ಕಡಕೊಳ ಬಳಿ ಸ್ಕೂಟರ್ ಮೇಲೆ ಯುವಕನ ಶವ ಪತ್ತೆ
ಮೈಸೂರು, ಜನವರಿ 01: ಮೈಸೂರು ಹೊರವಲಯದ ಕಡಕೊಳ ಬಳಿ ಅನುಮಾನಾಸ್ಪದ ರೀತಿಯಲ್ಲಿ ಯುವಕನೊಬ್ಬನ ಶವ ಪತ್ತೆಯಾಗಿದೆ.
ಸ್ಕೂಟರ್ ಮೇಲೆ ಯುವಕನ ಶವ ಪತ್ತೆಯಾಗಿದ್ದು, ದೇಹದ ಮೇಲೆ ಗಾಯದ ಗುರುತುಗಳಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಮೃತ ಯುವಕನನ್ನು ನಂಜನಗೂಡು ತಾಲೂಕಿನ ಅಡಕನಹಳ್ಳಿ ಗ್ರಾಮದ ಕೃಷ್ಣ (22 ) ಎಂದು ಗುರುತಿಸಲಾಗಿದೆ.
ತುಮಕೂರಲ್ಲಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ಮಹಿಳೆ ಶವ ಪತ್ತೆ, ಕಾಲುಗಳೂ ಕಾಣೆ
ಸ್ಕೂಟರ್ ಮೇಲೆಯೇ ಕೃಷ್ಣ ಶವ ಬಿದ್ದಿದೆ. ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಸ್ಕೂಟರ್ ಎಳೆದು ತಂದಿರುವ ಗುರುತು ಕಂಡು ಬಂದಿದ್ದು, ಕೃಷ್ಣನ ಮೈ ಮೇಲೆ ಗಾಯದ ಗುರುತುಗಳಾಗಿವೆ. ಯಾರೋ ಕೊಲೆ ಮಾಡಿ ತಂದು ಹಾಕಿರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ರಾತ್ರಿ ಮನೆಯಿಂದ ಹೋಗಿದ್ದ ಕೃಷ್ಣ ವಾಪಸ್ಸು ಬಂದಿರಲಿಲ್ಲ. ಇವತ್ತು ಬೆಳಿಗ್ಗೆ ಕೃಷ್ಣನ ಶವವಾಗಿ ಪತ್ತೆಯಾಗಿದ್ದಾನೆ.
ನಂಜನಗೂಡು ಗ್ರಾಮಾಂತರ ಪೊಲೀಸರು, ಮೈಸೂರು ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.