ನಂಜನಗೂಡಿನ ಪೇಪರ್ ಕಾರ್ಖಾನೆಗೆ ಹುಸಿ ಬಾಂಬ್ ಕರೆ
ಮೈಸೂರು, ಫೆಬ್ರವರಿ 29: ನಂಜನಗೂಡಿನ ಪೇಪರ್ ಕಾರ್ಖಾನೆಗೆ ಬಾಂಬ್ ಬೆದರಿಕೆ ಕರೆಯೊಂದು ಬಂದಿದ್ದು, ಆತಂಕ ಸೃಷ್ಟಿಸಿದೆ. ಮೈಸೂರು ಜಿಲ್ಲೆಯ ನಂಜನಗೂಡಿನ ತಾಂಡ್ಯಾ ಕೈಗಾರಿಕಾ ಪ್ರದೇಶದಲ್ಲಿರುವ ರಾಮ್ ಶ್ರೀ ಪೇಪರ್ ಕಾರ್ಖಾನೆ ಮಾಲೀಕರಿಗೆ ಅನಾಮಧೇಯ ವ್ಯಕ್ತಿಯಿಂದ ಬಾಂಬ್ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.
ಪೇಪರ್ ಕಾರ್ಖಾನೆ ಬಳಿ ಪೊಲೀಸರು ತಪಾಸಣೆ ನಡೆಸಿದ್ದಾರೆ. ಶ್ವಾನದಳ ಹಾಗೂ ಬಾಂಬ್ ಪತ್ತೆ ದಳದ ಸಮೇತ ನಂಜನಗೂಡು ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದು, 45 ನಿಮಿಷಗಳ ಹಿಂದೆ ಕರೆ ಬಂದಿದೆ ಎನ್ನಲಾಗಿದೆ. ಕರೆ ಮಾಡಿದ ಅನಾಮಧೇಯ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ಆತಂಕದಿಂದ ನೌಕರರು ಕಾರ್ಖಾನೆಯಿಂದ ಹೊರಬಂದಿದ್ದಾರೆ. ಸ್ಥಳದಲ್ಲಿ ಪೊಲೀಸರಿಂದ ತೀವ್ರ ತಪಾಸಣೆ ನಡೆಸಿ ಇದು ಹುಸಿ ಬಾಂಬ್ ಕರೆ ಎಂದು ಸ್ಪಷ್ಟಪಡಿಸಿದ್ದಾರೆ. ಕರೆ ಮಾಡಿದವನಿಗಾಗಿ ಶೋಧ ನಡೆದಿದೆ.












Click it and Unblock the Notifications