ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ರಾಹ್ಮಣರಿಗೆ ನೀಡಿದ್ದ ವಾಗ್ದಾನದ ಕಾಲುಭಾಗ ಉಳಿಸಿಕೊಂಡ ಎಚ್ಡಿಕೆ

By Prasad
|
Google Oneindia Kannada News

ಬೆಂಗಳೂರು, ಜುಲೈ 05 : ತಾವು ಅಧಿಕಾರಕ್ಕೆ ಬಂದರೆ 100 ಕೋಟಿ ರುಪಾಯಿ ವಿಪ್ರ ನಿಧಿ ಸ್ಥಾಪಿಸುವುದಾಗಿ, ಚುನಾವಣೆಗೂ ಮೊದಲು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಘೋಷಿಸಿದ್ದರು.

ಕಾಂಗ್ರೆಸ್ ಬೆಂಬಲದೊಂದಿಗೆ ಜೆಡಿಎಸ್ ಅಧಿಕಾರಕ್ಕೂ ಬಂದಿದೆ, ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯೂ ಆಗಿದ್ದಾರೆ ಮತ್ತು ಆಯವ್ಯಯವನ್ನೂ ಮಂಡಿಸಿದ್ದಾರೆ. ಆದರೆ, ನೀಡಿದ ವಾಗ್ದಾನದ ಕೇವಲ ಕಾಲು ಭಾಗವನ್ನು ಮಾತ್ರ ಕುಮಾರಸ್ವಾಮಿಯವರು ಈಡೇರಿಸಿದ್ದಾರೆ.

ಅಧಿಕಾರಕ್ಕೆ ಬಂದ್ರೆ ವಿಪ್ರರಿಗೆ ನೂರು ಕೋಟಿ : ಕುಮಾರಸ್ವಾಮಿಅಧಿಕಾರಕ್ಕೆ ಬಂದ್ರೆ ವಿಪ್ರರಿಗೆ ನೂರು ಕೋಟಿ : ಕುಮಾರಸ್ವಾಮಿ

ಅಂದರೆ, ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಕುಮಾರಸ್ವಾಮಿಯವರು 25 ಕೋಟಿ ರುಪಾಯಿ ಅನುದಾನ ನೀಡುತ್ತಿರುವುದಾಗಿ ತಮ್ಮ ಚೊಚ್ಚಲ ಬಜೆಟ್ಟಿನಲ್ಲಿ ಮಂಡಿಸಿದ್ದಾರೆ. ಜೊತೆಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಸ್ಥಾಪಿನೆಗೆ ಕುಮಾರಸ್ವಾಮಿ ಹಸಿರು ನಿಶಾನೆ ನೀಡಿದ್ದಾರೆ.

Budget 2018 : Kumaraswamy assures Rs 25 crores to Brahmins

ಅಂದ ಹಾಗೆ, ಇದೇ ವರ್ಷ ಫೆಬ್ರವರಿ 16ರಂದು ಮಂಡಿಸಲಾಗಿದ್ದ ಬಜೆಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಸ್ಲಿಂ ಜನಾಂಗಕ್ಕೆ ದಂಡಿಗಟ್ಟಲೆ ನೀಡಿದ್ದರು, ಆದರೆ ಬ್ರಾಹ್ಮಣರಿಗಿರಲಿ ಹಿಂದೂಗಳಿಗೆ ಕೂಡ ಪುಡಿಗಾಸನ್ನೂ ನೀಡಿರಲಿಲ್ಲ.

LIVE: ಕರ್ನಾಟಕ ಬಜೆಟ್ 2018: ರೈತರ 2 ಲಕ್ಷ ರೂ.ವರೆಗಿನ ಸಾಲಮನ್ನಾLIVE: ಕರ್ನಾಟಕ ಬಜೆಟ್ 2018: ರೈತರ 2 ಲಕ್ಷ ರೂ.ವರೆಗಿನ ಸಾಲಮನ್ನಾ

ವಿಪ್ರರಿಗೆ 100 ಕೋಟಿ ರು. ಅನುದಾನ ನೀಡುವುದಾಗಿ, ನಗರದ ನ್ಯಾಷನಲ್ ಕಾಲೇಜು ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಬೆಂಗಳೂರು ಮಹಾನಗರ ಸಂಘಟನೆಯ ವತಿಯಿಂದ ಫೆಬ್ರವರಿ 24ರಂದು ಆಯೋಜಿಸಲಾಗಿದ್ದ ಎರಡು ದಿನಗಳ ಬೆಂಗಳೂರು ಮಹಾನಗರ ವಿಪ್ರ ಸಮಾವೇಶದಲ್ಲಿ ಕುಮಾರಸ್ವಾಮಿ ಘೋಶಿಸಿದ್ದರು.

ಬ್ರಾಹ್ಮಣರ ಈ ಬೇಡಿಕೆ ಈಡೇರಿಸುವವರಿಗೆ ಚುನಾವಣೆಯಲ್ಲಿ ಮತಬ್ರಾಹ್ಮಣರ ಈ ಬೇಡಿಕೆ ಈಡೇರಿಸುವವರಿಗೆ ಚುನಾವಣೆಯಲ್ಲಿ ಮತ

ಅಲ್ಲದೆ, ರಾಜ್ಯದ ಸಕಲ ಅಭಿವೃದ್ಧಿಗೆ ಯಾವುದೇ ಸರಕಾರ ನೀಡಿರುವ ಕೊಡುಗೆಗಳಿಗಿಂತ ಬ್ರಾಹ್ಮಣ ಸಮುದಾಯ ನೀಡಿರುವ ಕೊಡುಗೆ ಅಪಾರ ಎಂದು ಅವರು ಆಗ ಶ್ಲಾಘಿಸಿದ್ದರು. ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ಅರ್ಜಿ ಸಲ್ಲಿಸುವ ಅವಶ್ಯಕತೆಯೇ ಇಲ್ಲ ಎಂದು ಅವರು ಭರವಸೆ ನೀಡಿದ್ದರು.

English summary
Karnataka Budget 2018 : Chief minister and finance minister H D Kumaraswamy has assured Rs 25 crores to Brahmins and establish Karnataka State Brahmins' Development Board.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X