 16 ಪೈಸೆ ಎಂದು ರಾಜೀವ್ ಗಾಂಧಿ ಹೇಳಿದ್ದರು. ಆದರೆ ಮೋದಿ ಅವರು 100 ಪೈಸೆ ಕಳುಹಿಸಿದರೆ ಎಲ್ಲವೂ ಜನರಿಗೆ ಸೇರುತ್ತಿದೆ. ನಮ್ಮ ಸರಕಾರ ಬಂದ ಮೇಲೆ ನೇರವಾಗಿ ಫಲಾನುಭವಿಗಳಿಗೆ 28 ಲಕ್ಷ ಕೋಟಿ ಹಣವನ್ನು ಕಳುಹಿಸಲಾಗಿದೆ. 2018ರಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಸಿಗಲಿಲ್ಲ. ಕುಮಾರಸ್ವಾಮಿ ಮುಖ್ಯಮಂತ್ರಿ ಆದರು. ನಂತರ ಯಡಿಯೂರಪ್ಪ ಆದರು. ಇದೀಗ ಬೊಮ್ಮಾಯಿ ಸಿಎಂ ಆಗಿದ್ದಾರೆ. ಈ ಬಾರಿ ಸಂಪೂರ್ಣ ಬಹುಮತ ನೀಡಿ ಎಂದು ಮನವಿ ಮಾಡಿದರು.

ಇತ್ತೀಚೆಗೆ ರಾಜ್ಯಾದ್ಯಂತ ಉನ್ನತ ರಸ್ತೆ, ವಿಮಾನ ನಿಲ್ದಾಣ, ಮೆಟ್ರೋ ರೈಲು ಉದ್ಘಾಟನೆ ಆಗಿದೆ. ಹಲವು ಪ್ರಗತಿಪರ ಕೆಲಸ ಆಗಿದೆ. ತುಮಕೂರಿನಲ್ಲಿ ಹೆಲಿಕಾಪ್ಟರ್ ತಯಾರಿಸುವ ಕಾರ್ಖಾನೆಗೆ ಶಿಲಾನ್ಯಾಸ ಮಾಡಿದೆವು. ಅದು ಮೇಕ್ ಇನ್ ಇಂಡಿಯಾ ಹೆಲಿಕಾಪ್ಟರ್ ಎಂಬುದೆ ಹೆಮ್ಮೆಯ ಸಂಗತಿಯಾಗಿದೆ. ಇಲ್ಲಿಯವರೆಗೆ ಭಾರತದಲ್ಲಿ ಇದ್ದದ್ದು 74 ವಿಮಾನ ನಿಲ್ದಾಣ. ನಮ್ಮ ಸರಕಾರ ಬಂದ ಮೇಲೆ ಈ ಸಂಖ್ಯೆ 148 ಏರಿಕೆಯಾಗಿದೆ ಎಂದರು.
ಮೊದಲಿಗೆ ಈ ದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಒಂದು ದಿನಕ್ಕೆ 5 ಕಿಮೀ ನಿರ್ಮಾಣ ಆಗುತ್ತಿದೆ. ನಮ್ಮಸರಕಾರ ಬಂದಮೇಲೆ ಒಂದು ದಿನಕ್ಕೆ 38 ಕಿಮೀ ಆಗುತ್ತಿದೆ. ಇದು ಮೊದಲೆ ಆಗಿದ್ದಾರೆ ದೇಶ ಮತ್ತಷ್ಟು ಅಭಿವೃದ್ಧಿ ಕಾಣುತ್ತಿತ್ತು. ಮೋದಿ ಅಭಿವೃದ್ಧಿ ಪರ ಯೋಚಿಸುತ್ತಾರೆ. ಜೌದ್ಯೋಗಿಕ ಮೂರು ಇಂಡಸ್ಟ್ರಿಯಲ್ ಕಾರಿಡಾರ್ ಬಗ್ಗೆ ಯೋಚಿಸಿದ್ದಾರೆ. ಕರ್ನಾಟಕದಲ್ಲೂ ಒಂದು ಕಾರಿಡಾರ್ ಆಗುತ್ತಿದೆ ಎಂದರು.

