ಟಿಪ್ಪು ಮತಾಂಧನೆಂದು ಬಿಂಬಿಸಿದವರು ಬ್ರಿಟಿಷರು : ಪ್ರೊ. ಕುರುಪ್
ಮೈಸೂರು, ಜನವರಿ 19 : ಟಿಪ್ಪುವನ್ನು ಸೋಲಿಸಲಾಗದ ಬ್ರಿಟಿಷರು ಆತ ಮತಾಂಧನೆಂದು ಮಾಡಿದ ಅಪಪ್ರಚಾರ ಮುಂದುವರಿದಿದ್ದು, ರಾಜಕೀಯ ದುರುದ್ದೇಶದಿಂದಲೂ ಇಂತಹ ಆರೋಪಗಳು ವ್ಯಕ್ತವಾಗುತ್ತಿವೆ ಎಂದು ಕ್ಯಾಲಿಕಟ್ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಕೆ.ಕೆ.ಎನ್.ಕುರುಪ್ ಅಭಿಪ್ರಾಯಪಟ್ಟರು.
ಮೈಸೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗ ಹಾಗೂ ಟಿಪ್ಪು ಅಧ್ಯಯನ ಪೀಠದ ಸಹಯೋಗದಲ್ಲಿ ಮಾನಸಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣದಲ್ಲಿ ಟಿಪ್ಪು ಸುಲ್ತಾನರ ಆಡಳಿತದಲ್ಲಿ ಆರ್ಥಿಕ ಅಭಿವೃದ್ಧಿ ವಿಷಯ ಕುರಿತು ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರದ ಕುರಿತು ಅವರು ಮಾತನಾಡಿದರು.
ಉತ್ತಮ ಆಡಳಿತಗಾರ ಎನಿಸಿದ್ದ ಟಿಪ್ಪು ಸುಲ್ತಾನ್ ಅಪಾರ ಜನಮನ್ನಣೆ ಗಳಿಸಿದ್ದ. ಇದರಿಂದ ಈಸ್ಟ್ ಇಂಡಿಯಾ ಕಂಪನಿ ಹಾಗೂ ಬ್ರಿಟಿಷರು ಟಿಪ್ಪು ಒಬ್ಬ ಮತಾಂಧ ಎಂದು ಅಪಪ್ರಚಾರ ಮಾಡಿದರು.

ಇದು ಈಗಲೂ ರಾಜಕೀಯ ದಾಳಕ್ಕಾಗಿ ಬಳಕೆಯಾಗುತ್ತಿದೆ. ಟಿಪ್ಪು ಮೇಲೆ ವಿನಾಕಾರಣ ಆರೋಪ ಮಾಡಲಾಗುತ್ತಿದೆ. ಆದರೆ, ಟಿಪ್ಪುವಿನ ಸಮಕಾಲೀನ ಸಂಸ್ಥಾನಗಳ ಯಾವ ದೊರೆಯೂ ಟಿಪ್ಪು ಮಾದರಿಯಲ್ಲಿ ರೈತರ ಪರ ನಿಂತಿರಲಿಲ್ಲ ಎಂದು ಟಿಪ್ಪು ಮಂತಾಧನಲ್ಲ. ರೈತಾಪಿ ವರ್ಗದ ಅಭಿವೃದ್ಧಿಗೆ ತನ್ನದೆ ಆದ ಕೊಡುಗೆ ನೀಡಿದ್ದಾನೆ ಎಂದು ಹೇಳಿದರು












Click it and Unblock the Notifications