ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹುಣಸೂರು ಉಪ ಚುನಾವಣೆ; 2 ಕೋಟಿ ಹಣ ವಶಕ್ಕೆ

|
Google Oneindia Kannada News

ಮೈಸೂರು, ನವೆಂಬರ್ 27 : ಹುಣಸೂರಿನಲ್ಲಿ ದಾಖಲೆ ಇಲ್ಲದೆ ಸಾಗಣೆ ಮಾಡುತ್ತಿದ್ದ 2 ಕೋಟಿ ಹಣವನ್ನು ಚುನಾವಣಾಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಡಿಸೆಂಬರ್ 5ರಂದು ಹುಣಸೂರು ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ.

ಬುಧವಾರ ಬೆಳಗ್ಗೆ ಮನುಗನಹಳ್ಳಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಜೀಪನ್ನು ಪರಿಶೀಲನೆ ನಡೆಸಿದ ಅಧಿಕಾರಿಗಳು ಚೀಲದಲ್ಲಿ ಸಾಗಣೆ ಮಾಡುತ್ತಿದ್ದ 2 ಕೋಟಿ ರೂ.ಗಳನ್ನು ವಶಕ್ಕೆ ಪಡೆದುಕೊಂಡರು. ಎಂಡಿಸಿಸಿ ಬ್ಯಾಂಕ್‌ಗೆ ಸೇರಿದ ಹಣ ಎಂದು ಜೀಪ್‌ನಲ್ಲಿದ್ದವರು ಹೇಳುತ್ತಿದ್ದಾರೆ.

ಹುಣಸೂರು: ಮತದಾರರಿಗೆ ಭರ್ಜರಿ ಬಾಡೂಟ, ದೂರು ದಾಖಲುಹುಣಸೂರು: ಮತದಾರರಿಗೆ ಭರ್ಜರಿ ಬಾಡೂಟ, ದೂರು ದಾಖಲು

By Elections Unaccounted Money Seized Hunsur

ಸಾಗಣೆ ಮಾಡುತ್ತಿದ್ದ ಹಣಕ್ಕೆ ದಾಖಲೆಗಳನ್ನು ನೀಡಲು ಎಂಡಿಸಿಸಿ ಬ್ಯಾಂಕ್ ನೌಕರರು ವಿಫಲವಾಗಿದ್ದಾರೆ. ಚೀಲದಲ್ಲಿ ಏಕೆ ಹಣ ಸಾಗಣೆ ಮಾಡುತ್ತಿದ್ದರು? ಎಂಬ ಪ್ರಶ್ನೆಗೂ ಅವರು ಸರಿಯಾದ ಉತ್ತರ ನೀಡಿಲ್ಲ. ಆದ್ದರಿಂದ, ಹಣವನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಹುಣಸೂರು ಉಪ ಚುನಾವಣೆ; ಬಿಜೆಪಿಯ ಅಚ್ಚರಿಯ ನಡೆ! ಹುಣಸೂರು ಉಪ ಚುನಾವಣೆ; ಬಿಜೆಪಿಯ ಅಚ್ಚರಿಯ ನಡೆ!

ಹುಣಸೂರಿನ ಬ್ಯಾಂಕ್‌ಗೆ ಹಣವನ್ನು ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಜೀಪ್‌ನಲ್ಲಿದ್ದವರು ಹೇಳಿದ್ದಾರೆ. ಆದರೆ, ಹಣಕ್ಕೆ ದಾಖಲೆ ಇಲ್ಲದ ಕಾರಣ ಅದನ್ನು ವಶಕ್ಕೆ ಪಡೆದುಕೊಂಡು ಬ್ಯಾಂಕ್ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ಉಪ ಚುನಾವಣೆ; ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್! ಉಪ ಚುನಾವಣೆ; ಸಿದ್ದರಾಮಯ್ಯಗೆ ಬಿಜೆಪಿ ಚಾಲೆಂಜ್!

ಡಿಸೆಂಬರ್ 5ರಂದು ಹುಣಸೂರು ಕ್ಷೇತ್ರದ ಉಪ ಚುನಾವಣೆ ನಡೆಯುತ್ತಿದೆ. ಬಿಜೆಪಿಯಿಂದ ಎಚ್. ವಿಶ್ವನಾಥ್, ಕಾಂಗ್ರೆಸ್‌ನಿಂದ ಎಚ್‌. ಪಿ. ಮಂಜುನಾಥ್ ಮತ್ತು ಜೆಡಿಎಸ್‌ನಿಂದ ಸೋಮಶೇಖರ್ ಕಣದಲ್ಲಿದ್ದಾರೆ.

English summary
2 crore of unaccounted money seized in Hunsur, Mysuru district. Model code of conduct in effect in Hunsur for December 5, 2019 by elections.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X