ಮೈಸೂರು ಬ್ರಾಹ್ಮಣ ಸಮುದಾಯದಿಂದ ಸಿಎಂಗೆ ಅಭಿನಂದನೆ

ಮೈಸೂರು, ಜುಲೈ 6 : ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ ಬಜೆಟ್‌ನಲ್ಲಿ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪನೆಗೆ 25 ಕೋಟಿ ಅನುದಾನ ಘೋಷಿಸಿರುವುದಕ್ಕೆ ಮೈಸೂರಿನ ಬ್ರಾಹ್ಮಣ ಸಮುದಾಯ ಸಂತಸ ವ್ಯಕ್ತಪಡಿಸಿದೆ.

ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಕಾರ್ಯಕರ್ತರು ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಕರಿಗೆ ಗುರುವಾರ ಸಿಹಿ ವಿತರಿಸಿ ಸಮ್ಮಿಶ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು.

ಬ್ರಾಹ್ಮಣರಿಗೆ ನೀಡಿದ್ದ ವಾಗ್ದಾನದ ಕಾಲುಭಾಗ ಉಳಿಸಿಕೊಂಡ ಎಚ್ಡಿಕೆ
'ವಿಪ್ರ ನಿಧಿ ಸ್ಥಾಪನೆಗೆ ಸಂಬಂಧಿಸಿ ಎರಡು ವರ್ಷಗಳಿಂದ ಬ್ರಾಹ್ಮಣ ಯುವ ವೇದಿಕೆ ಹೋರಾಟ ನಡೆಸಿತ್ತು. ಅಲ್ಲದೆ, ಸಮಾವೇಶವನ್ನೂ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆಯಲಾಗಿತ್ತು. ಸಮುದಾಯದ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಆಂಧ್ರಪ್ರದೇಶ, ತೆಲಂಗಾಣ ಮಾದರಿಯಲ್ಲಿ ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ ಅಥವಾ ವಿಪ್ರನಿಧಿ ಸ್ಥಾಪನೆಯ ಅಗತ್ಯ ಇತ್ತು' ಎಂದು ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷ ಎನ್‌.ಶ್ರೀಧರಮೂರ್ತಿ ತಿಳಿಸಿದರು.

Brahmin association of Mysuru happy with Karnataka Budget

ಎಚ್.ಡಿ.ಕುಮಾರಸ್ವಾಮಿ ಅವರು ಮೈಸೂರಿನಲ್ಲಿ ನಡೆದ ವಿಪ್ರ ಅಭಿಯಾನದಲ್ಲಿ ಪಾಲ್ಗೊಂಡಿದ್ದಾಗ ‌‌ಈ ವಿಷಯ ಕುರಿತು ಮನವಿ ಸಲ್ಲಿಸಲಾಗಿತ್ತು. ತೆಲಂಗಾಣ ಮಾದರಿಯಲ್ಲಿ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಮತ್ತು ಸನಾತನ ವೈದಿಕ ಧರ್ಮದ ಉಳಿವಿಗಾಗಿ ಕನ್ನಡ ಸಂಸ್ಕೃತಿ ಇಲಾಖೆಯಿಂದ ಶಂಕರಾಚಾರ್ಯರ ಜಯಂತಿ ಆಚರಣೆ ಘೋಷಿಸಿರುವುದು ಕೂಡಾ ಸಂತಸದ ವಿಚಾರ ಎಂದರು.

ಕಾಂಗ್ರೆಸ್ ಮುಖಂಡ ವಿನಯ್ ಕಣಗಾಲ್, ಮುಳ್ಳೂರು ಸುರೇಶ್, ರಂಗನಾಥ್, ಎಚ್.ವಿ.ಭಾಸ್ಕರ್, ಮೈಕ್ ಚಂದ್ರು, ರಾಘವೇಂದ್ರ ಪ್ರಸಾದ್, ಯುವ ಮುಖಂಡರಾದ ಅಜಯ್ ಶಾಸ್ತ್ರಿ, ಮನು ವೆಂಕಟರಾಮ್, ಜೆಡಿಎಸ್ ಮುಖಂಡರಾದ ಪ್ರಶಾಂತ್ ಪಚ್ಚು, ಶ್ರೀಕಾಂತ್ ಕಶ್ಯಪ, ಪ್ರಕಾಶ್ ಪ್ರಿಯ ದರ್ಶನ್, ವೀಣಾ, ಸುಬ್ಬಯ್ಯ, ಹೆಡತಲೆ ಮಂಜು ಹಾಜರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+