CM Siddaramaiah: ಅವರ ಜಾತಕ ಬಿಚ್ಚಿಡುತ್ತೇನೆ; ಎದುರಾಳಿಗಳಿಗೆ ಸಿಎಂ ಸಿದ್ದರಾಮಯ್ಯ ವಾರ್ನಿಂಗ್!

ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಸರ್ಕಾರವೇ ಬಿದ್ದು ಹೋಗುತ್ತದೆ ಎಂದು ಬಿಜೆಪಿ - ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಮುಡಾ ಹಗರಣ ಸೇರಿ ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಬಿಜೆಪಿ ಜೆಡಿಎಸ್ ಮುಖಂಡರು ಮೈಸೂರು ಚಲೋ ಹೆಸರಿನಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಮಾತ್ರ ತಾನು ತಪ್ಪು ಮಾಡಿಲ್ಲ ರಾಜೀನಾಮೇ ಕೊಡುವ ಪ್ರಮೇಯವೇ ಇಲ್ಲ ಎಂದಿದ್ದಾರೆ.

ಇನ್ನು ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲಿ ಅವರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿ ಬಂದಿದ್ದಾಗ ರಾಜೀನಾಮೆ ಕೊಟ್ಟಿದ್ದರು. ಸಿದ್ದರಾಮಯ್ಯಗೆ ಕೂಡ ಅದೇ ಪರಿಸ್ಥಿತಿ ಬರುತ್ತದೆ ಎಂದು ವಿಪಕ್ಷ ನಾಯಕರು ಹೇಳುತ್ತಿದ್ದಾರೆ. ಇದಕ್ಕೆ ಉತ್ತರ ಕೊಟ್ಟಿರುವ ಸಿಎಂ ಸಿದ್ದರಾಮಯ್ಯ ಇಬ್ಬರ ಪ್ರಕರಣ ಬೇರೆ ಬೇರೆ ಎಂದಿದ್ದಾರೆ.

BS Yediyurappa s Case and My Case Are Different CM Siddaramaiah

ಮೈಸೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನನ್ನ ಬಗ್ಗೆ ಮಾತನಾಡುವ ನೈತಿಕತೆ ಬಿಎಸ್‌ ಯಡಿಯೂರಪ್ಪ ಅವರಿಗೆ ಇಲ್ಲ. ಎಲ್ಲರ ಹಗರಣಗಳನ್ನು ಜನರ ಮುಂದಿಡುತ್ತೇನೆ. ಯಡಿಯೂರಪ್ಪ ಚೆಕ್ ಮೂಲಕ ಹಣ ಪಡೆದಿದ್ದರು. ಡಿ ನೋಟಿಫಿಷನ್ ಮಾಡಿದ್ದರು. ಅವರ ಪ್ರಕರಣ ಮತ್ತು ನತ್ತ ಪ್ರಕರಣ ಬೇರೆ ಎಂದು ಹೇಳಿದರು.

ನಾಡಿದ್ದು ಮೈಸೂರಿನಲ್ಲಿ ಸಮಾವೇಶ ಇದ್ದು, ಎಲ್ಲರ ಹಗರಣವನ್ನು ಜನರ ಮುಂದಿಡುತ್ತೇನೆ. ಇಂದು ನಡೆಯಬೇಕಿದ್ದ ಪ್ರೆಸ್‌ ಮೀಟ್ ಕ್ಯಾನ್ಸಲ್ ಮಾಡಿದ್ದೇನೆ. ಸಮಾವೇಶದಲ್ಲೇ ಎಲ್ಲವನ್ನೂ ಹೇಳುತ್ತೇನೆ ಎಂದು ಹೇಳಿದ್ದಾರೆ.

