ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸರಕಾರಿ ಖಾಲಿ ಜಾಗಗಳಲ್ಲಿ ಸದ್ಯದಲ್ಲೇ ಕಟ್ಟಡ ಕಾಮಗಾರಿ: ತನ್ವೀರ್ ಸೇಠ್

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಫೆಬ್ರವರಿ 20: ಮೈಸೂರಿನ ಎನ್.ಆರ್.ವ್ಯಾಪ್ತಿಯಲ್ಲಿ ವಿವಿಧ ಕಟ್ಟಡ ನಿರ್ಮಾಣ ಮಾಡುತ್ತಿದ್ದು, ಸದ್ಯದಲ್ಲಿಯೇ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಹೆಜ್ಜೆ ಇರಿಸಲಾಗುವುದು ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ತನ್ವೀರ್ ಸೇಠ್ ತಿಳಿಸಿದರು.

ಮೈಸೂರು ನಗರ ಪ್ರಾಧಿಕಾರದ ವಲಯ ಕಚೇರಿ -5ಬಿ ವ್ಯಾಪ್ತಿಯಲ್ಲಿನ ರಾಜೀವನಗರ ಬಡಾವಣೆಯಲ್ಲಿ ವಿದ್ಯಾಸಂಸ್ಥೆ ಮತ್ತು ಭವನ, ಮೂಲಸೌಕರ್ಯವುಳ್ಳ ಸ್ಥಳ ಮಂಜೂರಾತಿ ಕುರಿತು ಪ್ರಸ್ತಾಪಿಸಲು ನಗರಾಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಸಚಿವ ತನ್ವೀರ್ ಸೇಠ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

Building will built in government lands: sait

ಎನ್. ಆರ್.ವ್ಯಾಪ್ತಿಯಲ್ಲಿ ಸರಕಾರಿ ಇಂಜಿನಿಯರಿಂಗ್ ಕಾಲೇಜು ಮತ್ತು ವಿದ್ಯಾರ್ಥಿ ನಿಲಯ, ಮಹಾರಾಣಿ ಬಾಲಕಿಯರ ಕಾಲೇಜು, ಗ್ರಂಥಾಲಯ, ಅಜೀಜ್ ಸೇಠ್ ಭವನ ನಿರ್ಮಾಣ, ಹಿಂದುಳಿದ ವರ್ಗಗಳ ಕಚೇರಿ ಸಂಕೀರ್ಣ ನಿರ್ಮಾಣ, ರೇಷ್ಮೆ ಮಾರುಕಟ್ಟೆ, ನಿರ್ಮಾಣ ಕಾರ್ಯಗಳನ್ನು ನಡೆಯುತ್ತಿವೆ ಎಂದರು.

ಎಲ್ಲೆಲ್ಲಿ ಸರಕಾರಿ ಜಾಗಗಳಿವೆ ಎಂಬುದನ್ನು ಗುರುತಿಸಿ, ಯಾವ ಜಾಗ ಯಾವ ಕಟ್ಟಡ ನಿರ್ಮಾಣಕ್ಕೆ ಸೂಕ್ತವಾಗಲಿದೆ ಎಂಬುದನ್ನು ಪರಿಶೀಲಿಸಿ, ಮುಂದಿನ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವಲಯ ಕಚೇರಿ-5ಬಿಗೆ ಸಂಬಂಧಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.

English summary
Building will built in government vacant lands, said by minister Tanvir Sait on Monday in Mysuru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X