ಮೈಸೂರಿನಲ್ಲಿ ಕಬ್ಬಡ್ಡಿ ಆಡುವ ವೇಳೆ ಯುವಕ ಸಾವು
ಮೈಸೂರು, ಡಿಸೆಂಬರ್ 28: ಕಬ್ಬಡ್ಡಿ ಆಡುವ ವೇಳೆ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಶಾರದಾ ದೇವಿ ನಗರದ ಶಾರದಾ ಶಾಲೆ ವಿದ್ಯಾರ್ಥಿ ಆಕಾಶ್ (15) ಮೃತಬಾಲಕ. ಜನತಾನಗರ ನಿವಾಸಿ ರಮೇಶ್ ಪುತ್ರನಾಗಿರುವ ಆಕಾಶ್ ಜಿಲ್ಲಾ ಮಟ್ಟದ ಕಬಡ್ಡಿ ಪಂದ್ಯಕ್ಕೆ ಅಭ್ಯಾಸ ಮಾಡುತ್ತಿದ್ದ ಈ ವೇಳೆ ಘಟನೆ ನಡೆದಿದೆ.
ಕಬ್ಬಡ್ಡಿ ಆಡುತ್ತಿದ್ದ ವೇಳೆ ರೈಡಿಂಗ್ ಮಾಡಿ ತನ್ನ ಕೋರ್ಟ್ ಕಡೆ ಹೋಗುವ ವೇಳೆ ಆಕಾಶ್ ತಲೆ ಸಿಮೆಂಟ್ ಕಂಬಕ್ಕೆ ಬಡಿದಿದೆ. ಗಂಭೀರ ಗಾಯಗೊಂಡ ವಿದ್ಯಾರ್ಥಿ ಆಕಾಶ್ ಗೆ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಆಕಾಶ್ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ .

ಮೃತದೇಹವನ್ನ ಕೆ.ಆರ್. ಆಸ್ಪತ್ರೆಗೆ ಶವಗಾರಕ್ಕೆ ರವಾನೆ ಮಾಡಲಾಗಿದೆ. ಈ ಕುರಿತು ಸರಸ್ವತಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.











Click it and Unblock the Notifications