ರಾಜ್ಯಪಾಲರಿಗೂ ಅರ್ಥವಾಗುತ್ತದೆ

ರಾಜ್ಯಪಾಲರಿಂದ ನನಗೆ ಒಂದೇ ನೋಟಿಸ್ ಬಂದಿದ್ದು ಅದಕ್ಕೆ ಉತ್ತರ ಕೊಟ್ಟಿದ್ದೇನೆ. ಮುಖ್ಯ ಕಾರ್ಯದರ್ಶಿಗಳು ರಾಜ್ಯಪಾಲರ ಭೇಟಿ ಮಾಡಿದ್ದು ಬೇರೆ ವಿಚಾರಕ್ಕೆ ಸಿಎಸ್ ಭೇಟಿಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಹೊಸದಾಗಿ ನೇಮಕವಾದ ಹಿನ್ನಲೆ ಭೇಟಿ ಆಗಿದ್ದಾರೆ. ಕಾನೂನಾತ್ಮಕವಾಗಿ ನನ್ನ ತಪ್ಪಿಲ್ಲ ಅಂತ ರಾಜ್ಯಪಾಲರಿಗೆ ಅರ್ಥವಾಗುತ್ತದೆ ಎನ್ನುವ ಭರವಸೆ ಇದೆ ಎಂದರು.

ಸಚಿವ ಸಂಪುಟದವರು ಉತ್ತರ ಕೊಟ್ಟಿದ್ದಾರೆ.‌ ಇದನ್ನು ಒಪ್ಪಿಕೊಳ್ಳುತ್ತಾರೆ ಎಂಬ ನಂಬಿಕೆ ಇದೆ. ವಿಪಕ್ಷಗಳ ಸುಳ್ಳುಗಳನ್ನು ಎದುರಿಸುವ ಶಕ್ತಿ ನನಗಿದೆ. ಬಿಜೆಪಿ ಅವರದ್ದು ಭ್ರಷ್ಟ ಸರ್ಕಾರ. ಅವರದೇ ಹಗರಣದ ತನಿಖೆಗಳು ನಡೆಯುತ್ತಿದೆ. ಇವರಿಗೆ ಯಾವ ನೈತಿಕತೆ ಇದೇ ಎಂದು ಕಿಡಿಕಾರಿದರು. ಪಾದಯಾತ್ರೆ ಮುಗಿಯುವಷ್ಟರಲ್ಲಿ ಸಿಎಂ ರಾಜೀನಾಮೆ ಎಂಬ ಯಡಿಯೂರಪ್ಪ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಕೋರ್ಟ್ ದಯೆದಿಂದ ಹೊರಗಡೆ ಇದ್ದಾರೆ. ಈ ವಯಸ್ಸಿನಲ್ಲಿ ಫೋಕ್ಸೋ ಕೇಸ್ ಹಾಕಿಸಿಕೊಂಡಿದ್ದಾರೆ. 82 ನೇ ವಯಸ್ಸಿನಲ್ಲಿ ಇದೆಲ್ಲ ಬೇಕಿತ್ತಾ, ಅವರು ರಾಜಕೀಯ ನಿವೃತ್ತಿ ಆಗಬೇಕಿತ್ತು ಎಂದರು.

ಬಿಜೆಪಿ ಜೆಡಿಎಸ್ ನನ್ನನ್ನು ಟಾರ್ಗೆಟ್ ಮಾಡಿದೆ

ನನ್ನನ್ನು ಗುರಿಯಾಗಿಸಿಕೊಂಡು ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದಾರೆ. ಸುಳ್ಳುಗಳಿಂದ ಸರ್ಕಾರ ಅಸ್ಥಿರಗೊಳಿಸಲು ಆಗಲ್ಲ, ಬಿಜೆಪಿ ಜೆಡಿಎಸ್ ಇದರಲ್ಲಿ ಯಶಸ್ವಿಯಾಗಲ್ಲ. ಜನ ಅವರನ್ನು ನಂಬಲ್ಲ, ಮೊದಲು ಆಪರೇಷನ್ ಕಮಲ ಮಾಡಲು ಯತ್ನಿಸಿದರು ಅದು ವಿಫಲ ಆಯ್ತು ಈಗ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+