ಪ್ರತಾಪ್ ಸಿಂಹ ಪರ ಪ್ರಚಾರಕ್ಕೆ ಮೋದಿ ಆಗಮನ?
ಮೈಸೂರು, ಮಾರ್ಚ್ 19- ಅಂಕಣಕಾರ ಪ್ರತಾಪ್ ಸಿಂಹ ರಾಜಕೀಯಕ್ಕೆ ಹೈಜಂಪ್ ಮಾಡುವ ಮುನ್ನಾ ದಿನಗಳಿಂದಲೂ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಮೆಚ್ಚುಗೆಗೆ ಪಾತ್ರವಾಗಿದ್ದು, ಅದೇ ಅಭಿಮಾನ/ಪ್ರೀತಿಯಲ್ಲಿ ಇದೀಗ ಪ್ರತಾಪ್ ಪರ ಪ್ರಚಾರ ಮಾಡಲು ಮೋದಿ ಅವರು ಇದೇ ತಿಂಗಳಾಂತ್ಯ ಮೈಸೂರಿಗೆ ಬರಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಮೈಸೂರಿನಿಂದ ಕಣಕ್ಕಿಳಿದಿರುವ ಪ್ರತಾಪ್ ಸಿಂಹ ಈಗಾಗಲೇ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ಕಾರ್ಯಕೈಗೊಂಡಿದ್ದಾರೆ. ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರ ಬಗ್ಗೆ ಅನೇಕ ಪುಸ್ತಕಗಳನ್ನು ಬರೆದಿರುವ, ಮೋದಿ ಅವರ blue-eyed boy ಎನಿಸಿರುವ ಪ್ರತಾಪ್ ಸಿಂಹ ಪರ ಪ್ರಚಾರ ನಡೆಸಲು ಮೋದಿ ರಾಜ್ಯಕ್ಕೆ ಆಗಮಿಸುವ ಸಾಧ್ಯತೆಗಳು ಹೆಚ್ಚಾಗಿವೆ ಎಂದು ಮೂಲಗಳು ಹೇಳಿವೆ. [ಬಿರುಸಿನ ಮತಯಾಚನೆ ಚಿತ್ರಗಳು]
ಮೈಸೂರು ಸೇರಿದಂತೆ ಎರಡು ಕ್ಷೇತ್ರಗಳಲ್ಲಿ ಮೋದಿ ಅವರ ಸಮಾವೇಶ ನಡೆಯುವ ಸಾಧ್ಯತೆಯಿದೆ. ಈ ಬಗ್ಗೆ ಇಂದು ಬುಧವಾರ ಸ್ಪಷ್ಟ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. (ಇನ್ನು ಮೈಸೂರಿನಲ್ಲೇ ನೆಲೆಸುತ್ತೇನೆ : ಪ್ರತಾಪ್ ಸಿಂಹ)













Click it and Unblock the Notifications