ಕಾಂಗ್ರೆಸ್ ಅಧಿಕಾರ ಪಡೆಯಲುಬಧರ್ಮ, ಜಾತಿ ಆಧಾರದಲ್ಲಿ ಸಮಾಜವನ್ನು ಒಡೆಯುತ್ತಿದೆ. ಆದರೆ ಬಿಜೆಪಿ ಜಾತಿ, ಧರ್ಮ ಒಡೆಯದೆ ಕೆಲಸ ಮಾಡಲು ಬಯಸುತ್ತದೆ. ಸಂವಿಧಾನದ ಬಗ್ಗೆ ಗೌರವ ಕಾಂಗ್ರೆಸ್ ಗೆ ಇಲ್ಲ. ಹಾಗಾಗಿ ತುರ್ತು ಪರಿಸ್ಥಿತಿ ಘೋಷಿಸಿದ್ದು ಕಾಂಗ್ರೆಸ್ ಹೊರತು ಬಿಜೆಪಿ ಅಲ್ಲ. ಮಾನವೀಯತೆ ಹೆಸರಲ್ಲಿ ನಾವು ರಾಜಕೀಯ ಮಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಈ ಬಾರಿ ಹತಾಶೆಯಿಂದ ವರ್ತಿಸುತ್ತಿದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮೋದಿ ಅವರ ಬಗ್ಗೆ ಹಗುರ ಹೇಳಿಕೆ ನೀಡಿದ್ದಾರೆ. ಮೋದಿ ಜನಪ್ರಿಯತೆ ಕಂಡು ಹೊಟ್ಟೆ ಉರಿ ಅವರಿಗೆ. ಹಾಗಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇಂದು ಭಾರತ ಪ್ರಕಾಶಮಾನವಾಗುತ್ತಿದೆ. ಭಾರತಕ್ಕೆ ಗೌರವ ಹೆಚ್ಚಾಗಿದೆ. ಭಾರತದ ಹಿರಿಮೆ ಗರಿಮೆ ದ್ವಿಗುಣಗೊಳ್ಳುತ್ತಿದೆ ಎಂದು ತಿಳಿಸಿದರು.
ಭಾರತ ಆತ್ಮ ನಿರ್ಭರ ಆಗಬೇಕು ಎಂದು ಮೋದಿ ಸದಾ ಹೇಳುತ್ತಿದ್ದಾರೆ. ಸೈನಿಕರಿಗೆ ಕೊಡುವ ಮದ್ದುಗುಂಡು, ಶಸ್ತ್ರಾಸ್ತ್ರ, ಬಂದೂಕು, ಸಬ್ ಮೆರಿನ್ ಎಲ್ಲವನ್ನೂ ನಾವು ಈ ಹಿಂದೆ ಆಮದು ಮಾಡಿಕೊಳ್ಳಲಾಗುತ್ತಿತ್ತು. ಆದರಿಂದ ನಾವೆ ತಯಾರಿಸಿ ವಿದೇಶಕ್ಕೂ ರಫ್ತು ಮಾಡುತ್ತಿದ್ದೇವೆ. ಈ ಬಾರಿ ಬಿಜೆಪಿಗೆ ಬಹುಮತ ನೀಡಿ. ಭಾರತ ಸದೃಢವಾಗಬೇಕಾದರೆ ನಿಮ್ಮ ಮತ ಮುಖ್ಯ ಎಂದರು.
ರಾಮದಾಸ್ ಮಾತನಾಡಿ, ಡಬ್ಬಲ್ ಎಂಜಿನ್ ಸರಕಾರದಿಂದ ನಿರಂತರ ಪ್ರಗತಿ ಆಗುತ್ತಿದೆ. ಕೆ.ಆರ್.ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿದೆ. ಹೊಸಬರಿಗೆ ಅವಕಾಶ ಸಿಗಲಿ ಎಂಬ ಉದ್ದೇಶದಿಂದ ಶ್ರೀವತ್ಸ ಅವರ ಗೆಲುವಿಗೆ ಶ್ರಮಿಸಲಾಗುವುದು. 30 ವರ್ಷದ ಕಾಲ ಜನರಿಗಾಗಿ ಹಾಗೂ ಪಕ್ಷಗಾಗಿ ಸೇವೆ ಸಲ್ಲಿಸಿದ್ದೇನೆ. ಅಭಿವೃದ್ಧಿ ಮಂತ್ರ ಪಠಿಸುತ್ತಾ ಜನರ ಬಳಿಗೆ ಹೋಗುವೆ. ಬಿಜೆಪಿ ಗೆಲ್ಲಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಟಿ.ಎಸ್.ಶ್ರೀವತ್ಸ ಮಾತನಾಡಿ, ಪಾದಯಾತ್ರೆ ಮೂಲಕ ಮನೆಮನೆ ತಲುಪುವ ಕೆಲಸ ಮಾಡುತ್ತಿದ್ದೇನೆ. ಕಾರ್ಯಕರ್ತರಿಗೆ ನನ್ನ ಪರಿಚಯವಿದೆ. ಆದರೆ, ಸಾರ್ವಜನಿಕರಿಗೆ ಇಲ್ಲ. ಹಾಗಾಗಿ ಕಾರಣ ಕಾರ್ಯಕರ್ತರು ನಮ್ಮನ್ನು ಪರಿಚಯಿಸುವ ಕೆಲಸ ಆಗಬೇಕಿದೆ. ಕೆ.ಆರ್.ಕ್ಷೇತ್ರ ಬಿಜೆಪಿ ಭದ್ರಕೋಟೆ. ಹಾಗಾಗಿ ಸಾರ್ವಜನಿಕರು ಸಹಕರಿಸಬೇಕಾಗಿ ಮನವಿ ಮಾಡುತ್ತೇನೆ ಎಂದರು.
ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ದೆಹಲಿ ಬಿಜೆಪಿ ಉಪಾಧ್ಯಕ್ಷ ರಾಜೀವ್ ಬಬ್ಬರ್, ಮಾಜಿ ಎಂಎಲ್ ಸಿ ಗೋ.ಮಧುಸೂದನ್, ಮೇಯರ್ ಶಿವಕುಮಾರ್, ಮಾಜಿ ಮೇಯರ್ ಸುನಂದಾ ಪಾಲನೇತ್ರ, ಉಪ ಮೇಯರ್ ರೂಪಾ ಸೇರಿದಂತೆ ಇತರರು ಉಪಸ್ಥಿತರಿದ್ದರು.












Click it and Unblock the Notifications